ತಂಡದಲ್ಲಿ ಸ್ಥಾನ ಪಡೆಯಲು ವಿಕೆಟ್ ಕೀಪರ್ ನ್ಯೂ ಅವತಾರ: ಕೌಂಟಿಯಲ್ಲಿ ಕಂಡ ವಿಡಿಯೋ ವೈರಲ್
ಟೀಮ್ ಇಂಡಿಯಾದಲ್ಲಿ ಈಗ ಪ್ರತಿಭಾನ್ವಿತ ಆಟಗಾರರ ಬಳಗವೇ ಇದೆ. ಒಂದು ಸ್ಥಾನ ಖಾಲಿ ಆದ್ರೂ ಆ ಸ್ಥಾನದ ಮೇಲೆ ಹಲವು ಆಟಗಾರರು ಕಣ್ಣು ನೆಟ್ಟಿರುತ್ತಾರೆ. ಇಂಗ್ಲೆಂಡ್‌ನಲ್ಲಿ ಸದ್ಯ ಟೀಮ್ ಇಂಡಿಯಾ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಇತ್ತ ಭಾರತದ ಭರವಸೆಯ ಬ್ಯಾಟರ್ ಕಂ ಕೀಪರ್, ಭಾರತ ತಂಡದಲ್ಲಿ ಸ್ಥಾನ ಪಡೆಯೋಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಕೌಂಟಿಯಲ್ಲಿ ಇವರು ಮಾಡಿದ ಆ ಒಂದು ಕೆಲಸ ಈಗ ಸಖತ್ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾದ ಪರ ಈಗಾಗಲೇ ಅಬ್ಬರಿಸಿರುವ ಆಟಗಾರ ಇಶಾನ್ ಕಿಶನ್. ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಭಾರತದ ಪರ ಮೂರು ಫಾರ್ಮೆಟ್‌ಗಳನ್ನು ಆಡಿದ್ದಾರೆ. ಆದರೆ ಇವರು ಮಾಡಿದ ಆ ಒಂದು ತಪ್ಪಿನಿಂದ ಕಳೆದ ವರ್ಷ ಇವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಗುಳಿದಿದ್ದರು. ಆದರೆ ದೇಶಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮತ್ತೆ ಬಿಸಿಸಿಐ ಗಮನ ಸೆಳೆದಿದ್ದಾರೆ. ಆದರೆ ಇವರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಾನ ಲಭಿಸಿರಲಿಲ್ಲ. ಆದರೆ ಈಗ ಕೌಂಟಿಯಲ್ಲಿ ಅಬ್ಬರಿಸುತ್ತಿದ್ದಾರೆ.

ಇಶಾನ್ ಕಿಶನ್ ಸದ್ಯ ನಾಟಿಂಗ್‌ಹ್ಯಾಮ್‌ಶೈರ್ ಪರ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಇವರು ಈಗಾಗಲೇ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಆದರೆ ಈಗ ವೈರಲ್ ಆಗುತ್ತಿರುವ ವೈರಲ್ ವಿಡಿಯೋ ಇವರ ಬ್ಯಾಟಿಂಗ್‌ನದ್ದಲ್ಲ. ಇಶಾನ್ ಕಿಶನ್ ಇಂಗ್ಲೆಂಡ್ ನೆಲದಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಹೊಸ ಅವತಾರ ಪ್ರದರ್ಶಿಸಿದ್ದಾರೆ.
ವಿಕೆಟ್ ಕೀಪರ್ ನ್ಯೂ ಅವತಾರ
ಇಶಾನ್ ಕಿಶನ್ ಕೌಂಟಿ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಗಮನ ಸೆಳೆದರು. ಟೀಮ್ ಇಂಡಿಯಾದ ಐಕಾನಿಕ್ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರ ರೀತಿ ಆಕ್ಷನ್‌ನಲ್ಲಿ ಬೌಲಿಂಗ್ ಮಾಡಿದರು. ಆದರೆ ಇಶಾನ್ ತಮ್ಮ ಸ್ಪಿನ್ ಬೌಲಿಂಗ್ ವೇಳೆ ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ಎರಡನ್ನೂ ಮಾಡಿ ಗಮನ ಸೆಳೆದರು. ಮೊದಲು ಮೂರು ಎಸೆತಗಳನ್ನು ಆಫ್ ಸ್ಪಿನ್ ಮಾಡಿದ ಇಶಾನ್, ಬಳಿಕ ರೌಂಡ್ ದಿ ವಿಕೆಟ್ ಮಾಡಿ ಲೆಗ್ ಸ್ಪಿನ್ ಮಾಡಿದರು. ಆದರೆ ಇವರಿಗೆ ಯಾವುದೇ ವಿಕೆಟ್ ಲಭಿಸಲಿಲ್ಲ. ಆದರೆ ಬೌಲಿಂಗ್ ಮಾಡಿ ಗಮನ ಸೆಳೆದರು.
ಉತ್ತಮ ಬ್ಯಾಟಿಂಗ್
ಕೌಂಟಿ ಕ್ರಿಕೆಟ್‌ಗೆ ಇಶಾನ್ ಕಿಶನ್ ಅರ್ಧಶತಕ ಬಾರಿಸಿ ಪದಾರ್ಪಣೆ ಮಾಡಿದ್ದರು. ತಾವಾಡಿದ ಮೊದಲ ಪಂದ್ಯದಲ್ಲಿ ಇಶಾನ್ 77 ರನ್ ಬಾರಿಸಿದರು. ಇದರಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ. ಇನ್ನು ಮತ್ತೊಂದು ಪಂದ್ಯದಲ್ಲಿ ಇಶಾನ್ 98 ಎಸೆತಗಳಲ್ಲಿ 87 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.
ಭಾರತದ 26 ವರ್ಷದ ಇಶಾನ್ ಕಿಶನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಜುಲೈ 2023ರಲ್ಲಿ ಆಡಿದ್ದರು. ಬಳಿಕ ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದರು. ದೇಶೀಯ ಕ್ರಿಕೆಟ್‌ನಲ್ಲಿ ಕ್ಲಾಸಿಕ್ ಸ್ಥಿರ ಪ್ರದರ್ಶನ ನೀಡಿದ ಇಶಾನ್ ಅಬ್ಬರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications