ಭಾರತೀಯ ಬೆಡಗಿಯ ಸೌಂದರ್ಯಕ್ಕೆ ಮನಸೋತ RCBಯ ಇಂಗ್ಲೆಂಡ್ ಅಟಗಾರ
ಇಂಗ್ಲೆಂಡ್ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಇಷ್ಟು ದಿನಗಳ ಕಾಲ ಇವರು ತಮ್ಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‌ನಿಂದ ಮೈದಾನದಲ್ಲಿ ಸದ್ದು ಮಾಡಿದ್ದರೆ, ಈ ಬಾರಿ ಯುವತಿಯ ಜೋತೆ ಫೋಟೋಗೆ ಪೋಸ್ ನೀಡಿ ಸಖತ್ ವೈರಲ್ ಆಗುತ್ತಿದ್ದಾರೆ. ಫೋಟೋದಲ್ಲಿರುವ ಬೇಥೆಲ್ ಹಾಗೂ ಯುವತಿಯ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜಾಕೋಬ್ ಬೆಥೆಲ್ ಜೊತೆ ವೈರಲ್ ಚಿತ್ರ ಯಾರೆಂದು ಈಗ ಅಭಿಮಾನಿಗಳು ಹುಡುಕುತ್ತಿದ್ದಾರೆ.
ಇತ್ತೀಚಿಗೆ ಭಾರತದಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದರು. ಇವರು ಆರ್‌ಸಿಬಿ ತಂಡಕ್ಕೆ ಭರ್ಜರಿ ಆರಂಭವನ್ನು ನೀಡುವಲ್ಲಿ ಹೆಸರುವಾಸಿ. ಇಂಗ್ಲೆಂಡ್ ನವರೇ ಆದ ಫಿಲ್ ಸಾಲ್ಟ್ ಗಾಯಕ್ಕೆ ತುತ್ತಾದ ಬಳಿಕ ಆಡುವ ಅವಕಾಶ ಪಡೆದ ಬೆಥೆಲ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದರು. ಇವರಿಗೆ ಭಾರತದಲ್ಲೂ ಅಪಾರ ಅಭಿಮಾನಿಗಳ ಬಳಗವಿದೆ. ಇವರ ಭಾರತೀಯ ಬೆಡಗಿಯ ಸೌಂದರ್ಯಕ್ಕೆ ಬೆರಗಾದರಾ ಎಂಬ ಪ್ರಶ್ನೆಗಳು ಈಗ ಹರಿದಾಡುತ್ತಿವೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಎರಡು ಫೋಟೋಗಳು, ಜಾಕೋಬ್ ಬೆಥೆಲ್ ಭಾರತೀಯ ಮಹಿಳೆಯನ್ನು ಅಪ್ಪಿಕೊಳ್ಳುತ್ತಿರುವಾಗ ಪೋಸ್ ನೀಡುತ್ತಿರುವುದು, ಹಾಗೂ ಇನ್ನೊಂದು ಫೋಟೋದಲ್ಲಿ, ಬೆಥೆಲ್ ಮಹಿಳೆಯನ್ನು ಚುಂಬಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಅವರ ಮುಖಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಈ ಯುವತಿ ಯಾರು ಎಂಬ ಬಗ್ಗೆ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ.
ಕ್ರಿಕೆಟಿಗ ಜೇಕಬ್ ಬೆಥೆಲ್ ಮತ್ತು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಅಂಕಿತಾ ಅವರ ನಡುವಿನ ಒಡನಾಟವು ಇದೀಗ ಡೇಟಿಂಗ್ ವದಂತಿಗಳಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಜಾಕೋಬ್ ಬೆಥೆಲ್ ಭಾರತೀಯ ಮಹಿಳೆಯೊಂದಿಗೆ ಡೇಟಿಂಗ್ ನಡೆಸಿದ್ದಾರೆಂದು ಚರ್ಚೆಗಳನ್ನು ಆರಂಭಿಸಿದ್ದಾರೆ. ಅವರು ಸ್ನೇಹಿತರೇ ಅಥವಾ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಎರಡೂ ಫೋಟೋಗಳನ್ನು ಹೌಸ್ ಆಫ್ ಅಂಕಿತಾ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಇವರ ಹೆಸರು ಅಂಕಿತಾ ಪಟೇಲ್, ಮುಂಬೈ ನಿವಾಸಿ. ಅಂಕಿತಾ ವೃತ್ತಿಯಲ್ಲಿ ಮೇಕಪ್ ಕಲಾವಿದೆ ಮತ್ತು ಮುಖ್ಯವಾಗಿ ಸೆಲೆಬ್ರಿಟಿಗಳಿಗೆ ಲುಕ್‌ಗಳನ್ನು ರಚಿಸುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪುಟವು ರಿತೇಶ್ ದೇಶಮುಖ್, ಶಿಲ್ಪಾ ಶೆಟ್ಟಿ, ಪಾಲಕ್ ತಿವಾರಿ ಮತ್ತು ಹಿನಾ ಖಾನ್‌ರಂತಹ ಅನೇಕ ಪ್ರಸಿದ್ಧ ನಟರ ಫೋಟೋಗಳನ್ನು ಒಳಗೊಂಡಿದೆ.
ಜಾಕೋಬ್ ಬೆಥೆಲ್ ಸಾಧನೆ
ಜಾಕೋಬ್ ಬೆಥೆಲ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಭವಿಷ್ಯದ ಆಟಗಾರ ಎಂದು ಪರಿಗಣಿಸಲಾಗುತ್ತಿದೆ. ಭಾರತದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಇವರು ಟೀಮ್ ಇಂಡಿಯಾ ವಿರುದ್ಧ ಶತಕ ಬಾರಿಸಿ ಮಿಂಚಿದ್ದರು. ಈ ಇನಿಂಗ್ಸ್ ಬಳಿಕ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ಆಟಗಾರನಾದರು. 22 ವರ್ಷದ ಬ್ಯಾಟ್ಸ್‌ಮನ್ ತಮ್ಮ ಯುವ ವೃತ್ತಿಜೀವನದಲ್ಲಿ 7 ಟೆಸ್ಟ್‌ಗಳು, 21 ಏಕದಿನಗಳು ಮತ್ತು 31 ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ, ಕ್ರಮವಾಗಿ 496, 603 ಮತ್ತು 697 ರನ್‌ಗಳನ್ನು ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications