Jacob Bethell: ಭಾರತದಲ್ಲಿ ಇಂದು ರಿಲೀಸ್ ಆಗಲಿದೆ RCB ಪ್ಲೇಯರ್ ಟೀಸರ್
ಬುಧವಾರ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳ ಸಾಕ್ಷಿಯಾಗಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಈ ಪ್ರಕಟಿತ ತಂಡದಲ್ಲಿ ಎಲ್ಲರ ಕಣ್ಣು ಇರುವುದೇ ಹಾಲ್ಗೆನ್ನೆ ಮುಖದ, ಯುವ ಆಟಗಾರನ ಮೇಲೆ. ಭಾರತೀಯ ಅಭಿಮಾನಿಗಳು ಒಂದು ರೀತಿ ನೋಡಿದರೆ, ಆರ್‌ಸಿಬಿ ಅಭಿಮಾನಿಗಳು ನೋಡುವ ದೃಷ್ಟಿಯೇ ಬೇರೆಯ ರೀತಿ ಆಗಿದೆ.
ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ತನ್ನ ಹವಾ ಕ್ರಿಯೇಟ್ ಮಾಡಿರುವ ಜಾಕಬ್ ಬೇತೆಲ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇವರು ಈಗಾಗಲೇ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಎಲ್ಲರ ಚಿತ್ತ ಕದ್ದಿದ್ದಾರೆ. 21ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ಮೂರು ಫಾರ್ಮೆಟ್ ಆಡಿ ಸೈ ಎನಿಸಿಕೊಂಡಿರುವ ಬೇತೆಲ್, ಸ್ಪಿನ್ ಫ್ರೆಂಡ್ಲಿ ಟ್ರ್ಯಾಕ್‌ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ರಿಲೀಸ್ ಆಗಲಿದೆ ಆರ್‌ಸಿಬಿ ಪ್ಲೇಯರ್ ಟೀಸರ್
ಜಾಕಬ್ ಬೇತೆಲ್ ಲೆಫ್ಟ್ ಹ್ಯಾಂಡ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ವೆಸ್ಟ್ ಇಂಡೀಸ್‌ನ ಬಾಬ್ರಡೋಸ್‌ನಲ್ಲಿ ಜನಿಸಿದರೂ ಸಹ ಜಾಕಬ್ ಕ್ರಿಕೆಟ್ ವ್ಯಾಕರಣಗಳನ್ನು, ಇಂಗ್ಲೆಂಡ್‌ನಲ್ಲಿ ಕಲಿತರು. ಈಗ ತಮ್ಮ ಆಟದ ಮೂಲಕ ವಿಶ್ವದಲ್ಲೇ ಭಾರೀ ಸದ್ದು ಮಾಡಿರುವ ಆಟಗಾರ. ವೆಸ್ಟ್ ಇಂಡೀಸ್ ವಿರುದ್ಧ ಇವರು ಆಡಿದ ಧಾಟಿ ನೋಡಿದರೆ, ಈ ಪೋರ ಇಷ್ಟು ಚೆನ್ನಾಗಿ ಆಡಬಹುದಾ ಎಂದು ಪ್ರಶ್ನೆ ಮೂಡುತ್ತದೆ.
ಇಂಗ್ಲೆಂಡ್ ಪರ ಮಿಡ್ಲ್ ಆರ್ಡರ್‌ನಲ್ಲಿ ಬ್ಯಾಟ್ ಮಾಡುವ ಬೇತೆಲ್ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ. ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್‌ನಲ್ಲಿ ಇವರು ಹೇಗೆ ಆಡಬಹುದು ಎಂಬ ಲೆಕ್ಕಾಚಾರ ಈಗಿನಿಂದಲೇ ಅಭಿಮಾನಿಗಳಲ್ಲಿ ಶುರವಾಗಿದೆ. ಬ್ಲಾಕ್ ಬಾಸ್ಟರ್ ಮೂವಿಯನ್ನು ನೋಡುವ ಮುನ್ನವೇ, ಚಿತ್ರದ ಟೀಸರ್ ತೋರಿಸಲು ಜಾಕಬ್ ಸಹ ಸಿದ್ಧರಾಗಿದ್ದಾರೆ.
ಜಾಕಬ್ ಸಾಧನೆ
ಈಗಾಗಲೇ ಜಾಕಬ್ ಬೇತೆಲ್ ಲೀಗ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಆಗಿದೆ. ಇವರು ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 196 ರನ್ ಸಿಡಿಸಿದ್ದಾರೆ. ಈ ವೇಳೆ ಒಂದು ಅರ್ಧಶತಕ ಬಾರಿಸಿದ್ದಾರೆ. ಇವರು ಈಗಾಗಲೇ ಇಂಗ್ಲೆಂಡ್ ಪರ ಏಳು ಟಿ20 ಪಂದ್ಯಗಳನ್ನು ಆಡಿದ್ದು 167ರ ಸ್ಟ್ರೈಕ್ ರೇಟ್‌ನಲ್ಲಿ 173 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ.

ಆರ್‌ಸಿಬಿ ಖರೀದಿ
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹಾರಜಿನಲ್ಲಿ ಜಾಕಬ್ ಬೇತೆಲ್ ಅವರಿಗೆ ಆರ್‌ಸಿಬಿ ಮಣೆ ಹಾಕಿದೆ. ಹರಾಜಿನಲ್ಲಿ 1.25 ಕೋಟಿ ರೂ ಮೂಲ ಬೆಲೆ ಹೊಂದಿದ್ದ ಪ್ಲೇಯರ್‌ಗೆ ಆರ್‌ಸಿಬಿ 2.60 ಕೋಟಿ ನೀಡಿ ತಂಡಕ್ಕೆ ಖರೀದಿ ಮಾಡಿದೆ. ಐಪಿಎಲ್ 2025ರಲ್ಲಿ ಜಾಕಬ್ ಆರ್‌ಸಿಬಿ ಪರ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications