For Quick Alerts
ALLOW NOTIFICATIONS  
For Daily Alerts
 

ಆಸಿಸ್ ಪ್ರವಾಸದಲ್ಲಿ ಆ ಓರ್ವ ಆಲ್‌ರೌಂಡರ್ ಲಭ್ಯತೆ ಭಾರತಕ್ಕೆ ಲಾಭ: ಇಯಾನ್ ಚಾಪೆಲ್

It Will Help If Pandya Is Available For India: Ian Chappell

ಸೀಮಿತ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್ ಸರಣಿಗೆ ಆಯ್ಕೆಯಾಗಬೇಕು ಎಂದು ಇಯಾನ್ ಚಾಪೆಲ್ ಹೇಳಿದ್ದಾರೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾಗೆ ಕೈಗೊಳ್ಳಲಿರುವ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಅವಕಾಶವನ್ನು ನೀಡಬೇಕು ಎಂದು ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದರಾದರೂ 2018ರ ಬಳಿಕ ಟೆಸ್ಟ್ ತಂಡದಿಂದ ದೂರವಾಗಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಬೆನ್ನುನೋವಿಗೆ ತುತ್ತಾಗ ಸುದೀರ್ಘ ಸಮಯ ವಿಶ್ರಾಂತಿಯಲ್ಲಿದ್ದ ಲಾಕ್‌ಡೌನ್‌ಗೆ ಸ್ವಲ್ಪವೇ ಮುನ್ನ ಸಂಪೂರ್ಣವಾಗಿ ಚೇತರಿಕೆಯ ಬಳಿಕ ದೇಸಿ ಟೂರ್ನಿಯಲ್ಲಿ ಪಾಲ್ಗೊಂಡು ತಮ್ಮ ಪುನರಾಗಮನವನ್ನು ಸಾರಿದ್ದರು. ಆದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಲಾಕ್‌ಡೌನ್ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.

ಹಾರ್ದಿಕ್ ಪಾಂಡ್ಯಾ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಇಯಾನ್ ಚಾಪೆಲ್. ಹಾರ್ದಿಕ್ ಪಾಂಡ್ಯ ಲಭ್ಯವಿದ್ದರೆ ಭಾರತಕ್ಕೆ ಲಾಭವಾಗಲಿದೆ ಎಂದು ಹೇಳಿದ್ದಾರೆ.

ತಂಡದಲ್ಲಿರುವ ಮುಖ್ಯ ವೇಗಿಗಳಿಗೆ ವಿಶ್ರಾಂತಿಯ ಅಗತ್ಯವಿದ್ದಾಗ ವೇಗದ ಬೌಲಿಂಗ್‌ಗೆ ಹಾರ್ದಿಕ್ ಪಾಂಡ್ಯ ಹೆಚ್ಚುವರಿ ಆಯ್ಕೆಯಾಗಿರಲಿದ್ದಾರೆ. ಈ ಮೂಲಕ ಎದುರಾಳಿ ತಮಡದ ಮೇಲೆ ಒತ್ತಡವನ್ನು ಕಾಯ್ದುಕೊಳ್ಳು ಸಾಧ್ಯವಾಗುತ್ತದೆ ಎಂದು ಇಯಾನ್ ಚಾಪೆಲ್ ಹೇಳಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ಬರೆದಿರುವ ಅಂಕಣ ಬರಹದಲ್ಲಿ ಚಾಪೆಲ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ನ ಭೀತಿಯ ಮಧ್ಯೆ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ಇನ್ನೂ ಖಚಿತ ನಿರ್ಧಾರಕ್ಕೆ ಬರಲು ಎರಡೂ ಮಂಡಳಿಗಳಿಗೆ ಸಾಧ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ ಸರಣಿ ಪೂರ್ವನಿರ್ಧರಿತವಾಗಿಯೇ ನಡೆಯಲಿದೆ ಎನ್ನಲಾಗುತ್ತಿದೆ. ಸಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. 2018ರಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲೇ ಮಣಿಸಲು ಯಶಸ್ವಿಯಾಗಿತ್ತು. ಅದೇ ಹುಮ್ಮಸ್ಸಿನಲ್ಲಿ ಭಾರತ ಮತ್ತೆ ಆಸಿಸ್ ನೆಲಕ್ಕಿಳಿಯಲು ಎದುರು ನೋಡುತ್ತಿದೆ.

Story first published: Tuesday, June 9, 2020, 12:45 [IST]
Other articles published on Jun 9, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+