Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್‌ 2019: ಒತ್ತಡಗಳ ನಡುವೆ ಜೆಮ್ಷೆಡ್ಪುರ-ಮುಂಬೈ ಸೆಣಸಾಟ

ISL 2019: Pressure all around as Jamshedpur face Mumbai

ಜೆಮ್ಷೆಡ್ಪುರ ಫೆಬ್ರವರಿ 7: ಶುಕ್ರವಾರ ಜೆಮ್ಷೆಡ್ಪುರದ ಜೆಆರ್‌ಡಿ ಟಾಟಾ ಕ್ರೀಡಾ ಸಂಕೀರ್ಣದಲ್ಲಿ ನಡೆಯಲ್ಲಿರುವ ಮುಂಬೈ ಸಿಟಿ ಎಫ್ಸಿ ವಿರುದ್ಧದ ಪಂದ್ಯದಲ್ಲಿ ಟಾಟಾ ಪಡೆ ತನ್ನೆಲ್ಲ ಶ್ರಮವನ್ನು ಮುಡುಪಾಗಿಡಬೇಕಾಗುತ್ತದೆ. ಏಕೆಂದರೆ ಗೆದ್ದರೆ ಮಾತ್ರ ಮುನ್ನಡೆಗೆ ಅವಕಾಶ.

ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್ ತಲಪುವ ಹಂತ ಅಂತಿಮ ಕ್ಷಣದಲ್ಲಿದ್ದು, ಜೆಮ್ಷೆಡ್ಪುರ ತಂಡಕ್ಕೆ ಜಯವಲ್ಲದೆ ಬೇರೇನೂ ತೃಪ್ತಿ ನೀಡದು. 20 ಅಂಕಗಳನ್ನು ಗಳಿಸಿರುವ ಜೆಮ್ಷೆಡ್ಪುರ ತಂಡ ಈಗ ಐದನೇ ಸ್ಥಾನದಲ್ಲಿದ್ದು, ಜಯ ಗಳಿಸಿದರೆ ನಾಲ್ಕನೇ ಸ್ಥಾನಕ್ಕೆ ತಲುಪಲಿದೆ. ಪ್ಲೇ ಆಫ್ ಹಂತ ತಲುಪಬೇಕಾದರೆ ಜೆಮ್ಷೆಡ್ಪುರ ಇಲ್ಲಿ ಜಯ ಗಳಿಸಲೇಬೇಕು.

1
1042957

'ಕಳೆದ ಮೂರು ಪಂದ್ಯಗಳಲ್ಲಿ ನಾವು, ಎಟಿಕೆ ವಿರುದ್ಧ 2-1 ಗೋಲಿನಿಂದಿ ಗೆದ್ದಿರುವೆವು, ಗೋವಾ ವಿರುದ್ಧ ಡ್ರಾ ಕಂಡೆವು, ನಂತರ ಡೆಲ್ಲಿ ವಿರುದ್ಧ ಜಯ ಗಳಿಸಿದೆವು. ನಾವು ಕೇವಲ ಮೂರು ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆವು. ಆದ್ದರಿಂದ ಡಿಫೆನ್ಸ್ ವಿಭಾಗದ ಬಗ್ಗೆ ನಾವು ಹೆಚ್ಚು ಯೋಚಿಸಬೇಕಾಗಿಲ್ಲ, ಪ್ರತಿ ದಾಳಿಯನ್ನು ನಾವು ಆರಂಭದಲ್ಲೇ ನಿಯಂತ್ರಿಸಬೇಕು. ಅದಕ್ಕಾಗಿ ಡಿಫೆನ್ಸ್ ವಿಭಾಗದ ಮೇಲೆ ಆರೋಪ ಹೊರಿಸುವುದು ಸೂಕ್ತವಲ್ಲ. ' ಎಂದು ಜೆಮ್ಷೆಡ್ಪುರ ತಂಡದ ಪ್ರಧಾನ ಕೋಚ್ ಸೆಸಾರ್ ಫೆರ್ನಾಂಡೊ ಹೇಳಿದ್ದಾರೆ. ಮುಂಬೈ ವಿರುದ್ಧ ಆಡಿರುವ ಐದು ಪಂದ್ಯಗಳಲ್ಲಿ ಜೆಮ್ಷೆಡ್ಪುರ ಕೇವಲ ಒಂದು ಪಂದ್ಯ ಗೆದ್ದಿತ್ತು.

ಆಟಗಾರರಿಗೆ ಗಾಯ

ಆಟಗಾರರಿಗೆ ಗಾಯ

ಪ್ರಮುಖ ಫಾರ್ವರ್ಡ್ ಆಟಗಾರರಾದ ಟಿಮ್ ಕಾಹಿಲ್ ಹಾಗೂ ಮೈಕೆಲ್ ಸೂಸೈರಾಜ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಹಾಗೂ ಗೌರವ್ ಮುಖಿ ಮತ್ತು ಕಾರ್ಲೋಸ್ ಕಾಲ್ವೋ ಅಮಾನತುಗೊಂಡು ಹೊರಗುಳಿದಿರುವುದು ಜೆಮ್ಷೆಡ್ಪುರ ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಆದರೆ ಮುಂಬೈ ವಿರುದ್ಧ ಐಎಸ್‌ಎಲ್‌ನಲ್ಲಿ ಜೆಮ್ಷೆಡ್ಪುರ ತಂಡ ಇದುವರೆಗೂ ಸೋತಿಲ್ಲ, ಇದು ತಂಡದ ಮನೋಬಲವನ್ನು ಹೆಚ್ಚಿಸಿದೆ.

ದೊಡ್ಡ ಸಮಸ್ಯೆಯಾಗಿದೆ

ದೊಡ್ಡ ಸಮಸ್ಯೆಯಾಗಿದೆ

‘ಟಿಮ್ ಕಾಹಿಲ್ ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಉತ್ತಮವಾಗಿ ಆಡುತ್ತಿದ್ದ ಗೌರವ್ ಮುಖಿ ಕೂಡ ಅಮಾನತುಗೊಂಡಿರುವುದು ತಂಡಕ್ಕೆ ನಷ್ಟವಾಗಿದೆ. ಅದೇ ರೀತಿ ಕಾರ್ಲೋಸ್ ಕಾಲ್ವೋ ಅವರ ಅನುಪಸ್ಥಿತಿಯೂ ತಂಡಕ್ಕೆ ಹಾನಿಯಾದಂತಾಗಿದೆ. ಸೂಸೈರಾಜ್ ಅನುಪಸ್ಥಿತಿಯೂ ತಂಡವನ್ನು ಕಾಡಲಿದೆ,‘ ಎಂದು ಫೆರಾಂಡೋ ಹೇಳಿದರು.

ಆಕ್ರಮಣಕಾರಿ ಆಟ

ಆಕ್ರಮಣಕಾರಿ ಆಟ

ಮುಂಬೈ ತಂಡದ ಆಕ್ರಮಣಕಾರಿ ಆಟವನ್ನೂ ಟಾಟಾ ಪಡೆ ಎದುರಿಸಬೇಕಾಗಿದೆ. ಎದುರಾಳಿ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿರುವುದಕ್ಕೆ ಮುಂಬೈ ಯೋಚಿಸುವುದಿಲ್ಲ, ಆದರೆ ಸಿಕ್ಕಾಗ ಆಕ್ರಮಣಕಾರಿ ಆಟಕ್ಕೆ ಮುಂದಾಗುವುದು ಸ್ಪ,ಷ್ಟ. ಅರ್ನಾಲ್ಡ್ ಇಸೊಕೊ, ಮೌಡೌ ಸೌಗೌ ಮತ್ತು ರೊಲ್ ಬಾಸ್ಟೋಸ್ ಅವರಲ್ಲಿರುವ ಶಕ್ತಿಯನ್ನು ಕೋಚ್ ಜಾರ್ಜ್ ಕೋಸ್ಟಾ ಉತ್ತಮ ರೀತಿಯಲ್ಲಿ ಬಳಸಿದ್ದಾರೆ. ಇದರಿಂದಾಗಿ ಮುಂಬೈ ತಂಡ ನಿರಂತರ ಯಶಸ್ಸಿನ ಹೆಜ್ಜೆಯನ್ನಿಟ್ಟಿದೆ. ಈ ಬಗ್ಗೆ ಟಾಟಾ ಪಡೆಯ ಕೋಚ್ ಫೆರಾಂಡೋ ಉತ್ತಮ ರೀತಿಯಲ್ಲಿ ರಣತಂತ್ರ ರಚಿಸಬೇಕಾಗಿದೆ. ಸೌಗೌ ಜೆಮ್ಷುಡ್ಪುರಕ್ಕೆ ಆಗಮಿಸಿದಾರೆ, ಆದರೆ ಹಿಂದಿನ ಪಂದ್ಯದಲ್ಲಿ ಸ್ನಾಯು ಸೆಳೆತದ ಕಾರಣ ಆಡಿರಲಿಲ್ಲ.

ಕೇವಲ ಮೂರು ಪಂದ್ಯಗಳು

ಕೇವಲ ಮೂರು ಪಂದ್ಯಗಳು

‘ನಾಳೆ ಪಂದ್ಯದ ನಂತರ ನಮಗೆ ಉಳಿದಿರುವುದು ಕೇವಲ ಮೂರು ಪಂದ್ಯಗಳು. ಎರಡೂ ತಂಡಗಳು ತೀವ್ರ ಒತ್ತಡದಲ್ಲಿವೆ. ಆದರೆ ಒತ್ತಡವನ್ನು ನಿಭಾಯಿಸುವುದು ನಮ್ಮ ಕರ್ತವ್ಯ, ನಮಗಿಂತ ಜೆಮ್ಶೆಡ್ಪುರದ ಮೇಲೆ ಹೆಚ್ಚು ಒತ್ತಡವಿದೆ. ನಾವು ಈಗಾಗಲೇ ನಾಲ್ಕರಲ್ಲಿ ಸ್ಥಾನ ಪಡೆದಿದ್ದೇವೆ, ಆದರೆ ಟಾಟಾ ಪಡೆ ಇನ್ನೂ ಅಂತಿಮ ನಾಲ್ಕರ ಹಂತಕ್ಕಾಗಿ ಹೋರಾಟ ನಡೆಸಬೇಕಾಗಿದೆ, ‘ಎಂದು ಕೋಸ್ಟಾ ಹೇಳಿದ್ದಾರೆ.

Story first published: Thursday, February 7, 2019, 19:22 [IST]
Other articles published on Feb 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+