ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ನಲ್ಲಿ ಧೋನಿ ಪಡೆಗೆ ಐತಿಹಾಸಿಕ ಜಯ

By Mahesh

ಲಾರ್ಡ್ಸ್, ಜು.21: ಅತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಪ್ರವಾಸಿ ಭಾರತ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಗೆಲ್ಲಲು ಬೇಕಿದ್ದ 319ರನ್ ಹಿಂದೆ ಬಿದ್ದ ಕುಕ್ ಪಡೆಗೆ ಇಶಾಂತ್ ಶರ್ಮ ಅಡ್ಡಗಾಲು ಹಾಕಿದರು. ವೈಯಕ್ತಿಕವಾಗಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಇಶಾಂತ್ 7 ವಿಕೆಟ್ ಕಿತ್ತು ಅಂಗ್ಲ ಪಡೆಯನ್ನು 223 ಸ್ಕೋರಿಗೆ ನಿಯಂತ್ರಿಸಿ ಭಾರತಕ್ಕೆ ಜಯ ತಂದಿತ್ತರು.

1986ರಲ್ಲಿ ಕಪಿಲ್ ದೇವ್ ಪಡೆ ಇದೇ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಜಯ ದಾಖಲಿಸಿತ್ತು ಆನಂತರ ಆಂಗ್ಲರ ವಿರುದ್ಧ ಭಾರತಕ್ಕೆ ಗೆಲುವು ಮರಿಚಿಕೆಯಾಗಿತ್ತು. ಈಗ ಈ ಸಾಧನೆಯನ್ನು ಎಂಎಸ್ ಧೋನಿ ಪಡೆ ಸಾಧಿಸಿದೆ.

ಸ್ಕೋರ್ ಕಾರ್ಡ್ ನೋಡಿ

Day 5: 2nd Test India vs England

ಲಾರ್ಡ್ಸ್ ಟೆಸ್ಟ್ ನಲ್ಲಿ ಭಾರತ ನೀಡಿದ್ದ 319ರನ್ ಗುರಿ ಮುಟ್ಟಲಾಗದೆ ಇಂಗ್ಲೆಂಡ್ ಪಡೆ 223ರನ್ ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ನಂತರ ವಿಕೆಟ್ ಕಿತ್ತ ಇಶಾಂತ್ ಶರ್ಮ (74/7) ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಇಂಗ್ಲೆಂಡ್ ಪರ ಜೋ ರೂಟ್ 66, ಮೊಯಿನ್ ಅಲಿ 39 ರನ್ ಗಳಿಸಿ ಪ್ರತಿರೋಧ ಒಡ್ಡಿದರು. ಇಂಗ್ಲೆಂಡ್ ಸ್ಕೋರ್ 173 ರನ್ ಆಗಿದ್ದಾಗ ಮೊಯಿನ್ ಅಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಇಂಗ್ಲೆಂಡ್ ಅಂತ್ಯ ಆರಂಭವಾಯಿತು.

ಸಂಕ್ಷಿಪ್ತ ಸ್ಕೋರ್
ಭಾರತ - 295 ಮತ್ತು 342 ರನ್
ಇಂಗ್ಲೆಂಡ್ - 319 ಹಾಗೂ 223 (88.2 ಓವರ್)

ಮೊದಲ ಇನ್ನಿಂಗ್ಸ್ ನಲ್ಲಿ ಅಜಿಂಕ್ಯ ರಹಾನೆ(103) ಶತಕ, ಜೇಮ್ಸ್ ಆಂಡರ್ಸನ್ 4 ವಿಕೆಟ್ ಕಿತ್ತಿದ್ದು ಗಮನಾರ್ಹವಾಗಿತ್ತು. ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ನಲ್ಲಿ ಬ್ಯಾಲೆನ್ಸ್ 110 ರನ್ , ಪ್ಲಾಂಕೆಟ್ 55 ಔಟಾಗದೆ ಗಳಿಸಿದ ಮೊತ್ತ ಇಂಗ್ಲೆಂಡ್ ಆಸೆ ಜೀವಂತ ಇರಿಸಿತ್ತು.

ಎರಡನೇ ಇನ್ನಿಂಗ್ಸ್ ನಲ್ಲಿ ಎಂ ವಿಜಯ್ ತಾಳ್ಮೆಯ ಆಟವಾಡಿ 95 ರನ್ ಗಳಿಸಿದ್ದು, ಪೂಜಾರಾ 43, ಜಡೇಜ ಮೊಟ್ಟ ಮೊದಲ ಅರ್ಧಶತಕ 68 ರನ್, ಭುವನೇಶ್ವರ್ ಕುಮಾರ್ ಸತತ ಅರ್ಧ ಶತಕ 52 ಬ್ಯಾಟಿಂಗ್ ಬಲ ಪ್ರದರ್ಶಿಸಿದರೆ, ಇಶಾಂತ್ ಶರ್ಮ 23 ಓವರ್ ಗಳಲ್ಲಿ 6 ಮೇಡನ್ ನೀಡಿ 74 ರನ್ನಿಗೆ 7 ವಿಕೆಟ್ ಕಿತ್ತು ಭಾರತಕ್ಕೆ ಐತಿಹಾಸಿಕ ಜಯ ತಂದಿತ್ತರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X