For Quick Alerts
ALLOW NOTIFICATIONS  
For Daily Alerts
 

ಭಾರತದ ಈ ಇಬ್ಬರು ದಿಗ್ಗಜರೊಂದಿಗೆ ಶುಭ್ಮನ್ ಗಿಲ್ ಹೋಲಿಸುವುದು ಸರಿಯಲ್ಲ; ಗ್ಯಾರಿ ಕರ್ಸ್ಟನ್

2023ರ ಐಪಿಎಲ್‌ನ ರನ್ನರ್-ಅಪ್ ಗುಜರಾತ್ ಟೈಟನ್ಸ್ ತಂಡದ ಮೆಂಟರ್ ಗ್ಯಾರಿ ಕರ್ಸ್ಟನ್ ಅವರು 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದಾಗ ಮುಖ್ಯ ಕೋಚ್ ಆಗಿದ್ದರು.

ಭಾರತದ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಭಾರತ ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಕಾರ್ಯನಿರ್ವಹಿಸಿದ್ದಾರೆ.

 Shubman Gill With Sachin Tendulkar

ಇದೀಗ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಸುವುದು ಸರಿಯಲ್ಲ ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ತಿಳಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದರು. ಶುಭ್ಮನ್ ಗಿಲ್ ಮೂರು ಶತಕ ಮತ್ತು 6 ಅರ್ಧಶತಕಗಳನ್ನೊಳಗೊಂಡ 890 ರನ್‌ಗಳನ್ನು ಗಳಿಸಿದರು.

23 ವರ್ಷದ ಶುಭ್ಮನ್ ಗಿಲ್ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 60 ಎಸೆತಗಳಲ್ಲಿ 129 ರನ್‌ಗಳ ಸ್ಫೋಟಕ ಬ್ಯಾಟಿಂಗ್ ನಂತರ ಅಭಿಮಾನಿಗಳು ಮತ್ತು ಅನುಭವಿ ಕ್ರಿಕೆಟ್ ಆಟಗಾರರಿಂದ ಪ್ರಶಂಸೆಗೆ ಒಳಗಾದರು.

 Shubman Gill With Sachin Tendulkar

2023ರ ಐಪಿಎಲ್ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಅಭಿಯಾನ ಮುಗಿಸಿದರು ಮತ್ತು ಪಂದ್ಯಾವಳಿಯ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಪಡೆದರು.

ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಸೋಲಿನ ಹೊರತಾಗಿಯೂ, ಟೂರ್ನಿಯುದ್ದಕ್ಕೂ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಎಲ್ಲರ ಮನಗೆದ್ದಿತು.

ಈ ವರ್ಷ ಆಡಿದ 17 ಪಂದ್ಯಗಳಲ್ಲಿ 59.33 ಸರಾಸರಿ ಮತ್ತು 157.80ರ ಸ್ಟ್ರೈಕ್‌ರೇಟ್‌ನಲ್ಲಿ 890 ರನ್‌ ಗಳಿಸುವ ಮೂಲಕ 2023ರ ಐಪಿಎಲ್‌ನ ಆರೆಂಜ್ ಕ್ಯಾಪ್ ಅನ್ನು ಗೆದ್ದರು.

 Shubman Gill With Sachin Tendulkar

ಇದೇ ವೇಳೆ ಗುಜರಾತ್ ಟೈಟನ್ಸ್ ತಂಡದ ಮೆಂಟರ್ ಮತ್ತು ಭಾರತದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಅವರು ಶುಭ್ಮನ್ ಗಿಲ್ ಅವರನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಖಂಡಿತವಾಗಿಯೂ, ಶುಭ್ಮನ್ ಗಿಲ್ ಅವರು ಎಲ್ಲ ಮಾದರಿಯ ಸಮರ್ಥ ಆಟಗಾರನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಎಲ್ಲಾ ಮೂರು ಆಟದ ಪ್ರಕಾರಗಳಿಗೆ ಸರಿಹೊಂದುವಂತೆ ತಮ್ಮ ಶೈಲಿಯನ್ನು ಮಾರ್ಪಡಿಸುವ ವಿಶ್ವದ ಕೆಲವೇ ಕ್ರಿಕೆಟಿಗರಲ್ಲಿ ಶುಭ್ಮನ್ ಗಿಲ್ ಒಬ್ಬರು ಎಂದು ಗ್ಯಾರಿ ಕರ್ಸ್ಟನ್ ತಿಳಿಸಿದರು.

ಶುಭ್ಮನ್ ಗಿಲ್ ಕಲಿಕೆಯನ್ನು ನಾನು ಪ್ರೋತ್ಸಾಹಿಸುತ್ತೇನೆ: ಗ್ಯಾರಿ ಕರ್ಸ್ಟನ್
"ಎಲ್ಲಾ ಸ್ವರೂಪಗಳಲ್ಲಿ ಭಾರತಕ್ಕೆ ಶ್ರೇಷ್ಠ ಆಟಗಾರನಾಗಲು ಶುಭ್ಮನ್ ಗಿಲ್ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಯಾವುದೇ ಆಟಗಾರನಂತೆ ಅವನು ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸುತ್ತಾನೆ. ಗಿಲ್ ಅದನ್ನು ಹೇಗೆ ನಿರ್ವಹಿಸುತ್ತಾನೆ ಮತ್ತು ಪ್ರಗತಿಯನ್ನು ಕಾಯ್ದಿಟ್ಟುಕೊಳ್ಳುತ್ತಾನೆ ಎಂಬುದು ಅಂತಿಮವಾಗಿ ಅವನ ದೀರ್ಘಾವಧಿಯ ಯಶಸ್ಸನ್ನು ನಿರ್ಧರಿಸುತ್ತದೆ," ಎಂದು ಗ್ಯಾರಿ ಕರ್ಸ್ಟನ್ ಹೇಳಿದರು.

"ನಾನು ಶುಭ್ಮನ್ ಗಿಲ್ ಕಲಿಯುವುದನ್ನು ಮತ್ತು ಅವನಿಗೆ ವಿಶ್ವಾಸಾರ್ಹ ಸಲಹೆಯನ್ನು ನೀಡಬಲ್ಲವರೊಂದಿಗೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತೇನೆ," ಎಂದರು.

ಜೂನ್ 7ರಿಂದ ಇಂಗ್ಲೆಂಡ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಶುಭ್ಮನ್ ಗಿಲ್ ತನ್ನ ಅತ್ಯುತ್ತಮ ಫಾರ್ಮ್ ಮುಂದುವರಿಸುವ ಭರವಸೆಯನ್ನು ಭಾರತ ಹೊಂದಿದೆ.

Story first published: Saturday, June 3, 2023, 13:15 [IST]
Other articles published on Jun 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+