ಇನ್ನೆನು ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಆರ್ ಸಿಬಿ ಈ ಬಾರಿ ಚಾಂಪಿಯನ್ ಪಟ್ಟಕ್ಕೇರಲು ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡು ಹಾಗೂ ಯುವ ಆಟಗಾರರ ದಂಡೇ ಇದೆ. ಈ ಬಾರಿ ಹರಾಜಿನಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಭಿನ್ನ ಲೆಕ್ಕಾಚಾರದೊಂದಿಗೆ ತಂಡ ಕಟ್ಟಿದೆ. ಈ ತಂತ್ರ ಎಷ್ಟರ ಮಟ್ಟಿಗೆ ಫಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಆರ್‌ಸಿಬಿ ತಂಡದಲ್ಲಿ ಸ್ಟಾರ್ ವಿದೇಶಿ ಆಟಗಾರರು ಇದ್ದಾರೆ. ಆದರೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ನಾಲ್ಕು ಜನಕ್ಕೆ ಮಾತ್ರ ಅವಕಾಶ ಸಿಗುತ್ತದೆ. ಹೀಗಾಗಿ ಎಲ್ಲರ ಕ್ಷಮತೆಯನ್ನು ಓರೆಗೆ ಹಚ್ಚಿ ಅವಕಾಶವನ್ನು ನೀಡಲಾಗುತ್ತದೆ. ಈ ಬಾರಿ ಆರ್‌ಸಿಬಿ ತಂಡದಲ್ಲಿ ಯುವ ಆಟಗಾರರ ದಂಡು, ಅನುಭವಿಗಳಿಗೆ ಸವಾಲು ಎಸೆಯುವಂತಿದೆ. ಹೀಗಾಗಿ ಒಂದು ಸ್ಥಾನಕ್ಕಾಗಿ ಅನುಭವಿ ಹಾಗೂ ಯುವ ಆಟಗಾರ ನಡುವ ಫೈಟ್ ನಡೆಯಲಿದೆ.

ಅಂಕಿ ಅಂಶಗಳನ್ನು ಗಮನಿಸಿದರೆ ಅನುಭವಿ ಆಟಗಾರನ ಕೈ ಮೇಲಾಗುತ್ತದೆ. ಆದರೆ ಸದ್ಯದ ಫಾರ್ಮ್ ನೋಡಿದರೆ, ಯುವ ಆಟಗಾರನ ಆಟ ಗಮನ ಸೆಳೆಯುತ್ತದೆ. ಹಾಗಿದ್ದರೆ ಅನುಭವಿ ಟೀಮ್ ಡೇವಿಡ್ ಹಾಗೂ ಯುವ ಆಟಗಾರ ಜಾಕಬ್ ಬೇತೆಲ್ ಮಧ್ಯೆ ಫೈಟ್ ನಡೆಯುತ್ತಿದೆ. ಹಾಗಿದ್ದರೆ, ಈ ಇಬ್ಬರಲ್ಲಿ ಯಾರು ತಂಡಕ್ಕೆ ಬೆಸ್ಟ್ ಎಂಬ ಬಗ್ಗೆ ವರದಿ ಇಲ್ಲಿದೆ.
ಸದ್ಯ ಉಭಯ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಈ ಆಟಗಾರರು ಮನಮೋಕ ಪ್ರದರ್ಶನ ನೀಡುತ್ತಿದ್ದಾರೆ. ಜಾಕಬ್ ಬೇತೆಲ್ ಅವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಕ್ಷಮತೆಯನ್ನು ಹೊಂದಿರುವುದಾಗಿ ಸಾರಿ ಹೇಳಿದ್ದಾರೆ. ಅಲ್ಲದೆ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬಲ್ಲೆ ಎಂಬುದನ್ನು ಬ್ಯಾಟ್ ಮೂಲಕ ತಿಳಿಸಿದ್ದಾರೆ. ಇವರು ತಂಡಕ್ಕೆ ಎಂಟ್ರಿ ನೀಡಿದರೆ ಆಂಕರ್ ರೋಲ್ ಪ್ಲೇ ಮಾಡಬಲ್ಲ ಪ್ಲೇಯರ್ ಆಗಬಹುದು.

ಸ್ಥಿರ ಪ್ರದರ್ಶನ ನಿಜಕ್ಕೂ ಆಲ್‌ರೌಂಡರ್ ಟೀಮ್ ಡೇವಿಡ್ ಅವರ ಪ್ಲಸ್ ಪಾಯಿಂಟ್. ಇವರು ಡೆತ್ ಓವರ್‌ಗಳಲ್ಲಿ ಎದುರಾಳಿ ಬೌಲರ್‌ಗಳಿಗೆ ಕಾಡಬಲ್ಲರು. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ವಿರುದ್ಧ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಡೇವಿಡ್, ಬಿಗ್ ಬ್ಯಾಷ್ ಲೀಗ್‌ನಲ್ಲಿ ಆರ್ಭಟಿಸುತ್ತಿದ್ದಾರೆ. ಹೋಬರ್ಟ್ ತಂಡ ಪ್ಲೇ ಆಫ್ ಹಂತ ಪ್ರವೇಶಿಸುವಲ್ಲಿ ಈ ಪ್ಲೇಯರ್ ಕೊಡುಗೆ ಅಪಾರ.
ಜಾಕಬ್ ಬೇತೆಲ್ ಭಿನ್ನ ತಂತ್ರಗಾರಿಕೆ ಹೊಂದಿರುವ ಯುವ ಆಟಗಾರ. ಇವರ ಆಟ ಮಾರ್ಡನ್ ಡೇ ಕ್ರಿಕೆಟ್‌ನ ಕನ್ನಡಿಯಂತೆ ಕಾಣುತ್ತದೆ. ಇವರು ತಮ್ಮ ಆಟವನ್ನು ಯಾವದೇ ಹಂತದಲ್ಲಾದ್ರೂ ಬದಲಾಯಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಇನ್ನು ಇವರು ಆಫ್ ಸ್ಪಿನ್ ಸಹ ಮಾಡಲಿದ್ದು, ಎದುರಾಳಿಗೆ ಕಾಡಬಲ್ಲರು. ಬೆಂಗಳೂರು ತಂಡದಲ್ಲಿ ಎಡಗೈ ಆಟಗಾರರ ಬರ ಇದ್ದು, ಇವರು ಈ ಸ್ಥಾನಕ್ಕೆ ಫಿಟ್ ಆಗಬಲ್ಲ ಪ್ಲೇಯರ್.

ಟೀಮ್ ಡೇವಿಡ್ ಡೆತ್ ಓವರ್‌ಗಳಲ್ಲಿ ಆಡುವ ಧಾಟಿಯನ್ನು ಕಂಡು ಇವರಿಗೆ ಚಾನ್ಸ್ ನೀಡಬಹುದು ಅನಿಸುತ್ತದೆ. ಒತ್ತಡದ ಸನ್ನಿವೇಶದಲ್ಲಿ ನೆಲಕಚ್ಚಿ ಆಡುವ ಕಲೆ ಕೊಂಚ ಕಡಿಮೆ. ಆರ್‌ಸಿಬಿ ತಂಡದಲ್ಲಿ ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ಸ್ಫೋಟಕ ಆಟಗಾರರು ಇದ್ದು, ಇವರಿಗೆ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಠಿಣ. ಇನ್ನು ಟೀಮ್ ಡೇವಿಡ್ ದಿನೇಶ್ ಕಾರ್ತಿಕ್ ಅವರ ಫಿನಿಷರ್ ರೋಲ್‌ನ್ನು ತುಂಬಲು ಸಿದ್ಧರಾಗಿದ್ದಾರೆ. ಆದರೆ ಈ ಬಗ್ಗೆ ಯಾವುದು ಫೈನಲ್ ಆಗಿಲ್ಲ.
ಫಿಲ್ ಸಾಲ್ಟ್, ಜೋಶ್ ಹ್ಯಾಜಲ್‌ವುಡ್, ಲಿಯಾಮ್ ಲಿವಿಂಗ್‌ಸ್ಟೋನ್ ಮೊದಲ ಆಯ್ಕೆಯ ವಿದೇಶಿ ಆಟಗಾರರಾಗಿದ್ದಾರೆ. ಇವರು ತಮಗೆ ತಂಡ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಇನ್ನುಮ್ಯಾನೇಜ್ಮೆಂಟ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಒಪ್ಪುವ ಆಟಗಾರರ ಸಂಖ್ಯೆ ಹೆಚ್ಚಿದೆ. ಇನ್ನು ಆರ್‌ಸಿಬಿ ಜಾಕಬ್ ಬೇತೆಲ್ ಅವರಿಗೆ ಅವಕಾಶ ನೀಡಿದರೆ, ನಾಲ್ಕನೇ ಸ್ಥಾನದಲ್ಲಿ ಆಡಿಸಬೇಕು. ಆಗ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಕ್ರಮಾಂಕದಲ್ಲೂ ವ್ಯತ್ಯಾಸವಾಗುತ್ತದೆ.
ಟೀಮ್ ಡೇವಿಡ್ ತಂಡದಲ್ಲಿ ಸ್ಥಾನ ಪಡೆದರೂ ಇವರು ಫಿನಿಷರ್ ರೂಪದಲ್ಲಿ ಆಡಬೇಕು. ಈಗಾಗಲೇ ಈ ಸ್ಥಾನದ ಮೇಲೆ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಕಣ್ಣು ನೆಟ್ಟಿದ್ದಾರೆ. ಇವರಿಬ್ಬರು ಕಳೆದ ಆವೃತ್ತಿಯಲ್ಲಿ ಪಂಜಾಬ್ ಪರ ಆಡಿದ್ದು ಹೊಂದಾಣಿಕೆ ಸಹ ಚೆನ್ನಾಗಿದೆ. ಹೀಗಾಗಿ ಇವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವುದು ತುಸು ಕಷ್ಟ.
ಜಾಕಬ್ ಬೇತೆಲ್ ಹೊಸ ಚೆಂಡಿನೊಂದಿಗೂ ಬಿಗುವಿನ ಆಫ್ ಸ್ಪಿನ್ ನಡೆಸಬಲ್ಲ ಬೌಲರ್. ಆರ್‌ಸಿಬಿ ಈ ಮೊದಲು ಸಹ ಇಂತಹ ಸಾಹಸ ಮಾಡಿದೆ.
ಜಾಕಬ್ ಬೇತೆಲ್ ಒಬ್ಬ ಯುವ ಆಟಗಾರ. ಅಲ್ಲದೆ ಲೆಫ್ಟ್ ಹ್ಯಾಂಡ್ ಬ್ಯಾಟರ್. ಇವರು ಆಪ್ ಸ್ಪಿನ್ ಮಾಡಬಲ್ಲ ಕ್ಷಮತೆ ಹೊಂದಿರುವ ಆಟಗಾರ. ಇನ್ನು ಕಳೆದ ಕೆಲವು ವರ್ಷಗಳಿಂದ ಟೀಮ್ ಡೇವಿಡ್ ಸಹ ತಂಡ ತನಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಆಟಗಾರ. ಅಲ್ಲದೆ ಫಿನಿಷರ್ ರೋಲ್‌ನಲ್ಲಿ ಮಿಂಚುವ ಪ್ರತಿಭೆ. ಹೀಗಾಗಿ ಮ್ಯಾನೇಜ್ಮೆಂಟ್ ಯಾವ ಲೆಕ್ಕಾಚಾರದಲ್ಲಿ ಯಾರಿಗೆ ಮಣೆ ಹಾಕುತ್ತದೆ ಕಾದು ನೋಡಬೇಕಿದೆ.