RCB vs SRH: ಇಶಾನ್ ಅಬ್ಬರದ ಆಟ; ಆರ್‌ಸಿಬಿಗೆ ಸವಾಲಿನ ಮೊತ್ತದ ಗುರಿ ನೀಡಿದ ಸನ್
ಭರವಸೆಯ ಬ್ಯಾಟರ್ ಇಶಾನ್ ಕಿಶನ್ ಬಾರಿಸಿದ ಅರ್ಧಶತಕದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ 18ನೇ ಆವೃತ್ತಿಯ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲಿನ ಗುರಿಯನ್ನು ನೀಡಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವುದು ಆರ್‌ಸಿಬಿ ತಂಡಕ್ಕೆ ಮಹತ್ವದಾಗಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಜೋಡಿ ಅಬ್ಬರದ ಆರಂಭವನ್ನು ನೀಡಿತು. ಈ ಜೋಡಿ ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿತು. ಈ ಜೋಡಿ ಆಟಕ್ಕೆ ಬ್ರೇಕ್ ಹಾಕುವಲ್ಲಿ ಆರ್‌ಸಿಬಿ ವಿಫಲವಾಯಿತು. ಅಭಿಷೇಕ್, ಹೆಡ್ ಮೊದಲ ವಿಕೆಟ್‌ಗೆ 54 ರನ್ ಜೊತೆಯಟವನ್ನು ನೀಡಿತು. ಅಭಿಷೇಕ್ ಶರ್ಮಾ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದರೆ, ಟ್ರಾವಿಸ್ ಹೆಡ್ 17 ರನ್‌ಗಳಿಗೆ ಔಟ್ ಆದರು.

ಮೂರನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಹ್ಯಾನ್ರಿಕ್ ಕ್ಲಾಸೇನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 27 ಎಸೆತಗಳಲ್ಲಿ 48 ರನ್ ಸಿಡಿಸಿತು. ಹ್ಯಾನ್ರಿಕ್ ಕ್ಲಾಸೇನ್ 24 ರನ್‌ಗಳಿಗೆ ಔಟ್ ಆದರು. ನಾಲ್ಕನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಅನಿಕೇತ್ ವರ್ಮಾ ಜೋಡಿ ಸಹ ಕೇವಲ 17 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟವನ್ನು ನೀಡಿತು. ಅನಿಕೇತ್ ವರ್ಮಾ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 26 ರನ್ ಬಾರಿಸಿದರು.
ಇಶಾನ್ 94
ಕೆಳ ಮಧ್ಯಮ ಕ್ರಮಾಂಕದಲ್ಲಿ ಅಭಿನವ್ ಮನೋಹರ್ 12 ಹಾಗೂ ಪ್ಯಾಟ್ ಕಮಿನ್ಸ್ ಅಜೇಯ 13 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಇಶಾನ್ ಕಿಶನ್ ಅಬ್ಬರಿಸಿದರು. ಇವರು ತಮ್ಮ ನೈಜ್ಯ ಆಟವನ್ನು ಆಡಿ ತಂಡಕ್ಕೆ ನೆರವಾದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ವಿಫಲರಾದರು. ಇವರು 48 ಎಸೆತಗಳಲ್ಲಿ 7 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 94 ರನ್ ಸಿಡಿಸಿತು. ಅಂತಿಮವಾಗಿ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 231 ರನ್ ಸಿಡಿಸಿತು.

ಆರ್‌ಸಿಬಿ ತಂಡದ ಪರ ರೋಮಾರಿಯೊ ಶೆಫರ್ಡ್ 2, ಭುವನೇಶ್ವರ್ ಕುಮಾರ್, ಲುಂಗಿ ಎನ್‌ಗಿಡಿ, ಕೃನಾಲ್ ಪಾಂಡ್ಯ, ಸುಯೇಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications