Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅದ್ಭುತ ಥ್ರೋನಿಂದ ಖವಾಜಾ ಪೆವಿಲಿಯನ್‌ಗೆ ಅಟ್ಟಿದ ಜಡೇಜಾ: ವಿಡಿಯೋ

Jadeja carries out an amazing throw to dismiss Khawaja

ಅಡಿಲೇಡ್, ಜನವರಿ 15: ಆಸ್ಟ್ರೇಲಿಯಾ ತಂಡದ ಅಪಾಯಕಾರಿ ಆಟಗಾರ ಉಸ್ಮಾನ್ ಖವಾಜಾ ಅವರನ್ನು ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಅದ್ಭುತ ರೀತಿಯಲ್ಲಿ ರನ್ ಔಟ್ ಮಾಡಿದ್ದಾರೆ. ಅಡಿಲೇಡ್ ಓವಲ್‌ನಲ್ಲಿ ಮಂಗಳವಾರದ (ಜನವರಿ 15) ಆಸೀಸ್-ಭಾರತ ನಡುವಣ ದ್ವಿತೀಯ ಏಕದಿನ ಪಂದ್ಯದಲ್ಲಿ ಜಡೇಜಾ ಆಕರ್ಷಕ ಥ್ರೋಗಾಗಿ ಮಿಂಚಿದರು.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
43628

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಈ ಪಂದ್ಯದಲ್ಲೂ ಆರಂಭಿಕ ಆಘಾತ ಅನುಭವಿಸಿತು. ಓಪನರ್, ನಾಯಕ ಆ್ಯರನ್ ಫಿಂಚ್ ಅವರನ್ನು ಭುವನೇಶ್ವರ್ ಕುಮಾರ್ 6 ರನ್ನಿಗೆ ಔಟ್ ಮಾಡಿದರು. ಅಲೆಕ್ಸ್ ಕ್ಯಾರಿ ಕೂಡ 18 ರನ್ನಿಗೆ ನಿರ್ಗಮಿಸಿದರು. ಆದರೆ ಗಮನ ಸೆಳೆದಿದ್ದು ಖವಾಜಾ ಅವರ ರನ್‌ಔಟ್.

18.3ನೇ ಓವರ್‌ ವೇಳೆ ಕ್ರೀಸ್‌ನಲ್ಲಿ ಖವಾಜಾ ಮತ್ತು ಶಾನ್ ಮಾರ್ಷ್ ಇದ್ದರು. ಚೆಂಡಿಗೆ ಬ್ಯಾಟ್ ಬೀಸಿದ ಖವಾಜಾ ಸಿಂಗಲ್ ರನ್ ಕದಿಯಲು ಓಡಿದರು. ಈ ವೇಳೆ ಜಡೇಜಾ ಚೆಂಡನ್ನು ಕೈಗೆತ್ತಿಕೊಂಡವರೆ ಸ್ಟಂಪ್‌ನತ್ತ ಎಸೆದರು. ಚೆಂಡು ಸೀದಾ ವಿಕೆಟ್‌ಗೆ ತಾಗಿತು. ಉಸ್ಮಾನ್ ಬರೀ 21 ರನ್ನಿಗೆ ಔಟಾಗಿ ಪೆಚ್ಚುಮೋರೆಯಿಂದ ಪೆವಿಲಿಯನ್‌ನತ್ತ ಸಾಗಿದರು.

Story first published: Tuesday, January 15, 2019, 12:11 [IST]
Other articles published on Jan 15, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+