ಟೀಮ್ ಇಂಡಿಯಾದ ಭರವಸೆಯ ಆಟಗಾರ ಇಶಾನ್ ಕಿಶನ್ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಈ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್ ವಿರಾವೇಶದ ಬ್ಯಾಟಿಂಗ್ ನಡೆಸಿದರು. ಈ ಮೂಲಕ ನೆರೆದ ಅಭಿಮಾನಿಗಳಿಗೆ ಇಶಾನ್ ರಂಜಿಸಿದರು. ಮೈಚಳಿ ಬಿಟ್ಟು ಬ್ಯಾಟ್ ಮಾಡಿದ ಇಶಾನ್ ಅಬ್ಬರಿಸಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದರು.
ಇಶಾನ್ ಕಿಶನ್ ದೇಶೀಯ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ಟಿ20 ಸರಣಿಗೆ ಬುಲಾವ ನೀಡಿತು. ಅಲ್ಲದೆ ಟಿ20 ವಿಶ್ವಕಪ್‌ನಲ್ಲೂ ಸ್ಥಾನವನ್ನು ನೀಡಿತು. ಈ ಎರಡೂ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ ಇಶಾನ್ ಕಿಶನ್ ಅವರಿಗೆ ಒಂದು ಅವಕಾಶವೂ ಸಿಕ್ಕಿತು. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಗಾಯದಿಂದ ಬಳಲುತ್ತಿದ್ದರಿಂದ ಇವರ ಬದಲಿಗೆ ಇಶಾನ್ ಕಿಶನ್ ಅವರಿಗೆ ಆಡಲು ಅವಕಾಶವನ್ನು ನೀಡಲಾಯಿತು.

ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಇವರು ಮೊದಲ ಪಂದ್ಯದಲ್ಲಿ 8 ರನ್‌ಗಳಿಸಿ ನಿರಾಸೆ ಅನುಭವಿಸಿದ್ದರು. ಆದರೆ ಎರಡನೇ ಟಿ20 ಪಂದ್ಯದಲ್ಲಿ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿ 76 ರನ್ ಬಾರಿಸಿದರು. ಇವರು ಮೂರನೇ ಟಿ20ಯಲ್ಲೂ ವೇಗವಾಗಿ 28 ರನ್ ಬಾರಿಸಿದ್ದರು. ಇವರಿಗೆ ನಾಲ್ಕನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಲಭಿಸಲಿಲ್ಲ. ಆದರೆ ಕೊನೆಯ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶದಲ್ಲಿ ಅಬ್ಬರಿಸಿದ ಇಶಾನ್ ನ್ಯೂಜಿಲೆಂಡ್ ಬೌಲರ್‌ಗಳನ್ನು ಕಾಡಿದರು.
ಇನಿಂಗ್ಸ್‌ನ 12ನೇ ಓವರ್ ಮಾಡಲು ಇಶ್ ಸೋದಿ ಬಂದರು. ಆಗ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದರು. ಇಶ್ ಸೋದಿ ಮೊದಲ ಎಸೆತವನ್ನು ವೈಡ್ ಎಸೆದರು. ಮೊದಲ ಎಸೆತದಲ್ಲಿ ಇಶಾನ್ ಎಕ್ಸಟ್ರಾ ಕವರ್ ನಲ್ಲಿ ಬೌಂಡರಿ ಬಾರಿಸಿದರೆ, ಎರಡನೇ ಎಸೆತದಲ್ಲಿ ಡೀಪ್ ಫೈನ್ ಲೆಗ್‌ನಲ್ಲಿ ಬೌಂಡರಿ, ಮೂರನೇ ಎಸೆತದಲ್ಲಿ ಥರ್ಡ್ ಮ್ಯಾನ್ ಕಡೆ ಬಾರಿಸಿ ಬೌಂಡರಿ ಪಡೆದರೆ, ನಾಲ್ಕನೇ ಎಸೆತವನ್ನು ವೈಡ್ ಲಾಂಗ್ ಆನ್ ಮೇಲಿನಿಂದ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಐದನೇ ಎಸೆತದಲ್ಲಿ ರಿವರ್ಸ್ ಸ್ವೀಪ್ ಬಾರಿಸಿ ಚೆಂಡನ್ನು ಬೌಂಡರಿ ಗೆರೆಯ ದರ್ಶನ ಮಾಡಿಸಿದರು. ಕೊನೆಯ ಎಸೆತದಲ್ಲಿ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ಇಶಾನ್ ಕಿಶನ್ ಒಂದೇ ಓವರ್‌ನಲ್ಲಿ 28 ರನ್ ಸಿಡಿಸಿ ಆರ್ಭಟಿಸಿದರು.
ಟಿ20 ಕ್ರಿಕೆಟ್‌ನಲ್ಲಿ ಇಶಾನ್ ಕಿಶನ್ ಭರ್ಜರಿ ಕಂ ಬ್ಯಾಕ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ 92 ರನ್ ಬಾರಿಸಿದ್ದರೆ ಮತ್ತೊಂದು ದೊಡ್ಡ ದಾಖಲೆಯನ್ನು ನಿರ್ಮಿಸುವ ಅವಕಾಶವನ್ನು ಹೊಂದಿದ್ದರು. ಇದನ್ನು ಸಹ ಇಶಾನ್ ಪೂರೈಸಿದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಶಾನ್ ಕಿಶನ್ 1 ಸಾವಿರ ರನ್ ಕಲೆ ಹಾಕಿದ ದಾಖಲೆಯನ್ನು ಬರೆದರು.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಇಶಾನ್ ಕಿಶನ್ 43 ಎಸೆತಗಳಲ್ಲಿ 6 ಬೌಂಡರಿ, 10 ಸಿಕ್ಸರ್ ಸಹಾಯದಿಂದ 103 ರನ್ ಬಾರಿಸಿ ಅಬ್ಬರಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 239 ಆಗಿತ್ತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ 10ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ.