For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ

isl 2020 21, fc goa vs mumbai city fc, semifinal preview

ಗೋವಾ: ಏಳು ಹೀರೋ ಇಂಡಿಯನ್ ಸೂಪರ್ ಲೀಗ್ ಗಳಲ್ಲಿ ಮುಂಬೈ ಸಿಟಿ ಎಫ್ ಸಿ ತಂಡ ಫೈನಲ್ ತಲುಪಿರಲಿಲ್ಲ. ಮೊದಲ ಬಾರಿಗೆ ಲೀಗ್ ವಿನ್ನರ್ಸ್ ಶೀಲ್ಡ್ ಗೆದ್ದ ನಂತರ ಸೋಮವಾರ ನಡೆಯಲಿರುವ ಎಫ್ ಸಿ ಗೋವಾ ವಿರುದ್ಧದ ಮೊದಲ ಸೆಮಿಫೈನಲ್ ಎರಡನೇ ಲೆಗ್ ನಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸುವ ಗುರಿ ಹೊಂದಿದೆ.

ಮೊದಲ ಲೆಗ್ ನಲ್ಲಿ ಮುಂಬೈ ಮತ್ತು ಗೋವಾ 2-2 ಗೋಲುಗಳಿಂದ ಡ್ರಾ ಸಾಧಸಿದ್ದವು. ಪ್ರಥಮ ಹಾಗೂ ದ್ವಿತಿಯಾರ್ಧಗಳಲ್ಲಿ ಗೋವಾ ಮುನ್ನಡೆಯ ಗೋಲು ಗಳಿಸಿದ್ದರೂ ಮುಂಬೈ ಜಯಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ತಂಡ ಗೋವಾ ವಿರುದ್ಧ ಅಷ್ಟು ಸುಲಭವಾಗಿ ಆಡಿರಲಿಲ್ಲ. ಗೋವಾ ಹೆಚ್ಚಿನ ಅವಧಿಯಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು.

ಆದಾಗ್ಯೂ ಫಲಿತಾಂಶ ಭಿನ್ನವಾಗಿರಲಿಲ್ಲ. ಮೊದಲ ಲೆಗ್ ನಲ್ಲಿ ಮುಂಬೈ 12 ಶಾಟ್ಸ್ ಗಳನ್ನು ದಾಖಲಿಸಿದ್ದರೂ ಟಾರ್ಗೆಟ್ ಇದ್ದುದು ಮೂರು ಮಾತ್ರ. ಗೋಲ್ ಸಮ್ಮುಖದಲ್ಲಿ ತಂಡ ಸಾಕಷ್ಟು ಅವಕಾಶಗಳನ್ನು ಕೈಚೆಲ್ಲಿತ್ತು. ಮುಂಬೈ ಕೋಚ್ ಸರ್ಗಿಯೋ ಲೊಬೆರಾ ಎರಡನೇ ಲೆಗ್ ನಲ್ಲಿ ಉತ್ತಮ ಪ್ರದರ್ಶನ ತೋರು ಆತ್ಮವಿಶ್ವಾಸ ಹೊಂದಿದ್ದಾರೆ.

"ಫಲಿತಾಂಶದ ಬಗ್ಗೆ ನನಗೆ ತೃಪ್ತಿ ಇಲ್ಲ, ನಮಗೆ ಇನ್ನೂ ಹೆಚ್ಚಿನ ಗೋಲು ಗಳಿಸುವ ಅವಕಾಶ ಇದ್ದಿತ್ತು. ಇಂಥ ಸಂದರ್ಭಗಳಲ್ಲಿ ನಾವು ಚುರುಕಾಗಿರಬೇಕು. ಆಟ ಮುಕ್ತವಾಗಿತ್ತು, ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ನಿಯಂತ್ರಿಸುವಲ್ಲಿ ವಿಫಲರಾದೆವು. ನಾವು ಅವರಿಗೆ ಅವಕಾಶ ಮಾಡಿಕೊಟ್ಟೆವು. ಈ ವಿಷಯದಲ್ಲಿ ನಾವು ಸುಧಾರಣೆ ಕಂಡುಕೊಳ್ಳಬೇಕಾಗಿದೆ," ಎಂದು ಲೊಬೆರಾ ಹೇಳಿದರು.

ಮೊದಲ ಲೆಗ್ ನಲ್ಲಿ ಗೋವಾ ತಂಡ ಗಾಯದ ಕಾರಣ ಕೆಲವು ಪ್ರಮುಖ ಆಟಗಾರರಿಂದ ವಂಚಿತವಾಗಿತ್ತು. ಮೊದಲ ಲೆಗ್ ನಲ್ಲಿ ಪಂದ್ಯ ಡ್ರಾಗೊಂಡಿರುವುದು ಜುವಾನ್ ಫೆರಾಂಡೊ ಪಡೆಗೆ ಅವಕಾಶ ತಪ್ಪಿದಂತಾಗಿದೆ. ಎರಡೂ ಸಂದರಭಗಳಲ್ಲಿ ಆರಂಭದಲ್ಲೇ ಗೋಲು ಗಳಿಸಿದ್ದರೂ ಡಿಫೆನ್ಸ್ ವಿಭಾಗ ವಿಫಲವಾದದ್ದು ಪಂದ್ಯ ಡ್ರಾಗೊಳ್ಳಲು ಪ್ರಮುಖ ಕಾರಣವಾಗಿತ್ತು. ಗೋವಾ ಈಗ 14 ಪಂದ್ಯಗಳಲ್ಲಿ ಸೋಲು ಕಾಣದೇ ಇರಬಹುದು, ಆದರೆ ತಂಡದ ಬ್ಯಾಕ್ ಲೈನ್ ಸುಧಾರಣೆ ಕಾಣಬೇಕಾಗಿದೆ. ಎರಡು ಬಾರಿ ಫೈನಲ್ ತಲುಪಿರುವ ಗೋವಾ ಮುಂಬೈ ವಿರುದ್ಧ ಜಯ ಕಾಣಬೇಕಾದರೆ ಮೊದಲ ಪಂದ್ಯದ ತಪ್ಪುಗಳನ್ನು ತಿದ್ದಿಕೊಳ್ಳಬೇಕಾಗಿದೆ.

ಮೊದಲ ಲೆಗ್ ನಲ್ಲಿ ಡ್ರಾಗಿಂತ ಉತ್ತಮವಾದ ಫಲಿತಾಂಶದ ಅಗತ್ಯವಿದೆ ಎಂದು ಫೆರಾಂಡೋ ಹೇಳಿದ್ದಾರೆ. "ನಮಗೆ ಮೊದಲ ಲೆಗ್ ತೃಪ್ತಿ ನೀಡಿಲ್ಲ, ಏಕೆಂದರೆ ನಮಗೆ ಜಯವೇ ಪ್ರಮುಖವಾಗಿತ್ತು. ಈಗ ಪ್ರಮುಖವಾದ ಅಂಶವೆಂದರೆ ನಮ್ಮ ಆಟಗಾರರು 100 ಪ್ರತಿಶತ ಸಜ್ಜಾಗಿದ್ದಾರೆ. ನಮಗೆ ಫೈನಲ್ ತಲುಪಲು ಇದೊಂದು ಉತ್ತಮ ಅವಕಾಶ," ಎಂದು ಹೇಳಿದರು.

Story first published: Monday, March 8, 2021, 8:36 [IST]
Other articles published on Mar 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+