ಕೊಹ್ಲಿಯಲ್ಲ, ಧೋನಿಯಲ್ಲ, ಭಾರತದ ಅತೀ ಶ್ರೀಮಂತ ಕ್ರಿಕೆಟಿಗನೀತ!

ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ, ಉಪನಾಯಕ ರೋಹಿತ್ ಶರ್ಮಾ ಇವರೆಲ್ಲ ವಾರ್ಷಿಕ ಮಿಲಿಯನ್‌ಗಟ್ಟಲೆ ಆದಾಯ ಗಳಿಸುತ್ತಿದ್ದಾರೆ ಅನ್ನೋದು ನಮಗೆ ಗೊತ್ತು. ಆದರೆ ಈ ಜನಪ್ರಿಯ ಕ್ರಿಕೆಟಿಗರಿಗಿಂತಲೂ ಅತೀ ಶ್ರೀಮಂತ ಭಾರತೀಯ ಕ್ರಿಕೆಟಿಗರೊಬ್ಬರಿದ್ದಾರೆ.
ಆರ್ಯಮಾನ್ ಬಿರ್ಲಾ ಅವರ ಹೆಸರು. ಬ್ಯುಸಿನೆಸ್ ದೈತ್ಯ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರನೇ ಆರ್ಯಮಾನ್. ಯಾಕೆ ಆರ್ಯಮಾನ್ ಭಾರತದ ಅತೀ ಶ್ರೀಮಂತ ಕ್ರಿಕೆಟಿಗ ಅನ್ನಿಸಿಕೊಂಡಿದ್ದಾರೆಂದರೆ ಆರ್ಯಮಾನ್ ತಂದೆ ಮಂಗಲಂ ಅವರು ಸುಮಾರು 70,000 ಕೋಟಿ ರೂ.ಗಳ ಒಡೆಯ ಹೀಗಾಗಿ.
ಆರ್ಯಮಾನ್‌ಗೆ ಕ್ರಿಕೆಟ್ ಮೈದಾನಕ್ಕೆ ಇಳಿದು ಬೆವರಿಳಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ 23ರ ಆರ್ಯಮಾನ್ ಮುಂದೆ ಮಲ್ಟಿ ಮಿಲಿಯನ್ ಡಾಲರ್ ಆದಿತ್ಯ ಬಿರ್ಲಾ ಗ್ರೂಪ್‌ನ ಜವಾಬ್ದಾರಿ ಹೊರಲಿರುವವರು. ಆದರೆ ಇವೆಲ್ಲವನ್ನೂ ಬಿಟ್ಟು ಆರ್ಯಮಾನ್ ಕ್ರಿಕೆಟ್‌ನತ್ತ ಕ್ರೇಸ್ ಬೆಳೆಸಿಕೊಂಡಿದ್ದಾರೆ.
ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಆರ್ಯಮಾನ್ ಅವರು ದೇಸಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶದ ಪರ ಆಡುತ್ತಾರೆ. 16 ಪ್ರಥಮದರ್ಜೆ ಇನ್ನಿಂಗ್ಸ್‌ಗಳನ್ನಾಡಿರುವ ಬಿರ್ಲಾ 414 ರನ್, 3 ಲಿಸ್ಟ್ 'ಎ' ಇನ್ನಿಂಗ್ಸ್‌ಗಳಲ್ಲಿ 36 ರನ್ ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನಲ್ಲಿ ಆರ್ಯಮಾನ್ ಬಿರ್ಲಾಗೆ ಅವಕಾಶ ಲಭಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications