For Quick Alerts
ALLOW NOTIFICATIONS  
For Daily Alerts
 

Jacob Bethel: ಇಂಗ್ಲೆಂಡ್ ಪರ ಜಾಕೋಬ್ ಬೆಥೆಲ್ ಅರ್ಧಶತಕ ಬಾರಿಸಿ ದಾಖಲೆ

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಜಯಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಉದಯೋನ್ಮುಖ ಆಟಗಾರ ಜಾಕೋಬ್ ಬೆಥೆಲ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಅವರು ಇಂಗ್ಲೆಂಡ್ ಪರ ದಾಖಲೆ ಸೃಷ್ಟಿಸಿದ್ದಾರೆ.

ಭಾರತದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಜಾಕೋಬ್ ಬೆಥೆಲ್ ಪಾತ್ರರಾಗಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಅವರ ದಾಖಲೆಯನ್ನು ಬೆಥೆಲ್ ಮುರಿದಿದ್ದಾರೆ.

Jacob Bethel scored record fifty for England

ಇಂಗ್ಲೆಂಡ್ ಪರ 21 ವರ್ಷ ಮತ್ತು 106 ದಿನಗಳಲ್ಲಿ ಜಾಕೋಬ್ ಬೆಥೆಲ್ ತಮ್ಮ ಎರಡನೇ ಏರಡನೇ ಅರ್ಧಶತಕವನ್ನು ಗಳಿಸಿದರು. ಇದು ಭಾರತದಲ್ಲಿ ಮೊದಲನೆಯದು, 64 ಎಸೆತಗಳಲ್ಲಿ 79.68 ಸ್ಟ್ರೈಕ್ ರೇಟ್‌ನಲ್ಲಿ ಮೂರು ಬೌಂಡರಿಗಳು ಮತ್ತು ಒಂದು ಸಿಕ್ಸರ್ ನೆರವಿನಿಂದ 51 ರನ್‌ಗಳನ್ನು ಗಳಿಸಿದರು. ಜೋ ರೂಟ್ 2013 ರಲ್ಲಿ ಮೊಹಾಲಿಯಲ್ಲಿ ಭಾರತ ವಿರುದ್ಧ ಅರ್ಧಶತಕ ಗಳಿಸಿದಾಗ 22 ವರ್ಷ ಮತ್ತು 24 ದಿನಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿದರು.

ಭಾರತ ಎದುರು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಜಾಕೋಬ್ ಬೆಥೆಲ್ ಬ್ಯಾಟಿಂಗ್‌ಗೆ ಇಳಿದು, ನಾಯಕ ಜೋಸ್ ಬಟ್ಲರ್ ಅವರೊಂದಿಗೆ 59 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಇಬ್ಬರು ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಆದರೆ, ಅವರು ತಮ್ಮ ಅರ್ಧಶತಕವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ತಂಡವನ್ನು 248 ರನ್‌ಗಳ ಕಡಿಮೆ ಗುರಿಯನ್ನು ತಲುಪಿಸುವಲ್ಲಿ ಜಾಕೋಬ್ ಬೆಥೆಲ್ ಇನ್ನಿಂಗ್ಸ್ ನಿರ್ಣಾಯಕ ಪಾತ್ರ ವಹಿಸಿತು.

ಬೆಥೆಲ್ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಇಂಗ್ಲೆಂಡ್ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕಳೆದ ವರ್ಷ ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36 ಎಸೆತಗಳಲ್ಲಿ ಅಜೇಯ 58 ರನ್ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್‌ ಮಾತ್ರವಲ್ಲದೆ, ಅವರು ಸ್ಪಿನ್ನರ್ ಕೂಡ ಹೌದು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅವರನ್ನು 2.60 ಕೋಟಿ ರೂ.ಗೆ ಬಿಡ್ ಮಾಡಿದೆ.

Story first published: Thursday, February 6, 2025, 23:13 [IST]
Other articles published on Feb 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+