For Quick Alerts
ALLOW NOTIFICATIONS  
For Daily Alerts
 

'ಧೋನಿ ಆಗಲು 15 ವರ್ಷ ಬೇಕು' ಧ್ರುವ್ ಜುರೆಲ್‌ ಹೋಲಿಕೆಗೆ ಮಾಜಿ ನಾಯಕ ಕೋಪ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್‌ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದ ಆಟಗಾರ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಧ್ರುವ್ ಜುರೆಲ್‌. ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಧ್ರುವ ಜುರೆಲ್‌ ಸೊಗಸಾದ ಪ್ರದರ್ಶನ ನೀಡಿ ಅಬ್ಬರಿಸಿದರು. ಇವರ ಆಟವನ್ನು ಕಂಡು ಅಭಿಮಾನಿಗಳು ಇವರನ್ನು ಮಾಜಿ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಅವರೊಂದಿಗೆ ತುಲನೆ ಮಾಡುತ್ತಿದ್ದಾರೆ.

ಯುವ ಆಟಗಾರನನ್ನು, ಮಾಜಿ ನಾಯಕ ಧೋನಿ ಅವರೊಂದಿಗೆ ಕಂಪೇರ್‌ ಮಾಡಿದ್ದನ್ನು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತುಟಿ ಬಿಚ್ಚಿದ್ದಾರೆ.

It takes 15 years to become Dhoni says former captain Kopa comparing Dhruv Jurel

ಧ್ರುವ್ ಜುರೆಲ್ ರಾಂಚಿ ಟೆಸ್ಟ್‌ನ ಹೀರೋ ಆಗಿ ಹೊರಹೊಮ್ಮಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸಿದ ನಂತರ, ಉತ್ತಮವಾದ ವಿಕೆಟ್‌ ಕೀಪಿಂಗ್‌ ಕೌಶಲ್ಯಗಳನ್ನು ತೋರಿಸಿದರು. ಜುರೆಲ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ಗಂಗೂಲಿ ಹೇಳಿದ್ದೇನು?

ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಧ್ರುವ್ ಜುರೆಲ್ ಪ್ರತಿಭಾವಂತ ಆಟಗಾರ. ರಾಂಚಿ ಟೆಸ್ಟ್‌ನಲ್ಲಿ ಅವರು ಕಠಿಣ ಪರಿಸ್ಥಿತಿಯಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದರು. ಜುರೆಲ್ ವೇಗದ ಮತ್ತು ಸ್ಪಿನ್ ಬೌಲಿಂಗ್ ಅನ್ನು ಸರಿಯಾದ ತಂತ್ರದೊಂದಿಗೆ ಆಡುತ್ತಾರೆ. ನೀವು ಪ್ರತಿ ಆಟಗಾರನಲ್ಲೂ ಇದನ್ನು ನೋಡುತ್ತೀರಿ. ಧ್ರುವ್ ಜುರೆಲ್ ಮತ್ತು ಧೋನಿ ಅವರ ಹೋಲಿಕೆಯಲ್ಲಿ, ಮಹೇಂದ್ರ ಸಿಂಗ್ ಧೋನಿ ವಿಭಿನ್ನ ಲೀಗ್‌ನ ಆಟಗಾರ ಎಂದು ಸೌರವ್ ಗಂಗೂಲಿ ಹೇಳಿದರು.

ಧೋನಿಯಾಗಲು ಧೋನಿ 15 ವರ್ಷಗಳ ಪ್ರಯಾಣ ಮಾಡಬೇಕಾಗಿತ್ತು ಎಂದು ಅವರು ಹೇಳಿದರು. ಆದರೆ, ಧ್ರುವ್ ಜುರೆಲ್ ಅವರಲ್ಲಿ ಸಾಕಷ್ಟು ಪ್ರತಿಭೆ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

It takes 15 years to become Dhoni says former captain Kopa comparing Dhruv Jurel

ಧ್ರುವ್ ಜುರೆಲ್ ಅವರು ರಾಜ್‌ಕೋಟ್ ಟೆಸ್ಟ್‌ನಲ್ಲಿ ಭಾರತಕ್ಕಾಗಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು. ಅವರು ಭಾರತದ 312 ನೇ ಟೆಸ್ಟ್ ಆಟಗಾರರಾದರು. ಅವರು ರಾಜ್‌ಕೋಟ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿದ್ದರು. ಆ ಬಳಿಕ ರಾಂಚಿ ಟೆಸ್ಟ್‌ನಲ್ಲಿ ಧ್ರುವ್ ಜುರೆಲ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನಗೆದ್ದರು.

ಧ್ರುವ್ ಜುರೆಲ್ ಮೊದಲ ಇನ್ನಿಂಗ್ಸ್‌ನಲ್ಲಿ 90 ರನ್ ಗಳಿಸಿ ಭಾರತವನ್ನು 307 ಕ್ಕೆ ಕೊಂಡೊಯ್ದಿದ್ದರು. ಅದರ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 77 ಎಸೆತಗಳಲ್ಲಿ 39 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಧ್ರುವ್ ಜುರೆಲ್ ಅವರ ಉತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮಾರ್ಚ್ 7ರಂದು ಐದನೇ ಪಂದ್ಯ

ರಾಂಚಿ ಟೆಸ್ಟ್ ಗೆದ್ದ ನಂತರ ಟೀಂ ಇಂಡಿಯಾ ಧರ್ಮಶಾಲಾ ಟೆಸ್ಟ್ ನಲ್ಲಿ ಗೆದ್ದು 4-1 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳುವ ಕನಸಿನಲ್ಲಿದೆ. ಇಲ್ಲಿಯವರೆಗೆ ಭಾರತದ ಯುವ ಆಟಗಾರರು ಮುನ್ನಡೆ ಸಾಧಿಸಿ ಗೆಲುವಿನ ರೂವಾರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ಅಮೋಘ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಡುವ ಜವಾಬ್ದಾರಿ ಯುವ ಆಟಗಾರರ ಮೇಲಿದೆ.

ಧರ್ಮಶಾಲಾ ಟೆಸ್ಟ್ ಪಂದ್ಯ ಭಾರತಕ್ಕೆ ಮಾತ್ರವಲ್ಲದೆ ಇಂಗ್ಲೆಂಡ್‌ಗೂ ಅತ್ಯಂತ ಮಹತ್ವದ್ದಾಗಿದೆ. ರ್ಮಶಾಲಾ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಗೆಲುವಿನೊಂದಿಗೆ ಮುಗಿಸಲು ಬೆನ್ ಸ್ಟೋಕ್ಸ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Story first published: Monday, March 4, 2024, 19:49 [IST]
Other articles published on Mar 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+