ಬರ್ಮಿಂಗ್ ಹ್ಯಾಮ್, ಆಗಸ್ಟ್ 4: ಎಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಮತ್ತು ಭಾರತ ಪಂದ್ಯದ ವೇಳೆ ಅನುಚಿತ ವರ್ತನೆ ಮೂಲಕ ನೀತಿ ಉಲ್ಲಂಘಿಸಿದ ಕಾರಣಕ್ಕಾಗಿ ಭಾರತದ ವೇಗಿ ಇಶಾಂತ್ ಶರ್ಮಾಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಿದೆ.
ಭಾರತ- ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಅಂಕಿ ಅಂಶ
ಶನಿವಾರ (ಆ.4) ನಡೆದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಆಟಗಾರ ದಾವಿದ್ ಮಲಾನ್ ಅವರು 20 ರನ್ ನೊಂದಿಗೆ 26.2ನೇ ಓವರ್ ನಲ್ಲಿ ಇಶಾಂತ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಶಾಂತ್ ಸಂಭ್ರಮಾಚರಣೆ ಕೊಂಚ ಎಲ್ಲೆ ಮೀರಿದಂತಿತ್ತು. ಎದುರಾಳಿ ಆಟಗಾರ ಸಿಟ್ಟಿಗೊಳಗಾಗುವ ರೀತಿಯಲ್ಲಿ ಇಶಾಂತ್ ವರ್ತಿಸಿದ್ದರು. ಇಶಾಂತ್ ಈ ವರ್ತನೆ ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.1.7ನ್ನು ಉಲ್ಲಂಘಿಸಿತ್ತು.
https://kannada.mykhel.com/cricket/india-england-first-test-statistics-005770.html'ಎದುರಾಳಿ ಬ್ಯಾಟ್ಸ್ಮನ್ ಔಟಾದಾಗ ಬೌಲರ್ ತನ್ನ ಭಾಷೆ, ವರ್ತನೆ ಅಥವಾ ಭಂಗಿಯ ಮೂಲಕ ಎದುರಾಳಿಯನ್ನು ಸಿಟ್ಟಿಗೆ ಪ್ರೇರೇಪಿಸುವಂತಿದ್ದರೆ ಅದು ಐಸಿಸಿ ನಿಯಮ ಉಲ್ಲಂಘನೆಯಾಗುತ್ತದೆ. ಇಶಾಂತ್ ಅವರು ಮಲಾನ್ ವಿಕೆಟ್ ಪತನವಾದಾಗ ಇದೇ ರೀತಿಯ ವರ್ತನೆ ತೋರಿದ್ದರು. ಅದಕ್ಕಾಗಿ ದಂಡ ವಿಧಿಸಲಾಗಿದೆ' ಎಂದು ಐಸಿಸಿ ತಿಳಿಸಿದೆ.
BREAKING: Ishant Sharma has been fined 15 per cent of his match fee and has received one demerit point after being found guilty of a Level 1 breach of the ICC Code of Conduct.#ENGvIND READ 👇https://t.co/cdqrUd8Q79 pic.twitter.com/eJmJ0p9bDu
— ICC (@ICC) August 4, 2018
ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಸವಾಲು ಸ್ವೀಕರಿಸಿರುವ ಭಾರತ, ಶನಿವಾರ (ಆ.4) ಮುಕ್ತಾಯಗೊಂಡ ಮೊದಲ ಟೆಸ್ಟ್ ನಲ್ಲಿ (ಎರಡೂ ಇನ್ನಿಂಗ್ಸ್ ಸೇರಿಸಿ) 274+162 ರನ್ ಪೇರಿಸಿತ್ತು. ಇಂಗ್ಲೆಂಡ್ ತಂಡ 287+180 ರನ್ ನೊಂದಿಗೆ ಭಾರತಕ್ಕೆ ಸೋಲಿನ ಕಹಿಯುಣಿಸಿತ್ತು.