ಮೊದಲ ಟಿ20: ಧವನ್ ಹೋರಾಟ ವ್ಯರ್ಥ, 4 ರನ್‌ಗಳಿಂದ ಸೋತ ಭಾರತ

ಬ್ರಿಸ್ಬೇನ್, ನವೆಂಬರ್ 21: ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ 4 ರನ್ ಸೋಲನುಭವಿಸಿದೆ. ಪಂದ್ಯವನ್ನು 17 ಓವರ್‌ಗೆ ಸೀಮಿತ ಗೊಳಿಸಿದ್ದರಿಂದ ಅಂತಿಮ ಘಟ್ಟದಲ್ಲಿ ಆಟ ರೋಚಕವೆನಿಸಿತ್ತು. ಆದರೆ ಅಂತಿಮವಾಗಿ ಭಾರತ 4 ರನ್ ನಿಂದ ಶರಣಾಯಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಫಿಂಚ್ 27, ಕ್ರಿಸ್‌ಲಿನ್ 37, ಮಾರ್ಕಸ್ ಸ್ಟೊಯಿನಿಸ್ 33 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಇದಕ್ಕೂ ಹೆಚ್ಚಾಗಿ ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರ ಬ್ಯಾಟಿಂಗ್ ತಂಡ ರನ್ ಕದಿಯಲು ನೆರವು ನೀಡಿತು. ಮ್ಯಾಕ್ಸ್‌ವೆಲ್ 46 ರನ್ ಚಚ್ಚಿದರು.
ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 17 ಓವರ್ ಗೆ 4 ವಿಕೆಟ್ ಕಳೆದು 158 ರನ್ ಪೇರಿಸಿತು. ಪಂದ್ಯದ ವೇಳೆ ಮಳೆ ಕಾಡಿದ್ದರಿಂದ ಪಂದ್ಯವನ್ನು 17 ಓವರ್ ಗಳಿಗೆ ಸೀಮಿತಗೊಳಿಸಿದ್ದು, ಡಕ್ ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ ಗೆಲ್ಲಲು 174ರನ್ ಗುರಿ ನೀಡಲಾಗಿತ್ತು.
ಭಾರತ ಪರ ಶಿಖರ್ ಧವನ್ 76 ರನ್ ಸೇರಿಸಿ ತಂಡದ ಪರ ಹೋರಾಟ ನಡೆಸಿದರು. ರಿಷಬ್ ಪಂತ್ 20, ದಿನೇಶ್ ಕಾರ್ತಿಕ್ 30 ರನ್ ಸೇರಿಸಿದರಾದರೂ ಭಾರತ 17 ಓವರ್ ಗೆ 7 ವಿಕೆಟ್ ಕಳೆದು 169 ರನ್ ಪೇರಿಸಿ ಶರಣಾಯಿತು.

ಭಾರತ ತಂಡ ಆಡುವ XI : ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಜಸ್ ಪ್ರೀತ್ ಬೂಮ್ರಾ.
ಆಸ್ಟ್ರೇಲಿಯಾ ತಂಡ : ಅರೋನ್ ಫಿಂಚ್, ಡ್ಯಾನ್ಸಿ ಶಾರ್ಟ್, ಕ್ರಿಸ್ ಲಿನ್, ಗ್ರೆಗ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಬೆನ್ ಮೆಕ್ ಡರ್ಮಟ್, ಕ್ಯಾರಿ, ಆಂಡ್ರ್ಯೂ ಟೈ, ಬೆಹ್ರೊಡ್ರೊರ್ಫ್, ಆಡಂ ಝಂಪಾ, ಬೆನ್ ಸ್ಟಾನ್ಲಾಕೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications