ISL 2026: ತವರಿನಲ್ಲಿ ಬಿಎಫ್‌ಸಿಗೆ ಸೋಲು
ಬೆಂಗಳೂರು: ಆತಿಥೇಯ ಬೆಂಗಳೂರು ಫುಟ್ಬಾಲ್ (ಬಿಎಫ್‌ಸಿ) ವಿರುದ್ಧ ಸಂಘಟಿತ ಆಟದ ಪ್ರದರ್ಶನ ನೀಡಿದ ಪಂಜಾಬ್ ಫುಟ್ಬಾಲ್ ಕ್ಲಬ್ ಅಮೋಘ ಪ್ರದರ್ಶನ ನೀಡಿ 2-0 ಗೋಲುಗಳಿಂದ ಜಯ ಸಾಧಿಸಿದೆ. ಈ ಮೂಲಕ ಪಂಜಾಬ್ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಅಲ್ಲದೆ ಆಡಿದ 2 ಪಂದ್ಯಗಳಲ್ಲಿ 1 ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದಿದೆ.
ಬಿಎಫ್‌ಸಿ ತಂಡ ಲೀಗ್‌ನಲ್ಲಿ ಮೊದಲ ಸೋಲು ಕಂಡಿದೆ. ಆಡಿದ ಮೂರು ಪಂದ್ಯಗಳಲ್ಲಿ 1 ಜಯ, 1 ಡ್ರಾ, 1 ಸೋಲು ಕಂಡಿದ್ದು, 4 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಸದ್ಯ ಜಮ್‌ಶೆಡ್‌ಪುರ ಅಗ್ರ ಸ್ಥಾನದಲ್ಲಿದ್ದರೆ, ಗೋವಾ ಎರಡನೇ ಸ್ಥಾನ, ಈಸ್ಟ್ ಬೆಂಗಾಲ್ ಮೂರನೇ ಸ್ಥಾನದಲ್ಲಿದೆ.

20 ನಿಮಿಷದಲ್ಲಿ ಎಫ್ಫಿಯಾಂಗ್ ನ್ಸುಂಗುಸಿ ಅಮೋಘ ಪ್ರದರ್ಶನ ನೀಡಿದರು. ಸಹ ಆಟಗಾರ ಕಾರ್ನರ್ ಭಾಗದಿಂದ ನೀಡಿದ ಚೆಂಡನ್ನು ಎಫ್ಫಿಯಾಂಗ್ ನ್ಸುಂಗುಸಿ ಸೊಗಸಾದ ಹೆಡರ್ ಮೂಲಕ ಚೆಂಡಿಗೆ ಗೋಲು ಪೆಟ್ಟಿಗೆಯೊಳಗೆ ನೂಕಿ ಸಂಭ್ರಮಿಸಿದರು. ಇನ್ನು ಇದೇ ಅವಧಿಯಲ್ಲಿ ಎಫ್ಫಿಯಾಂಗ್ ನ್ಸುಂಗುಸಿ ಏಕಾಂಗಿ ಪ್ರದರ್ಶನ ನೀಡಿ ಮತ್ತೊಂದು ಗೋಲು ಬಾರಿಸಿದರು. ಪರಿಣಾಮ ಪಂಜಾಬ್ ಭಾರೀ ಮುನ್ನಡೆ ಸಾಧಿಸಿದೆ.
ಈ ಅವಧಿಯಲ್ಲಿ ಬೆಂಗಳೂರು ಫುಟ್ಬಾಲ್ ತಂಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ವಿಫಲವಾಯಿತು. ಅಲ್ಲದೆ ಎದುರಾಳಿ ತಂಡಕ್ಕೂ ಗೋಲು ಬಾರಿಸಲು ಅವಕಾಶ ನೀಡಲಿಲ್ಲ.
ಗೋಲು ರಹಿತ ಎರಡನೇ ಅವಧಿ
2 ಗೋಲುಗಳ ಹಿನ್ನಡೆಯೊಂದಿಗೆ ಎರಡನೇ ಅವಧಿಯಲ್ಲಿ ಒತ್ತಡವನ್ನು ಮೆಟ್ಟಿನಿಲ್ಲುವ ಪ್ಲ್ಯಾನ್ ಮಾಡಿಕೊಂಡಿತು. ಆದರೆ ಬಿಎಫ್‌ಸಿ ತಂಡದ ತಂತ್ರ ಫಲಿಸಲಿಲ್ಲ. ನಿಗದಿತ ಸಮಯದಲ್ಲಿ ಬೆಂಗಳೂರು ತಂಡದ ಪರ ಒಂದೇ ಒಂದು ಗೋಲು ದಾಖಲಾಗದೆ ನಿರಾಸೆ ಅನುಭವಿಸಿತು. ಕೊನೆಯ ಕ್ಷಣದಲ್ಲಿ ಗೋಲು ಪೆಟ್ಟಿಗೆಯ ಎಡಭಾಗದಿಂದ ಸಹ ಆಟಗಾರ ನೀಡಿದ್ದ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗೆ ತಳ್ಳುವಲ್ಲಿ ಸುನಿಲ್ ಚೆಟ್ರಿ ವಿಫಲರಾದರು.
ಜಮ್‌ಶೆಡ್‌ಪುರ ತಂಡಕ್ಕೆ ಜಯ
ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಜಮ್‌ಶೆಡ್‌ಪುರ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಶುಕ್ರವಾರ ನಡೆದ ಪಂದ್ಯದಲ್ಲಿ ಜಮ್‌ಶೆಡ್‌ಪುರ 2-1 ಗೋಲುಗಳಿಂದ ಈಸ್ಟ್ ಬೆಂಗಾಲ್ ತಂಡವನ್ನು ಮಣಿಸಿತು. ಮೊದಲಾವಧಿಯಲ್ಲಿ ಗೋಲು ಬಾರಿಸಿ ಮುನ್ನಡೆ ಪಡೆದಿದ್ದ ಈಸ್ಟ್ ಬೆಂಗಾಲ್ ತಂಡದ ತಂತ್ರವನ್ನು ಮೆಟ್ಟಿನಿಂತು ಆಡಿದ ಜಮ್‌ಶೆಡ್‌ಪುರ ಎರಡನೇ ಅವಧಿಯಲ್ಲಿ ಎರಡು ಗೋಲು ದಾಖಲಿಸಿ ಅಬ್ಬರಿಸಿತು. ಅಲ್ಲದೆ ಪೂರ್ಣ ಅಂಕವನ್ನು ಕಲೆ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications