
ಚೆನ್ನೈ, ನವೆಂಬರ್ 3: ಜವಾಹರ ಲಾಲ್ ನೆಹರೂ ಸ್ಟೇಡಿಯಂ ಚೆನ್ನೈಯಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಚೆನ್ನೈಯಿನ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ಮುಖಾಮುಖಿಯಲ್ಲಿ ಮುಂಬೈ 1-0ಯ ಗೆಲುವನ್ನಾಚರಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಲಭಿಸಿದ ಗೋಲ್ ಮುಂಬೈ ಗೆಲುವನ್ನು ಬರೆಯಿತು.
ಪಂದ್ಯಾರಂಭಗೊಂಡ 20ನೇ ನಿಮಿಷದಲ್ಲಿ ಮುಂಬೈಯ ಮೊಡೌ ಸೌಗೌ ಅವರು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಅನಂತರ ಇತ್ತಂಡಗಳು ಗೋಲ್‌ಗಾಗಿ ಕೊಸರಾಡಿದವಾದರೂ ಗೋಲ್ ದಾಖಲಾಗಲಿಲ್ಲ. ಇತ್ತಂಡಗಳು ತಲಾ ಮೂರು ಬಾರಿ ಆಟಗಾರರನ್ನು ಬದಲಿಸಿಕೊಂಡವು.
ಈ ಪಂದ್ಯದ ಬಳಿಕ ಅಂಕಟ್ಟಿಯಲ್ಲಿ ಚೆನ್ನೈಯಿನ್ ಕೇವಲ ಒಂದೇ ಪಂದ್ಯ ಗೆದ್ದಿರುವ ಕಾರಣ ತಳದಲ್ಲಿದೆ (10ನೇ). ಆರು ಪಂದ್ಯಗಳಲ್ಲಿ ಮೂರು ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಮುಂಬೈ 5ನೇ ಸ್ಥಾನದಲ್ಲಿದೆ.