ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಎರಡೂ ತಂಡಗಳು ಜನೆವರಿ 3ರಂದು ಕೇಪ್‌ಟೌನ್‌ನಲ್ಲಿ ಮುಖಾಮುಖಿಯಾಗಲಿವೆ. 31 ವರ್ಷಗಳ ಇತಿಹಾಸದಲ್ಲಿ ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವಲ್ಲಿ ಟೀಮ್ ಇಂಡಿಯಾ ಯಶಸ್ಸು ಕಂಡಿಲ್ಲ. ಆದರೆ 2022 ರಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಆತಿಥೇಯ ತಂಡಕ್ಕೆ ಕಾಡಿದ್ದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರು ಈ ಮೈದಾನದಲ್ಲಿ ಮಾಡಲು ಸಾಧ್ಯವಾಗದ ಸಾಧನೆಯನ್ನು ಯುವ ಆಟಗಾರ ಈ ಮೈದಾನದಲ್ಲಿ ಮಾಡಿದ್ದಾರೆ.

ಈ ಸಾಧನೆಯನ್ನು ಮಾಡಿದ್ದು ಬೇರೆ ಯಾರು ಅಲ್ಲ, 1 ವರ್ಷದಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ರಿಷಬ್ ಪಂತ್. ಅಂದು ಯುವ ಬ್ಯಾಟರ್ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಜಗತ್ತು ಅವನಲ್ಲಿನ ಬ್ಯಾಟಿಂಗ್ ಕ್ಷಮತೆಯ ಬಗ್ಗೆ ಅಂದಾಜು ಮಾಡಿತ್ತು.
2022 ರ ಜನವರಿಯಲ್ಲಿ ಕೇಪ್ ಟೌನ್‌ನಲ್ಲಿ ಟೀಮ್ ಇಂಡಿಯಾ ಕಷ್ಟಪಡುತ್ತಿರುವಂತೆ ಕಾಣುತ್ತಿತ್ತು. ಈ ಸಮಯದಲ್ಲಿ ರಿಷಬ್ ಪಂತ್ ಶತಕ ಗಳಿಸಿದರು. ಈ ನೆಲದಲ್ಲಿ 11 ವರ್ಷಗಳಿಂದ ಇದ್ದ ಶತಕದ ಬರವನ್ನು ಕೊನೆಗಾಣಿಸಿದ ಕೀರ್ತಿ ರಿಷಭ್‌ಗೆ ಸಲ್ಲುತ್ತದೆ.
2011ರಲ್ಲಿ ಸಚಿನ್ ತೆಂಡೂಲ್ಕರ್ ಇದೇ ಮೈದಾನದಲ್ಲಿ ಶತಕ ಸಿಡಿಸಿದ್ದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ 31 ವರ್ಷಗಳಿಂದ ಟೆಸ್ಟ್ ಪಂದ್ಯಗಳು ನಡೆಯುತ್ತಿದ್ದು, ಇದರಲ್ಲಿ ಟೀಂ ಇಂಡಿಯಾ ತನ್ನ ತವರು ಟೆಸ್ಟ್‌ನಲ್ಲಿ ಆಫ್ರಿಕಾವನ್ನು 7 ಬಾರಿ ಸೋಲಿಸಿದೆ. ಆದರೆ ಇದುವರೆಗೆ ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಟೆಸ್ಟ್ ನಲ್ಲಿ ಯಶ ಕಂಡಿಲ್ಲ. ಅಲ್ಲದೆ ಟೀಮ್ ಇಂಡಿಯಾ ಪರ ಅದೆಷ್ಟೋ ಸೂಪರ್ ಸ್ಟಾರ್ ಬ್ಯಾಟರ್‌ಗಳು ಆಡಿದ್ದಾರೆ. ಆದರೆ, ಕೇವಲ 3 ಭಾರತೀಯ ಬ್ಯಾಟ್ಸ್ ಮನ್ ಗಳು ಮಾತ್ರ ಈ ಅಂಗಳದಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರು ಕೇಪ್ ಟೌನ್‌ನ ಕ್ರೀಡಾಂಗಣದಲ್ಲಿ ಅಬ್ಬರಿಸಿದ ಬ್ಯಾಟರ್. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಮ್ಮೆ ಈ ಸಾಧನೆ ಮಾಡಿದ್ದಾರೆ. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಚಿನ್, ದಕ್ಷಿಣ ಆಫ್ರಿಕಾದ ಬೌಲರ್‌ಗಳ ಬೆವರು ಇಳಿಸಿದ್ದರು. ಅಲ್ಲದೆ ಕೇಪ್ ಟೌನ್ ನಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಸಚಿನ್ ಪಾತ್ರರಾಗಿದ್ದರು.
ಸಚಿನ್ ಈ ಸಾಧನೆಯನ್ನು ಜನವರಿ 2, 1997 ರಂದು ಸಾಧಿಸಿದರು. ಇದಾದ ಬಳಿಕ ಮೊಹಮ್ಮದ್ ಅಜರುದ್ದೀನ್ ಕೂಡ ಅದೇ ದಿನ 115 ರನ್ ಗಳಿಸಿದ್ದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಜನವರಿ 3 ರಂದು ಕೇಪ್ ಟೌನ್‌ನಲ್ಲಿ ಎರಡನೇ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. 2022 ರಲ್ಲಿ, ಯುವ ಆಟಗಾರ ರಿಷಭ್ ಪಂತ್ ದಶಕಗಳ ಶಕತದ ಬರವನ್ನು ಕೊನೆಗೊಳಿಸಿದರು.
ಭೀಕರ ಕಾರು ಅಪಘಾತದ ನಂತರ ಪಂತ್ ಇನ್ನೂ ಟೀಮ್ ಇಂಡಿಯಾಗೆ ವಾಪಸಾಗಿಲ್ಲ. ಇದೀಗ ಕೇಪ್ ಟೌನ್‌ನಲ್ಲಿ ಶತಕ ಸಿಡಿಸುವ ಮೂಲಕ ಯಾವ ಬ್ಯಾಟ್ಸ್‌ಮನ್, ಸಚಿನ್, ಅಜರ್, ರಿಷಭ್ ಸಾಧನೆಯನ್ನು ಸರಿದೂಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೇಪ್ ಟೌನ್‌ನಲ್ಲಿ ಉಭಯ ತಂಡಗಳ ನಡುವೆ 6 ಪಂದ್ಯಗಳು ನಡೆದಿದ್ದು, ಇದರಲ್ಲಿ ದಕ್ಷಿಣ ಆಫ್ರಿಕಾ 4 ಪಂದ್ಯಗಳನ್ನು ಗೆದ್ದರೆ 2 ಪಂದ್ಯಗಳು ಡ್ರಾಗೊಂಡಿವೆ.