For Quick Alerts
ALLOW NOTIFICATIONS  
For Daily Alerts
 

RCB ಸೇರುತ್ತಿದ್ದಂತೆ ಬಂಪರ್ ಲಾಟರಿ ಹೊಡೆದ ಇಂಗ್ಲೆಂಡ್‌ ಪ್ಲೇಯರ್

ಕ್ರಿಕೆಟ್‌ ಕ್ರೀಡೆಯನ್ನು ಜೆಂಟಲ್‌ ಮೆನ್‌ ಗೇಮ್, ಅನಿಶ್ಚಿತತೆಯ ಆಟ ಎನ್ನುತ್ತಾರೆ. ಒಂದು ಸ್ಫೊಟಕ ಇನಿಂಗ್ಸ್‌ ಕಟ್ಟಿದ ಬಳಿಕ ಆತನಿಗೆ ಸ್ಟಾರ್‌ಗಿರಿ ಸಿಗುತ್ತದೆ. ತನ್ನ ಪ್ರದರ್ಶನವನ್ನು ಸ್ಥಿರವಾಗಿಟ್ಟುಕೊಂಡರೆ, ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನವೂ ಸಿಗುತ್ತದೆ. ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ವಯಸ್ಸಿನ ಅಂತರವೇನು ಇಲ್ಲ. ಇತ್ತೀಚಿಗೆ ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ಪ್ಲೇಯರ್‌ ಒಬ್ಬ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಇವರು ಸಿಕ್ಕ ಕೆಲವೇ ಅವಕಾಶವನ್ನು ಬಳಸಿಕೊಂಡು ಅಬ್ಬರಿಸಿದ ಪ್ಲೇಯರ್. ಈಗ ಈ ಪ್ಲೇಯರ್‌ ಮುಖದಲ್ಲಿ ಮಂದಹಾಸವನ್ನು ಮೂಡಿಸುವ ಸುದ್ದಿಯೊಂದು ಬಂದಿದೆ.

ಸೌದಿಯಲ್ಲಿ ನವೆಂಬರ್‌ 24 ಹಾಗೂ 25 ರಂದು ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಆರ್‌ಸಿಬಿ, ಇಂಗ್ಲೆಂಡ್ ತಂಡದ 21 ವರ್ಷದ ಯುವ ಆಟಗಾರ ಜಾಕಬ್ ಬೆಥೆಲ್ ಅವರನ್ನು ಖರೀದಿಸಿತು. ಯುವ ಆಟಗಾರನ ಮೂಲ ಬೆಲೆ 1.25 ಕೋಟಿ ಆಗಿತ್ತು. ಆರ್‌ಸಿಬಿ ಮೆಗಾ ಹರಾಜಿನಲ್ಲ 2.60 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿತು. ಜಾಕಬ್‌ ಆರ್‌ಸಿಬಿ ಸೇರುತ್ತಿದ್ದಂತೆ ಅವರ ಅದೃಷ್ಟವೇ ಬದಲಾಯಿತು.

Jacob Bethell From IPL Auction Jackpot to England s Central Contract

ಆರ್‌ಸಿಬಿ ಪ್ಲೇಯರ್‌ಗೆ ಜಾಕ್‌ಪಾಟ್‌

ನ್ಯೂಜಿಲೆಂಡ್ ಪ್ರವಾಸವನ್ನು ಇಂಗ್ಲೆಂಡ್ ತಂಡ ಕೈ ಗೊಂಡಿದೆ. ಇಂಗ್ಲೆಂಡ್ ತಂಡದ ಭಾಗವಾಗಿರುವ ಜಾಕಬ್ ಬೆಥೆಲ್‌ ಅವರಿಗೆ ಮೊದಲ ಟೆಸ್ಟ್‌ನಲ್ಲಿ ಆಡುವ ಅವಕಾಶ ಲಭಿಸಿತು. ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಥೆಲ್‌ ಉತ್ತಮ ಪ್ರದರ್ಶನ ನೀಡಿದರು. ಇದಕ್ಕೆ ಅವರಿಗೆ ಪ್ರತಿಫಲವೂ ಸಿಕ್ಕಿದೆ. ಬೆಥೆಲ್‌ ಮೊದಲ ಇನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಇನಿಂಗ್ಸ್‌ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲು ಸಹಾಯವಾಯಿತು. ಈ ಇನಿಂಗ್ಸ್‌ ಗುರುತಿಸಿದ ಇಸಿಬಿ ಬಹುಮಾನ ನೀಡಿದೆ.

ಬೆಥೆಲ್‌ ಅವರು ಇಂಗ್ಲೆಂಡ್ ಪರ 8 ಏಕದಿನ ಪಂದ್ಯ ಆಡಿದ್ದು, 27.83 ಸರಾಸರಿಯಲ್ಲಿ 167 ರನ್ ಗಳಿಸಿದ್ದಾರೆ. ಅಲ್ಲದೆ 7 ಟಿ20 ಪಂದ್ಯಗಳಲ್ಲಿ ತಂಡದ ಪರ ಕಣಕ್ಕೆ ಇಳಿದಿರುವ ಇವರು 57.66 ಸರಾಸರಿಯಲ್ಲಿ 173 ರನ್ ಗಳಿಸಿದ್ದಾರೆ.

ಎರಡು ವರ್ಷದ ಕೇಂದ್ರ ಒಪ್ಪಂದ

ಜಾಕೋಬ್ ಬೆಥೆಲ್ ಅವರ ಒಪ್ಪಂದವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮೇಲ್ದರ್ಜೆಗೇರಿಸಿದೆ. ಈ ಎಡಗೈ ಆಟಗಾರ ಎರಡು ವರ್ಷಗಳ ಕೇಂದ್ರ ಒಪ್ಪಂದವನ್ನು ಪಡೆದಿದ್ದಾರೆ. ಈ ಮೂಲಕ ಬೆಥೆಲ್ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರ ಪಟ್ಟಿ ಸೇರಿದ್ದಾರೆ. ಭರವಸೆಯ ಬ್ಯಾಟರ್ ಜೋ ರೂಟ್, ಜೋಸ್ ಬಟ್ಲರ್‌, ಹ್ಯಾರಿ ಬ್ರೂಕ್‌ ಈ ಪಟ್ಟಿಯಲ್ಲಿ ಈ ಮೊದಲು ಸ್ಥಾನ ಪಡೆದಿದ್ದರು. ಈಗ ಈ ಸಾಲಿಗೆ ಯುವ ಆಟಗಾರನ ಎಂಟ್ರಿ ಆಗಿದೆ.

Jacob Bethell From IPL Auction Jackpot to England s Central Contract

ಇನ್ನು ವೇಗದ ಬೌಲರ್‌ ಜೋಫ್ರಾ ಆರ್ಚರ್, ಮ್ಯಾಥ್ಯೂ ಪಾಟ್ಸ್ ಮತ್ತು ಬ್ರೇಡನ್ ಕಾರ್ಸ್ ಅವರ ಒಪ್ಪಂದಗಳನ್ನು 2026 ರವರೆಗೆ ವಿಸ್ತರಿಸಲಾಗಿದೆ.

Story first published: Thursday, December 5, 2024, 9:00 [IST]
Other articles published on Dec 5, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+