ಸೆಹ್ವಾಗ್ ರಿಂದ ಹುಟ್ಟುಹಬ್ಬದ ದಿನದಂದೇ ನಿವೃತ್ತಿ ಘೋಷಣೆ
ಬೆಂಗಳೂರು, ಅ.20: ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸೋಮವಾರ ರಾತ್ರಿಯಿಂದ ಸೆಹ್ವಾಗ್ ನಿವೃತ್ತಿ ಘೋಷಣೆ ಸುದ್ದಿ ಹಬ್ಬಿತ್ತು. ದುಬೈನಲ್ಲಿದ್ದ ಸೆಹ್ವಾಗ್ ಅವರು ಭಾರತಕ್ಕೆ ಬಂದು ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ನಂತರ ಈ ಸುದ್ದಿ ಸುಳ್ಳು ಎಂದಿದ್ದರು. ಈಗ ಟ್ವೀಟ್ ಮಾಡಿ ನಿವೃತ್ತಿ ಘೋಷಿಸಿರುವುದಾಗಿ ಹೇಳಿದ್ದಾರೆ.
ದುಬೈನಲ್ಲಿ ಹಿರಿಯ ನಾಯಕರ 2020 ಲೀಗ್ ಉದ್ಘಾಟನೆ ಸಮಾರಂಭಕ್ಕೆ ತೆರಳಿದ್ದ ಸೆಹ್ವಾಗ್ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ನಿವೃತ್ತಿ ಘೋಷಿಸಿದ್ದಾರೆ. [ನಿವೃತ್ತಿ ಸುದ್ದಿ ಎಲ್ಲವೂ ಸುಳ್ಳು ಸುದ್ದಿ: ಸೆಹ್ವಾಗ್]

ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್ ನಿಂದಲೂ ನಿವೃತ್ತಿ ಹೊಂದುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ನಂತರ ಮತ್ತೊಂದು ಟ್ವೀಟ್ ನಲ್ಲಿ ನಿವೃತ್ತಿ ಘೋಷಣೆ ಬಗ್ಗೆ ಎರಡು ಪುಟಗಳ ಪತ್ರ ಪ್ರಕಟಿಸಿದ್ದಾರೆ. [ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್]
1999ರಲ್ಲಿ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ವೀರೇಂದ್ರ ಸೆಹ್ವಾಗ್ 251 ಏಕದಿನ ಪಂದ್ಯವಾಡಿದ್ದು, 8273 ರನ್ ಗಳಿಸಿದ್ದಾರೆ. 2002ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಸೆಹ್ವಾಗ್ 104 ಟೆಸ್ಟ್ ಪಂದ್ಯಗಳಲ್ಲಿ 8586 ರನ್ ಗಳಿಸಿದ್ದು, 2 ಬಾರಿ 300ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. 19 ಟಿ20 ಪಂದ್ಯವಾಡಿರುವ ಸೆಹ್ವಾಗ್ 394 ರನ್ ಗಳಿಸಿದ್ದಾರೆ. ಜತೆಯಲ್ಲೇ ಟೆಸ್ಟ್ನಲ್ಲಿ 40 ಮತ್ತು ಏಕದಿನ ಪಂದ್ಯಗಳಲ್ಲಿ 96 ವಿಕೆಟ್ ಪಡೆದಿದ್ದಾರೆ.
ಸೆಹ್ವಾಗ್ 2013ರ ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್ನಲ್ಲಿ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. 2013ರ ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದ ಸೆಹ್ವಾಗ್ 2012ರಲ್ಲಿ ಟಿ20ಯಿಂದ ಹೊರಗುಳಿದಿದ್ದರು. ಈಗ ಮಾಸ್ಟರ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Virender Sehwag announces retirement
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications