36 ವರ್ಷದ ವೇಗಿಯ ಮುಖದಲ್ಲಿ ಮಂದಹಾಸ: ತಂಡದಲ್ಲಿ ಸ್ಥಾನ
ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಐದು ಪಂದ್ಯಗಳಲ್ಲಿ ಮುಖಾಮುಖಿ ಆಗಲಿವೆ. ಬಾರ್ಡರ್ ಗವಾಸ್ಕರ್ ಸರಣಿಯ ಐದನೇ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದೆ. ಭಾರತ ತಂಡ ಅಭ್ಯಾಸ ನಡೆಸಿದೆ. ಈ ಸರಣಿಗೆ ಸಂಬಂಧಿಸಿದಂತೆ ಹಲವು ದೊಡ್ಡ ದೊಡ್ಡ ಹೇಳಿಕೆಗಳು ಬರುತ್ತಿವೆ. ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಒಬ್ಬರು ಈಗ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಿದ್ದರೆ, ಆ ಬೌಲರ್ ಯಾರು? ಅವರು ಪ್ರತಿನಿಧಿಸಿರುವ ತಂಡ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಪ್ಲೇಯರ್ ಈಗ ಬಹು ದಿನಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ. ಅವರ ವಯಸ್ಸು 36. ಆದರೆ ಇವರನ್ನು ಸದ್ಯ ರಾಜ್ಯ ತಂಡವೂ ಗಮನಿಸುತ್ತದೋ ಇಲ್ಲವೋ ಎಂಬ ಅನುಮಾನ ಮುಡಿತ್ತು. ಆದರೆ ದೆಹಲಿ ತಂಡ ಅನುಭವಿ, ಅನುಭವಕ್ಕೆ ಮಣೆ ಹಾಕಿ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಗೆ ತಂಡದಲ್ಲಿ ಸ್ಥಾನ ನೀಡಿದೆ. ನವೆಂಬರ್ 2021 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ ಇಶಾಂತ್ ಶರ್ಮಾ, ಟೀಮ್ ಇಂಡಿಯಾ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದೆ. ಇದೇ ಕಾರಣಕ್ಕೆ ಅವರು ದೇಶಿಯ ಕ್ರಿಕೆಟ್‌ನಲ್ಲಿ ಹುರುಪಿನಿಂದ ಆಡುತ್ತಿದ್ದಾರೆ.

ಅನುಭವಿ ಬೌಲರ್‌ಗೆ ಮಣೆ
ಸೈಯದ್ ಮುಷ್ತಾಕ್ ಅಲಿ ಇಶಾಂತ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಆಯ್ಕೆಯಾಗಿರುವ 24 ಸದಸ್ಯರ ದೆಹಲಿ ತಂಡದಲ್ಲಿ ಇಶಾಂತ್ ಶರ್ಮಾ ಸ್ಥಾನ ಲಭಿಸಿದೆ. ದೆಹಲಿ ತಂಡದ ನಾಯಕತ್ವವನ್ನು ಸ್ಟಾರ್ ಬ್ಯಾಟ್ಸ್‌ಮನ್ ಆಯುಷ್ ಬಡೋನಿಗೆ ನೀಡಲಾಗಿದೆ.
ಅನುಭವಿ ಆಟಗಾರರಾದ ಯಶ್ ಧುಲ್ ಮತ್ತು ಅನುಜ್ ರಾವತ್ ತಂಡದ ಭಾಗವಾಗಿದ್ದಾರೆ. ಇವರಲ್ಲದೆ ಇನ್ನು ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಓವರ್ ಒಂದರಲ್ಲಿ 6 ಸಿಕ್ಸರ್ ಸಿಡಿಸಿದ್ದ ಪ್ರಿಯಾಂಶ್ ಆರ್ಯ ಅವರಿಗೆ ಸ್ಥಾನ ಲಭಿಸಿದೆ.

ಟೀಮ್ ಇಂಡಿಯಾದ ಪರ ತಂಡದಲ್ಲಿ ಸ್ಥಾನ ಪಡೆದಿರುವ ಡೆಲ್ಲಿ ತಂಡದ ಹರ್ಷಿತ್ ರಾಣಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನವೆಂಬರ್ 22 ರಂದು ಪರ್ತ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್-11 ರಲ್ಲಿ ರಾಣಾ ಮೂರನೇ ವೇಗದ ಬೌಲರ್ ಆಗುವ ರೇಸ್‌ನಲ್ಲಿದ್ದಾರೆ. ಇವರು 140 ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡಬಲ್ಲ ಬೌಲರ್.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ದೆಹಲಿ ತಂಡ: ಪ್ರಿಯಾಂಶ್ ಆರ್ಯ, ಅನುಜ್ ರಾವತ್, ಆಯುಷ್ ಬಡೋನಿ (ನಾಯಕ), ಹಿಮ್ಮತ್ ಸಿಂಗ್, ಮಯಾಂಕ್ ಗುಸೇನ್, ಮಯಾಂಕ್ ಯಾದವ್, ಜಾಂಟಿ ಸಿಧು, ಇಶಾಂತ್ ಶರ್ಮಾ, ಯಶ್ ಧುಲ್, ಸಿಮರ್ಜೀತ್ ಸಿಂಗ್, ವೈಭವ್ ಕಂಡ್ಪಾಲ್, ಹರ್ಷ ತ್ಯಾ, ಹರ್ಷ್ ತ್ಯಾ ಹಿಮಾಂಶು ಚೌಹಾಣ್, ವಂಶ್ ಬೇಡಿ, ಆರ್ಯನ್ ರಾಣಾ, ಅಖಿಲ್ ಚೌಧರಿ, ಧ್ರುವ ಕೌಶಿಕ್, ಸಾರ್ಥಕ್ ರಂಜನ್, ಸುಯಶ್ ಶರ್ಮಾ, ದಿಗ್ವೇಶ್ ರಾಠಿ, ಆಯುಷ್ ಸಿಂಗ್, ಪ್ರಿನ್ಸ್ ಚೌಧರಿ, ಪ್ರಣವ್ ರಣವಂಶಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications