IND vs SL: ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ತವರಿನಲ್ಲಿ ಸೋಲಿಸುವುದು ಕಷ್ಟ!
ಆಗಸ್ಟ್ 2 ಶುಕ್ರವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ನಡೆಯಲಿದೆ. ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2.30 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಇತ್ತೀಚೆಗೆ ಮುಕ್ತಾಯವಾದ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಗಾಯದಿಂದ ಆತಿಥೇಯ ಶ್ರೀಲಂಕಾ ತಂಡ ಇನ್ನೂ ಚೇತರಿಸಿಕೊಂಡಿಲ್ಲ. ಟಿ20ಗೆ ಹೋಲಿಸಿದರೆ ತವರಿನಲ್ಲಿ ಶ್ರೀಲಂಕಾವನ್ನು ಏಕದಿನದಲ್ಲಿ ಸೋಲಿಸುವುದು ಟೀಮ್ ಇಂಡಿಯಾಗೆ ಸುಲಭದ ಮಾತಲ್ಲ. ಶ್ರೀಲಂಕಾ ತಂಡದ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿ.

ತವರಿನ ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾಗೆ ಶ್ರೀಲಂಕಾ ಭರ್ಜರಿ ಹೋರಾಟ ನೀಡಿದೆ. ಆದರೆ, ಉಭಯ ತಂಡಗಳ ದಾಖಲೆಗಳನ್ನು ಗಮನಿಸಿದರೆ ಭಾರತ ತನ್ನ ಪ್ರಾಬಲ್ಯವನ್ನು ಹಾಗೇ ಉಳಿಸಿಕೊಂಡಿದೆ.
ಹೆಡ್ ಟು ಹೆಡ್
ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮುಖಾಮುಖಿ ದಾಖಲೆಗಳನ್ನು ನೋಡುವುದಾರೆ, ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.
ಉಭಯ ತಂಡಗಳ ನಡುವೆ ಇದುವರೆಗೆ 246 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾ 142 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 73 ಪಂದ್ಯಗಳನ್ನು ಗೆದ್ದಿದೆ.
ಈ ಅವಧಿಯಲ್ಲಿ, 2 ಪಂದ್ಯಗಳು ಟೈ ಆಗಿದ್ದು, 17 ಡ್ರಾ ಮತ್ತು 12 ಪಂದ್ಯಗಳು ಅನಿರ್ದಿಷ್ಟವೆಂದು ಘೋಷಿಸಲಾಗಿದೆ . ಇದೀಗ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ವಶಪಪಡಿಸಿಕೊಳ್ಳುವ ಮೂಲಕ ಗೆಲುವಿನ ಸಂಖ್ಯೆಗಳನ್ನು ಹೆಚ್ಚಿಸುತ್ತಾ ಅಥವಾ ಶ್ರೀಲಂಕಾ ತಂಡದ ಟಿ20 ಸರಣಿ ಸೋಲಿನ ಗಾಯವನ್ನು ಗುಣಪಡಿಸುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ.
ತವರಿನಲ್ಲಿ ಶ್ರೀಲಂಕಾ ಸೋಲಿಸುವುದು ಕಷ್ಟವೇ?
ದೇಶಿಯ ಏಕದಿನ ಪಂದ್ಯಗಳ ಅಂಕಿ-ಅಂಶಗಳನ್ನು ನೋಡಿದರೆ, ಶ್ರೀಲಂಕಾ ತಂಡ ಭಾರತ ದತ್ತ ಕಣ್ಣು ಹಾಯಿಸಿದಂತಿದೆ. ಶ್ರೀಲಂಕಾ ನೆಲದಲ್ಲಿ ಉಭಯ ತಂಡಗಳ ನಡುವೆ ಒಟ್ಟು 66 ಏಕದಿನ ಪಂದ್ಯಗಳು ನಡೆದಿದೆ.
ಇದರಲ್ಲಿ ಭಾರತ ತಂಡ 32 ಬಾರಿ ಶ್ರೀಲಂಕಾ ಸೋಲಿಸಿದ್ದರೆ, ಶ್ರೀಲಂಕಾ ಕೂಡ ಭಾರತವನ್ನು 28 ಬಾರಿ ಪರಾಭವಗೊಳಿಸಿದೆ. ಸರಣಿಯ ಮೊದಲ ಏಕದಿನ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.
ಈ ಮೈದಾನದಲ್ಲಿ ಉಭಯ ತಂಡಗಳು ಏಕದಿನದಲ್ಲಿ 38 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಮ್ ಇಂಡಿಯಾ 19 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 16 ಪಂದ್ಯಗಳಲ್ಲಿ ಜಯ ಕಂಡಿದೆ.
ಇದರೊಂದಿಗೆ ಶ್ರೀಲಂಕಾ ನೆಲದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಪರದಾಟ ನಡೆಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ತವರಿನಲ್ಲಿ ಶ್ರೀಲಂಕಾ ಸೋಲಿಸುವುದು ಕಷ್ಟಕರವಾಗಿದೆ. ಈಗಿನ ಶ್ರೀಲಂಕಾ ತಂಡ ಅಷ್ಟೊಂದು ಬಲಿಷ್ಠವಾಗಿಲ್ಲ. ಆದರೆ ಲಂಕಾವನ್ನು ಸುಲಭವಾಗಿ ತೆಗೆದುಕೊಳ್ಳುವಂತಿಲ್ಲ.
ಶ್ರೀಲಂಕಾ ತಂಡಕ್ಕೆ ಗಾಯದ ಬರೆ
ಭಾರತದ ಶ್ರೀಲಂಕಾ ಪ್ರವಾಸದ ನಂತರ ಆತಿಥೇಯ ತಂಡದಲ್ಲಿ ಗಾಯದ ಆತಂಕ ಮನೆ ಮಾಡಿದೆ.
ಒಬ್ಬರ ನಂತರ ಒಬ್ಬರಂತೆ ಲಂಕಾ ತಂಡದ ವೇಗದ ಬೌಲರ್‌ಗಳು ಗಾಯಗೊಳ್ಳುತ್ತಿರುವುದು ಕಂಡು ಬರುತ್ತಿದೆ.
ಮತಿಶ ಪತಿರಣ, ಮಧುಶಂಕ ಸೇರಿದಂತೆ ತಂಡದ ಕೆಲ ಆಟಗಾರರು ಏಕದಿನ ಸರಣಿಗೂ ಮುನ್ನವೇ ಗಾಯದ ಬಲೆಯಲ್ಲಿ ಸಿಲುಕಿದ್ದಾರೆ. ಇದೀಗ ಈ ಗಾಯದ ಲಾಭವನ್ನು ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಪಡೆಯಬಹುದು.
ಏಕದಿನ ಸರಣಿಗೆ ಉಭಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಸರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಚರಿತ್ ಅಸಲಂಕಾ (ನಾಯಕ), ಕಾಮಿಂದು ಮೆಂಡಿಸ್, ಜೆನಿತ್ ಲಿಯಾನಗೆ, ವನಿಂದು ಹಸರಂಗ, ದುನಿತ್ ವೆಲ್ಲಗೆ, ಚಾಮಿಕ ಕರುಣಾರತ್ನೆ, ಕುಸಲ್ ಮೆಂಡಿಸ್, ಸದಿರ ಸಮರವಿಕ್ರಮ, ನಿಶಾನ್ ಮದುಷ್ಕ, ಮಹಿಷ್ ದೀಕ್ಷಣಾ, ಇಸಿಲಾ ಧನರಾಜ, ಇಸಿಲಾ ಧನರಾಜನಜಯ್, ಅಸಿತ ಫೆರ್ನಾಂಡೋ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications