ಟಿ20 ವಿಶ್ವಕಪ್ 2024 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ ಟಿ20 ವಿಶ್ವಕಪ್ ಆಯೋಜಸಿಲಾಗುತ್ತಿದೆ. ಟಿ20 ವಿಶ್ವಕಪ್‌ಗೆ ಇನ್ನೇನು ಕೆಲವೇ ತಿಂಗಳುಗಳು ಉಳಿದಿದ್ದು, ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಭರದ ತಯಾರಿ ನಡೆಸಿವೆ. ಆದರೆ ಬಿಸಿಸಿಐ ಆಯ್ಕೆ ಸಮಿತಿ ಸಮಸ್ಯೆಗಳ ಗೂಡಿನಂತೆ ಕಾಣಿಸಿಕೊಳ್ಳುತ್ತಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟಿ20 ಕಳೆದ ಒಂದು ವರ್ಷದಿಂದ ಟಿ20 ಪಂದ್ಯಗಳನ್ನು ಆಡಿಲ್ಲ. ಅವರಿಗೆ ಆಡುವ ಮನಸ್ಸು ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇತ್ತೀಚಿಗೆ ಇಬ್ಬರು ಸ್ಟಾರ್ ಆಟಗಾರರು ಬಿಸಿಸಿಐ ಮುಂದೆ ತಮಗೂ ಟಿ20 ವಿಶ್ವಕಪ್ ಆಡುವ ಆಸೆ ಇರುವುದಾಗಿ ತಿಳಿಸಿದ್ದಾರೆ.
ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ಟಿ20 ತಂಡದಲ್ಲಿ ಉಳಿಸಿಕೊಳ್ಳುವುದು ಬಿಸಿಸಿಐ ಆಯ್ಕೆದಾರರಿಗೆ ದೊಡ್ಡ ಸವಾಲಾಗಿದೆ.

T20 ತಂಡದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ಒಟ್ಟಿಗೆ ತಂಡದಲ್ಲಿ ಸೇರಿಸುವುದು ಸುಲಭವಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಟೀಂ ಇಂಡಿಯಾದ ಇಬ್ಬರೂ ದಿಗ್ಗಜರು ಸುಮಾರು ಒಂದು ವರ್ಷದ ಹಿಂದೆ ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದರು. ಇದಲ್ಲದೆ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮತ್ತು ತಿಲಕ್ ವರ್ಮಾ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ತೋರಿಸಿದ್ದಾರೆ.
ಬಿಸಿಸಿಐ ಭವಿಷ್ಯದ ತಂಡವನ್ನು ನಿರ್ಮಿಸಲು ಚಿಂತನೆ ನಡೆಸಿದೆ ಎಂದು ನಂಬಲಾಗಿದೆ. ಅಂದರೆ, ಆಯ್ಕೆದಾರರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯತ್ತ ನೋಡುತ್ತಿಲ್ಲ, ಆದರೆ ಯುವ ಆಟಗಾರರ ಸೈನ್ಯವನ್ನು ತಯಾರು ಮಾಡಲು ಆಯ್ಕೆದಾರರು ಬಯಿಸಿದ್ದಾರೆ.
ಇತ್ತೀಚೆಗೆ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇಬ್ಬರೂ ದಿಗ್ಗಜರು ಸುಲಭವಾಗಿ ರನ್ ಗಳನ್ನು ಗುಡ್ಡೆ ಹಾಕಿ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇರುವುದಾಗಿ ಸಾಬೀತು ಮಾಡಿದ್ದರು. ಆದರೆ ಟಿ20 ಮಾದರಿಯಲ್ಲಿ ಆಡುವ ಬಗ್ಗೆ ಅನುಮಾನವಿತ್ತು.

ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವುದನ್ನು ಕಾಣಬಹುದು ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಆದರೆ ಮುಂಬರುವ ವಿಶ್ವಕಪ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಬಿಸಿಸಿಐ ಆಯ್ಕೆಗಾರರು ಅವಕಾಶ ನೀಡುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಸದ್ಯ ಯಾರ ಬಳಿಯೂ ಉತ್ತರವಿಲ್ಲ. ಉತ್ತರ ನೀಡುವವರು ಮೌನಕ್ಕೆ ಶರಣಾಗಿದ್ದಾರೆ. ಆದರೆ, ಕಾಲವೇ ಈ ಪ್ರಶ್ನೆಗೆ ಉತ್ತರ ನೀಡಲಿದೆ. ಆದರೆ ಇಬ್ಬರೂ ಶ್ರೇಷ್ಠರಿಂದ ಆಯ್ಕೆದಾರರಿಗೆ ಸಮಸ್ಯೆಗಳು ಹೆಚ್ಚಾಗುವುದು ಖಚಿತ.