Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jacob Duffy: ಎಸ್‌ಆರ್‌ಎಚ್‌ ಬ್ಯಾಟರ್‌ಗಳಿಗೆ ಡಫಿ ಶಾಕ್: ಪದಾರ್ಪಣಾ ಪಂದ್ಯದಲ್ಲಿ ಜೇಕಬ್‌ ಇಂಪ್ಯಾಕ್ಟ್‌

19ನೇ ಆವೃತ್ತಿಯ ಐಪಿಎಲ್ ಆರಂಭವಾಗಿದೆ. ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿ 6 ವಿಕೆಟ್‌ ಜಯ ಸಾಧಿಸಿದೆ. ಈ ಮೂಲಕ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತುವ ಅಭಿಯಾನವನ್ನು ಸೊಗಸಾಗಿ ಆರಂಭಿಸಿದೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳಿಗೆ ಒಂದು ಪ್ರಶ್ನೆ ಬಹುವಾಗಿ ಕಾಡುತ್ತಿತ್ತು. ಈ ಪ್ರಶ್ನೆಗೂ ಮೊದಲ ಪಂದ್ಯದಲ್ಲೇ ಉತ್ತರ ಸಿಕ್ಕಿದೆ.

ಆರ್‌ಸಿಬಿ ತಂಡದ ಭರವಸೆಯ ವೇಗದ ಬೌಲರ್‌ ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್‌ವುಡ್‌ ಆರಂಭಿಕ ಪಂದ್ಯಗಳಿಂದ ಫಿಟ್ ಆಗಿಲ್ಲ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿ ಒಂದು ಪ್ರಶ್ನೆ ಮೂಡಿತ್ತು. ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ತಂಡದ ವೇಗದ ಬೌಲಿಂಗ್‌ ಜವಾಬ್ದಾರಿಯನ್ನು ಹೊತ್ತು ಕೊಳ್ಳುವುದು ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಪ್ರಶ್ನೆಗೆ ಶನಿವಾರ ಉತ್ತರ ಸಿಕ್ಕಿದೆ.

Jacob Duffy

ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದಾರ್ ಟಾಸ್ ಗೆದ್ದ ಬಳಿಕ ಪ್ಲೇಯಿಂಗ್ ಇಲೆವೆನ್ ಘೋಷಿಸಿದಾಗ, 31 ವರ್ಷದ ನ್ಯೂಜಿಲೆಂಡ್ ವೇಗಿ ಜೇಕಬ್‌ ಡಫಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾಗಿ ತಿಳಿಯಿತು. ಇವರು ಕಿವೀಸ್ ತಂಡದ ಪರ ನೀಡಿರುವ ಪ್ರದರ್ಶನ ಅಭಿಮಾನಿಗಳಿಗೆ ತಿಳಿದಿದೆ. ಆದರೆ ಐಪಿಎಲ್‌ನಲ್ಲಿ ಆಡಿದ ಅನುಭವ ಅವರಿಗೆ ಇರಲಿಲ್ಲ. ಹೀಗಾಗಿ ಇವರ ಪ್ರದರ್ಶನದ ಮೇಲೆ ಪ್ರಶ್ನೆಗಳು ಎದ್ದಿದ್ದವು. ಆದರೆ ಇವರು ತಾವು ಎಸೆದ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಇದಕ್ಕೆ ಉತ್ತರವನ್ನು ನೀಡಿದ್ದಾರೆ.

ಪವರ್ ಪ್ಲೇನಲ್ಲಿ ಪವರ್ ಫುಲ್‌ ಬೌಲಿಂಗ್‌

ಜೋಶ್‌ ಹ್ಯಾಜಲ್‌ವುಡ್‌ ಅವರ ಅನುಪಸ್ಥಿತಿಯಲ್ಲಿ ಜೇಕಬ್‌ ಡಫಿ ಅವರು ಬೌಲಿಂಗ್ ಜವಾಬ್ದಾರಿಯನ್ನು ಪಡೆದುಕೊಂಡರು. ತಂಡ ಇವರ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ದಾಳಿ ನಡೆಸಿ ಗಮನ ಸೆಳೆದರು. ಇವರು ಆರಂಭದಲ್ಲೇ ತಮ್ಮ ಕೋಟಾದ ನಾಲ್ಕೂ ಓವರ್ ಬೌಲಿಂಗ್ ಮಾಡಿ ಎಸ್‌ಆರ್‌ಎಚ್‌ ಬ್ಯಾಟರ್‌ಗಳಿಗೆ ಕಾಟ ನೀಡಿದರು. ಇವರು ತಮ್ಮ ಬೌಲಿಂಗ್‌ನಲ್ಲಿ ಭಿನ್ನ ವಿಭಿನ್ನ ತಂತ್ರವನ್ನು ಪ್ರಯೋಗಿಸಿ ಆರ್‌ಸಿಬಿ ತಂಡ ಆರಂಭಿಕ ಮೇಲುಗೈ ಸಾಧಿಸಲು ನೆರವಾದರು.

ಜೇಕಬ್‌ ಡಫಿ ಆರಂಭದಲ್ಲಿ ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ಅವರಿಗೆ ಬ್ಯಾಕ್ ಆಫ್ ದಿ ಲೆಂತ್ ಎಸೆತವನ್ನು ಎಸೆದರು. ಅಭಿಷೇಕ್‌ ಈ ಎಸೆತವನ್ನು ಪುಲ್ ಮಾಡಲು ಹೋಗಿ ಜಿತೇಶ್‌ ಶರ್ಮಾ ಅವರಿಗೆ ಕ್ಯಾಚ್ ನೀಡಿದರು. ಇನ್ನೋರ್ವ ಸ್ಫೋಟಕ ಬ್ಯಾಟರ್ ಟ್ರಾವಿಸ್‌ ಹೆಡ್‌ ಅವರಿಗೆ ಗಂಟೆಗೆ 136 ಕಿಲೋಮೀಟರ್ ವೇಗದಲ್ಲಿ ಔಟ್ ಸೈಡ್ ಆಫ್‌ ಸ್ಟಂಪ್‌ ಎಸೆತವನ್ನು ಹಾಕಿದರು. ಇದನ್ನು ಪುಲ್ ಮಾಡಲು ಹೋದ ಹೆಡ್, ಫಿಲ್ ಸಾಲ್ಟ್‌ಗೆ ಕ್ಯಾಚ್ ನೀಡಿದರು. ಭರವಸೆಯ ಬ್ಯಾಟರ್‌ ನಿತೀಶ್ ಕುಮಾರ್ ರೆಡ್ಡಿ ಸಹ ಡಫಿ ಎಸೆದ ಶಾರ್ಟ್ ಡೆಲಿವರಿಯನ್ನು ತಪ್ಪಾಗಿ ಗ್ರಹಿಸಿ ಪುಲ್ ಮಾಡಲು ಹೋಗಿ ಕ್ಯಾಚ್ ನೀಡಿದರು.

ಗೆಲುವಿಗೆ ಇದೇ ಕಾರಣ

ಜೇಕಬ್‌ ಡಫಿ ತಮ್ಮ ಕೋಟಾದ 4 ಓವರ್‌ಗಳಲ್ಲಿ 22 ರನ್‌ ನೀಡಿ ಮೂರು ವಿಕೆಟ್‌ ಪಡೆದರು. ಈ ವೇಳೆ ಇವರು 13 ಡಾಟ್‌ ಬೌಲ್‌ಗಳನ್ನು ಸಹ ಎಸೆದರು. ಇವರ ಈ ಭರ್ಜರಿ ಪ್ರದರ್ಶನ ನಿಶ್ಚಿತವಾಗಿ ಪಂದ್ಯದ ಗತಿಯನ್ನೇ ಬದಲಿಸಿತು. ಇವರು ಪವರ್‌ ಪ್ಲೇನಲ್ಲಿ ಪವರ್‌ ಫುಲ್‌ ಹಿಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಿ ಬೆಂಗಳೂರು ತಂಡದ ಜಯದಲ್ಲಿ ಮಿಂಚಿದರು. ಒಟ್ಟಾರೆಯಾಗಿ ಹೇಳುವುದಾದರೆ, 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಜೇಕಬ್ ಡಫಿ ರೂಪದಲ್ಲಿ ಒಬ್ಬ ಭರವಸೆಯ ವೇಗಿ ಸಿಕ್ಕಂತಾಗಿದೆ.

Story first published: Sunday, March 29, 2026, 6:00 [IST]
Other articles published on Mar 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+