Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಮ್ರಾ ಎಸೆತದಲ್ಲಿ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್‌ಗೆ ಗಾಯ

ಭಾರತ ಟಿ20 ವಿಶ್ವಕಪ್‌ನ ಲೀಗ್‌ ಹಂತದ ಎರಡನೇ ಪಂದ್ಯವನ್ನು ಗುರುವಾರ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಚಿಂತೆ ಆರಂಭವಾಗಿದೆ. ಅಭಿಷೇಕ್‌ ಶರ್ಮಾ ಗಾಯಕ್ಕೆ ತುತ್ತಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಗುರುವಾರ ಆಡುವ ಬಗ್ಗೆ ಇನ್ನು ಯಾವುದೇ ಖಚಿತತೆ ಇಲ್ಲ. ಈ ನಡುವೆ ಟೀಮ್ ಇಂಡಿಯಾದ ಇನ್ನೊಬ್ಬ ಸ್ಟಾರ್ ಬ್ಯಾಟರ್‌ ಗಾಯಕ್ಕೆ ತುತ್ತಾಗಿದ್ದಾರೆ.

ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ, ನಮೀಬಿಯಾ ತಂಡಕ್ಕೆ ಸವಾಲು ಎಸೆಯಲಿದೆ. ಈ ಪಂದ್ಯದಲ್ಲಿ ಸುಲಭ ಜಯ ಸಾಧಿಸಿ, ಮುಂದಿನ ಹಂತಕ್ಕೆ ಒಂದು ಕಾಲು ಇಡುವ ಆಸೆಯನ್ನು ಭಾರತ ಹೊಂದಿದೆ. ಅಲ್ಲದೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲು ಪ್ಲ್ಯಾನ್ ಮಾಡಿಕೊಂಡಿದೆ. ನಮೀಬಿಯಾ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಇಶಾನ್‌ ಕಿಶನ್‌ ಸಹ ಗಾಯಕ್ಕೆ ತುತ್ತಾಗಿದ್ದಾರೆ.

Ishan Kishan

ಟೀಮ್ ಇಂಡಿಯಾ ನಮೀಬಿಯಾ ವಿರುದ್ಧದ ಪಂದ್ಯಕ್ಕಾಗಿ ನವದೆಹಲಿಯ ಮೈದಾನದಲ್ಲಿ ಅಭ್ಯಾಸ ನಡೆಸಿತು. ಈ ವೇಳೆ ತಂಡದ ಎಲ್ಲ ಆಟಗಾರರು ಮೈದಾನದಲ್ಲಿ ಬೆವರು ಹರಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಆರಂಭಿಕ ಆಟಗಾರ ಇಶಾನ್ ಕಿಶನ್‌ ಸಹ ಈ ವೇಳೆ ಮೈದಾನದಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದರು. ಇವರು ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ಅವರ ಎಸೆತವನ್ನು ಎದುರಿಸಲು ಹೋಗಿ ಗಾಯಕ್ಕೆ ತುತ್ತಾಗಿದ್ದಾರೆ.

ಆಗಿದ್ದು ಏನು?

ಬುಮ್ರಾ ಎಸೆದ ಚೆಂಡು. ಇಶಾನ್ ಅವರ ಎಡಗಾಲಿನ ಬೆರಳಿಗೆ ತಗುಲಿತು. ಗಾಯದ ನಂತರ ಇಶಾನ್ ತೀವ್ರ ನೋವಿನಿಂದ ಬಳಲುತ್ತಿದ್ದರು ಮತ್ತು ಬ್ಯಾಟ್ ಬೀಸಿ ಮೈದಾನದಲ್ಲಿ ಮಲಗಿದರು. ತಕ್ಷಣ ಫಿಸಿಯೋ ಮೈದಾನಕ್ಕೆ ಬಂದು ಚಿಕಿತ್ಸೆ ನೀಡಿದರು. ಇಶಾನ್‌ ಇದಾದ ಬಳಿಕ ಕೆಲ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಐದು ನಿಮಿಷ ಬ್ಯಾಟಿಂಗ್ ನಡೆಸಿದರು ಎಂದು ತಿಳಿದು ಬಂದಿದೆ. ಅಲ್ಲದೆ ಇವರ ಸಂಪೂರ್ಣ ಆರೋಗ್ಯವಾಗಿದ್ದು, ಪಂದ್ಯಕ್ಕೆ ಲಭ್ಯರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Ishan Kishan

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರು ಸಹ ಗಾಯಕ್ಕೆ ತುತ್ತಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ನಮೀಬಿಯಾ ವಿರುದ್ಧ ಪಂದ್ಯದಲ್ಲಿ ಆಡುವುದು ಡೌಟ್ ಎನ್ನಲಾಗಿದೆ. ಇವರ ಅನುಪಸ್ಥಿತಿಯಲ್ಲಿ ಬ್ಯಾಕ್‌ ಅಪ್‌ ಓಪನರ್ ಆಗಿರುವ ಸಂಜು ಸ್ಯಾಮ್ಸನ್‌ ಕಣಕ್ಕೆ ಇಳಿಯಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸಂಜು ಹಾಗೂ ಇಶಾನ್‌ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.

ಟಿ20 ವಿಶ್ವಕಪ್‌ಗೆ ಪ್ರಕಟಿತ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ರಿಂಕು ಸಿಂಗ್‌,

Story first published: Wednesday, February 11, 2026, 23:44 [IST]
Other articles published on Feb 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+