Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್ ರೌಂಡರ್ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ?!

It will be nice to work under Virat Kohli in IPL: Glenn Maxwell

ಬೆಂಗಳೂರು: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ಗೆ ಸಿದ್ಧತೆಗಳು ನಡೆಯುತ್ತಿವೆ. ಫೆಬ್ರವರಿ 18ರಂದು 2021ರ ಐಪಿಎಲ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸ್ಟ್ರೇಲಿಯಾ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಾಲಾಗುವ ನಿರೀಕ್ಷೆಯಿದೆ.

ಫೆಬ್ರವರಿ 18ರಂದು ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ 2021ರ ಐಪಿಎಲ್ ಆವೃತ್ತಿಗಾಗಿ ಆಟಗಾರರ ಹರಾಜು ನಡೆಯಲಿದೆ. ಈ ವೇಳೆ ಎಂಟು ಫ್ರಾಂಚೈಸಿಗಳು ತಮ್ಮಲ್ಲಿರುವ ಖಾಲಿ ಸ್ಥಳಗಳಿಗಾನುಸಾರ ಆಟಗಾರರನ್ನು ಖರೀದಿಸಲಿವೆ. ಈ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್‌ನತ್ತ ಬಹುತೇಕ ಫ್ರಾಂಚೈಸಿಗಳು ಕಣ್ಣಿಡಲಿವೆ.

2020ರ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಆಡಿದ್ದರು. ಆದರೆ ಕಳೆದ ಸೀಸನ್‌ನಲ್ಲಿ ಮ್ಯಾಕ್ಸ್‌ವೆಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಕೆXIಪಿ ಫ್ರಾಂಚೈಸಿ ಈ ಬಾರಿ ಮ್ಯಾಕ್ಸ್‌ವೆಲ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತ್ತು. ಮ್ಯಾಕ್ಸ್‌ವೆಲ್ ಈಗ ಹರಾಜು ಕಣದಲ್ಲಿದ್ದು, ಅವರ ಮೂಲಬೆಲೆ 2 ಕೋ.ರೂ. ಆಗಿದೆ.

ಆರ್‌ಸಿಬಿ ತಂಡ ಸೇರುವ ಕುರಿತು ಮಾತನಾಡಿರುವ ಮ್ಯಾಕ್ಸ್‌ವೆಲ್, 'ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅಡಿಯಲ್ಲಿ ಕೆಲಸ ಮಾಡಲು ತುಂಬಾ ಚೆನ್ನಾಗಿರುತ್ತದೆ. ಆತನ ಜೊತೆಗಿದ್ದು ಬ್ಯಾಟಿಂಗ್‌ ಮಾಡುವುದನ್ನು ನಾನು ಸಂಭ್ರಮಿಸುತ್ತೇನೆ,' ಎಂದಿದ್ದಾರೆ. ಹರಾಜಿನ ವೇಳೆ ಮ್ಯಾಕ್ಸ್‌ವೆಲ್ ಯಾರ ಪಾಲಾಗಲಿದ್ದಾರೆ ಅನ್ನೋದು ಖಾತರಿಯಾಗಲಿದೆ. ಕೊಹ್ಲಿ ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ.

Story first published: Tuesday, February 16, 2021, 8:00 [IST]
Other articles published on Feb 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+