ಮುಂಬೈ: ಭರವಸೆಯ ಬ್ಯಾಟರ್ ಜಸ್ಟಿನ್ ಮೊಸ್ಕಾ ಹಾಗೂ ಆಂಥೋನಿ ಮೊಸ್ಕಾ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಇಟಲಿ ಟಿ20 ವಿಶ್ವಕಪ್‌ನ "ಸಿ" ಗುಂಪಿನ ಪಂದ್ಯದಲ್ಲಿ ನೇಪಾಳ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿ, ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಇಟಲಿ ಇತಿಹಾಸ ನಿರ್ಮಿಸಿದೆ. ನೇಪಾಳ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರುವ ಕನಸು ಕಮರಿದೆ.
ನೇಪಾಳ ನೀಡಿದ್ದ 124 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡದ ಆರಂಭ ಭರ್ಜರಿಯಾಗಿತ್ತು. ಇಟಲಿ ತಂಡದ ಪರ ಇನಿಂಗ್ಸ್ ಆರಂಭಿಸಿದ ಮೊಸ್ಕಾ ಸಹೋದರರು ನೇಪಾಳ ತಂಡದ ಬೌಲರ್‌ಗಳನ್ನು ಕಟ್ಟಿ ಹಾಕಿದರು. ಇವರು ಸ್ಥಿರ ಪ್ರದರ್ಶನ ನೀಡಿ ರನ್ ವೇಗದಲ್ಲಿ ಸ್ಥಿರತೆ ಕಾಯ್ದುಕೊಂಡಿತು. ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಕಾಟ ನೀಡಿದ್ದ ನೇಪಾಳ ತಂಡದ ಬೌಲರ್‌ಗಳ ಇಟಲಿ ತಂಡದ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು. ನೇಪಾಳ ತಂತ್ರವನ್ನು ಮೆಟ್ಟಿನಿಂತ ಇಟಲಿ ಏಕಪಕ್ಷೀಯ ಜಯ ಸಾಧಿಸಿತು.

ನೇಪಾಳ ತಂಡದ ವಿರುದ್ಧ ಜಸ್ಟಿನ್ ಮೊಸ್ಕಾ ಹಾಗೂ ಆಂಥೋನಿ ಮೊಸ್ಕಾ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಇನ್ನು ಈ ಜೋಡಿ ಪವರ್ ಪ್ಲೇನಲ್ಲಿ ಸ್ಥಿರ ಪ್ರದರ್ಶನ ನೀಡಿತು. ಅಲ್ಲದೆ 68 ರನ್ ಸೇರಿಸಿತು. ಇಟಲಿ 12.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 124 ರನ್ ಸೇರಿಸಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಇಟಲಿ ಇತಿಹಾಸವನ್ನು ನಿರ್ಮಿಸಿತು. ಆರಂಭಿಕ ಜಸ್ಟಿನ್ ಮೊಸ್ಕಾ 44 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಸಿಡಿಸಿದರು. ಆಂಥೋನಿ ಮೊಸ್ಕಾ 3 ಬೌಂಡರಿ, 6 ಸಿಕ್ಸರ್ ಸಿಡಿಸಿ ಸಹಾಯದಿಂದ ಅಜೇಯ 62 ರನ್ ಬಾರಿಸಿದರು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಕುಶಲ್ ಭುರ್ತೆಲ್ (5) ರನ್ ಕಲೆ ಹಾಕಲು ವಿಫಲರಾದರು. ಎರಡನೇ ವಿಕೆಟ್‌ಗೆ ಆಸಿಫ್ ಶೇಖ್ ಹಾಗೂ ರೋಹಿತ್ ಪೌಡೆಲ್ ಈ ಜೋಡಿ 41 ರನ್ ಸಿಡಿಸಿತು. ಈ ವೇಳೆ ನಾಯಕ ರೋಹಿತ್ ಪೌಡೆಲ್ 23 ರನ್ ಬಾರಿಸಿ ಔಟ್ ಆದರು. ಆಸಿಫ್ ಶೇಖ್ 20 ರನ್ ಬಾರಿಸಿ ತಂಡಕ್ಕೆ ಆಧಾರವಾದರು. 4ನೇ ವಿಕೆಟ್‌ಗೆ ದೀಪೇಂದ್ರ ಸಿಂಗ್ ಐರಿ (17), ಆರಿಫ್ ಶೇಖ್ (27) ಜೋಡಿ 39 ಎಸೆತಗಳಲ್ಲಿ 44 ರನ್ ಸಿಡಿಸಿತು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕಲು ವಿಫಲರಾದರು. ಅಂತಿವಾಗಿ ನೇಪಾಳ 19.3 ಓವರ್‌ಗಳಲ್ಲಿ 123 ರನ್‌ಗಳಿಗೆ ಸರ್ವಪತನ ಕಂಡಿತು.
ಇಟಲಿ ತಂಡದ ಕ್ರಿಶನ್ ಕಲುಗಮಗೇ ಬಿಗುವಿನ ದಾಳಿ ನಡೆಸಿ ಮಿಂಚಿದರು. ಈ ಜೋಡಿ 4 ಓವರ್ ಬೌಲ್ ಮಾಡಿ 18 ರನ್ ನೀಡಿ 3 ವಿಕೆಟ್ ಪಡೆದರು.
ಪಂದ್ಯ ಸೋತ ಬಳಿಕ ಮಾತನಾಡಿರುವ ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ನಮ್ಮ ತಂಡ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಈ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿತ್ತು. ಈ ಪಿಚ್ ಮೇಲೆ 160 ರಿಂದ 170 ರನ್ ಸೇರಿಸಬಹುದಾಗಿತ್ತು. ಆದರೆ ನಮ್ಮ ತಂಡ ಈ ಪಿಚ್ ಮೇಲೆ 123 ರನ್ ಸೇರಿಸಲಷ್ಟೇ ಶಕ್ತವಾಯಿತು ಎಂದು ತಿಳಿಸಿದ್ದಾರೆ.