ಟಿ20 ವಿಶ್ವಕಪ್: ಐಸಿಸಿ ನಿರ್ಧಾರಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ ಎಂದ ಬಿಸಿಸಿಐ ಕಾರ್ಯದರ್ಶಿ

ವಿಶ್ವಕಪ್ ಆಯೋಜನೆಯ ಬಗ್ಗೆ ಐಸಿಸಿ ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. ವಿಶ್ವಕಪ್ ಆಯೋಜನೆ ಮಾಡುವ ನಿರ್ಧಾರದ ಬಗ್ಗೆ ಐಸಿಸಿ ಅಂತಿಮ ನಿಲುವನ್ನು ಹಂಚಿಕೊಳ್ಳದಿರುವುದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ನಿರ್ಧಾರಕ್ಕೆ ಕಾಯದೆ ಮುಂದುವರಿಯಲು ಬಿಸಿಸಿಐ ಮುಂದಾಗಿದೆ.
ಟಿ20 ವಿಶ್ವಕಪ್ ಕುರಿತ ಐಸಿಸಿಯ ನಿಲುವು ಯಾವಾಗ ಪ್ರಕಟವಾಗಲಿದೆ ಎಂಬುದನ್ನು ಲೆಕ್ಕಿಸದೆಯೇ ಬಿಸಿಸಿಐ ಮುಂದಿವರಿಯುವ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು ಮೊದಲಿಗೆ ತಾತ್ಕಾಲಿಕ ಅವಕಾಶವನ್ನು ಸಿದ್ದಪಡಿಸಲಾಗುತ್ತಿದೆ.
ಕೆಲವು ಪ್ರಕಟಣೆಗಳ ವಿಳಂಬದಿಂದಾಗಿ ಇದು ಈಗಾಗಲೇ ಸಾಕಷ್ಟು ಸಮಯವನ್ನು ಬಿಸಿಸಿಐ ಕಳೆದುಕೊಂಡಿದೆ. ಯಾವಾಗ ಮತ್ತು ಏನು ಮಾಡಬೇಕು ಎಂದು ಇತರರು ನಿರ್ಧರಿಸುವವರೆಗೆ ಇನ್ನು ಕಾಯಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್‌ನ ಹೂಡಿಕೆದಾರರಿಗೂ ಮನವರಿಕೆಯಾಗಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿಕೆ ನೀಡಿದ್ದಾರೆ.
"ಎನ್‌ಬಿಎ ಯುಎಸ್‌ನಲ್ಲಿ ಸಂರಕ್ಷಿತ ವಲಯದಲ್ಲಿ ಪ್ರಾರಂಭವಾಗುತ್ತಿದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ನಡೆಯುತ್ತಿದೆ ಮತ್ತು ಎಫ್ಎ ಕಪ್ ಪಂದ್ಯಗಳು ಕೂಡ ಆರಂಭವಾಗಿದೆ. ಆಸ್ಟ್ರೇಲಿಯಾದ ದೇಶೀಯ ರಗ್ಬಿ ಲೀಗ್ ಕೂಡ ಪ್ರಾರಂಭವಾಗಲಿದೆ. ಹೋಗಾಗಿ ಸೆಪ್ಟೆಂಬರ್‌ನಿಂದ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯ ಬಗ್ಗೆ ಬಿಸಿಸಿಐ ಎದುರುನೋಡುತ್ತಿದೆ ಎಂದು ಧುಮಾಲ್ ವಿವರಿಸಿದರು.
ಟಿ20 ವಿಶ್ವಕಪ್ ನಿರ್ಧಾರದ ಪ್ರಕಟಣೆಗಳು ಮತ್ತು ಫಲಿತಾಂಶಗಳ ನಮ್ಮ ಕೈಯಲ್ಲಿಲ್ಲ. ಹೀಗಾಗಿ ಅದರ ನಿರ್ಧಾರಗಳು ಯಾವಾಗ ಪ್ರಕಟವಾಗುತ್ತದೋ ಪ್ರಕಟವಾಗಲಿ ಎಂದು ಬಿಸಿಸಿಐ ಕಾರ್ಯದರ್ಶಿ ಅರುಣ್ ಧುಮಲ್ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications