Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಶಾಂತ್ ಶರ್ಮಾ ಸೇರಿ 29 ಮಂದಿ ಅರ್ಜುನ ಪ್ರಶಸ್ತಿಗೆ ಶಿಫಾರಸು

Ishant Sharma, Archer Atanu Das Among 29 Recommended For Arjuna Award

ನವದೆಹಲಿ, ಆಗಸ್ಟ್ 18: ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಸೇರಿ ಒಟ್ಟು 29 ಮಂದಿಯ ಹೆಸರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸಾಗಿದೆ. ಕ್ರೀಡಾ ಸಚಿವಾಲಯದ ಆಯ್ಕೆ ಸಮಿತಿ ಈ ಬಾರಿ 29 ಮಂದಿಯ ಬಲಿಷ್ಠ ಪಟ್ಟಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.

ಈ ವರ್ಷದ ಅರ್ಜುನಕ್ಕೆ ಶಿಫಾರಸಾಗಿರುವ ಪಟ್ಟಿಯಲ್ಲಿ ಆರ್ಚರ್ ಅತನು ದಾಸ್, ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಠಾಕೂರ್, ಕ್ರಿಕೆಟರ್ ದೀಪಕ್ ಹೂಡಾ ಮತ್ತು ಟೆನಿಸ್ ಆಟಗಾರ ದಿವಿಜ್ ಶರಣ್ ಹೆಸರುಗಳು ಸೇರಿವೆ ಎಂದು ಅಧಿಕೃತ ಮೂಲಕ ಪಿಟಿಐಗೆ ತಿಳಿಸಿದೆ.

31ರ ಹರೆಯದ ಶ್ರೀಶಾಂತ್ 97 ಟೆಸ್ಟ್ ಪಂದ್ಯಗಳಲ್ಲಿ 297 ವಿಕೆಟ್‌ಗಳು, 80 ಏಕದಿನ ಪಂದ್ಯಗಳಲ್ಲಿ 115 ವಿಕೆಟ್‌ಗಳು, 14 ಟಿ20ಐ ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟಿಗೆ 400ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಕೆಟ್‌ಗಳ ದಾಖಲೆ ಇಶಾಂತ್ ಹೆಸರಲ್ಲಿದೆ.

ಬಲ್ಲ ಮಾಹಿತಿಯ ಪ್ರಕಾರ ಒಲಿಂಪಿಕ್ ಕಂಚಿನ ಪದಕ ವಿಜೇತ ರಸ್ಲರ್ ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಕೂಡ ಪ್ರಶಸ್ತಿಗಾಗಿ ಪರಿಗಣಿಸಲ್ಪಡಲಿದ್ದಾರೆ. ಆದರೆ ಅಂತಿಮ ನಿರ್ಧಾರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಅವಲಂಬಿಸಿದೆ.

Story first published: Wednesday, August 19, 2020, 10:05 [IST]
Other articles published on Aug 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+