ಅಜಿಂಕ್ಯ ರಹಾನೆಯನ್ನು ಬೌಲರ್‌ಗಳ ನಾಯಕ ಎಂದು ಕೊಂಡಾಡಿದ ಇಶಾಂತ್ ಶರ್ಮಾ

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಜವಾಬ್ಧಾರಿ ಅಜಿಂಕ್ಯ ರಹಾನೆ ಹೆಗಲೇರಿದೆ. ಈ ಹಿನ್ನೆಲೆಯಲ್ಲಿ ಇಶಾಂತ್ ಶರ್ಮಾ ಪ್ರತಿಕ್ರಿಯಿಸಿದ್ದು ಅಜಿಂಕ್ಯ ರಹಾನೆ ನಾಯಕತ್ವವನ್ನು ಪ್ರಶಂಸಿದ್ದಾರೆ. ಅಜಿಂಕ್ಯ ರಹಾನೆ ಓರ್ವ ಬೌಲರ್‌ಗಳ ನಾಯಕ ಎಂದು ಬಣ್ಣಿಸಿದ್ದಾರೆ.
ಅಜಿಂಕ್ಯ ರಹಾನೆ ಯಾವಾಗಲೂ ಆತ್ಮವಿಶ್ವಾಸವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಆತನೋರ್ವ ಬೌಲರ್‌ಗಳ ನಾಯಕ. ನಾವಿಬ್ಬರು ಸಾಕಷ್ಟು ಸಂದರ್ಭಗಳಲ್ಲಿ ಜೊತೆಯಾಗಿ ಆಡಿದ್ದೇವೆ. ಯಾವಾಗೆಲ್ಲ ವಿರಾಟ್ ಕೊಹ್ಲಿ ಅಲಭ್ಯರಾಗುತ್ತಿದ್ದರೋ ಆಗ ಜವಾಬ್ಧಾರಿ ಹೊತ್ತುಕ್ಕೊಳ್ಳುತ್ತಿದ್ದ ರಹಾನೆ ಯಾವ ರೀತಿ ಫೀಲ್ಡಿಂಗ್ ಬೇಕು? ಬೌಲಿಂಗ್ ಮಾಡಲು ಬಯಸುತ್ತೀಯಾ ಎಂದು ನನ್ನಲ್ಲಿ ಕೇಳುತ್ತಿದ್ದರು ಎಂದು ರಹಾನೆ ನಾಯಕತ್ವದ ಬಗ್ಗೆ ವಿವರಿಸಿದ್ದಾರೆ.
ಆತ ಬೌಲರ್‌ಗಳ ನಾಯಕ ಯಾಕೆಂದರೆ ಆತ ಯಾವತ್ತಿಗೂ ಈ ರೀತಿ ಮಾಡು ಆ ರೀತಿ ಬೌಲಿಂಗ್ ಮಾಡು ಎನ್ನವ ರೀತಿಯ ನಾಯಕನಲ್ಲ ಎಂದು ರಹಾನೆ ನಾಯಕನಾಗಿ ಯಾವ ರೀತಿ ಅಂಗಳದಲ್ಲಿ ಇರುತ್ತಾರೆ ಎಂದು ವಿವರಿಸಿಸದ್ದಾರೆ. ಅಪ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿದ್ದಾಗ ಆ ತಂಡದಲ್ಲಿ ಇಶಾಂತ್ ಶರ್ಮಾ ಸದಸ್ಯರಾಗಿದ್ದರು.
ಇನ್ನು ಇದೇ ಸಂದರ್ಭದಲ್ಲಿ ಇಶಾಂತ್ ಶರ್ಮಾ ನಾಯಕನಾಗಿ ವಿರಾಟ್ ಕೊಹ್ಲಿ ಅಂಗಳದಲ್ಲಿ ವ್ಯಕ್ತಪಡಿಸುವ ಶಕ್ತಿಯನ್ನು ಸರಿದೂಗಿಸಲು ರಹಾನೆಗೆ ಸಾಧ್ಯವಾಗದಿರಬಹುದು ಆದರೆ ರಹಾನೆಯ ಶಾಂತಚಿತ್ತ ವ್ಯಕ್ತಿತ್ವ ತಂಡದ ಒತ್ತಡದ ಪರಿಸ್ಥಿತಿಗೆ ಅನುಕೂಲವಾಗಲಿದೆ ಎಂದು ಇಶಾಂತ್ ಶರ್ಮ ಅಭಿಪ್ರಾಯ ಪಟ್ಟಿದ್ದಾರೆ.
ಇಶಾಂತ್ ಶರ್ಮಾ ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡ ಕಾರಣ ಆಸ್ಟ್ರೇಲಿಯಾ ವಿರುದ್ಧದ ಪ್ರವಾಸವನ್ನು ತಪ್ಪಿಸಿಕೊಂಡಿದ್ದಾರೆ. ತಂಡಕ್ಕೆ ಸೇರ್ಪಡೆಗೊಳಿಸುವ ಹಿನ್ನೆಲೆಯಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಶರ್ಮಾ ಬೆಂಗಳೂರಿ ಎನ್‌ಸಿಎನಲ್ಲಿ ಒಳಗಾದರಾದರೂ ಫಿಟ್‌ನೆಸ್ ಸಾಭಿತುಪಡಿಸುವಲ್ಲಿ ವಿಫಲರಾಗಿ ಆಸಿಸ್ ಪ್ರವಾಸದಿಂದ ಹೊರಗುಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications