Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ravindra Jadeja: WTCಯಲ್ಲಿ ಯಾವೊಬ್ಬ ಆಟಗಾರ ಮಾಡದ ಸಾಧನೆ ಮಾಡಿದ ಜಡೇಜಾ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಈ ಸರಣಿಯಲ್ಲಿ ಭಾರತ 0-1 ಹಿನ್ನಡೆ ಅನುಭವಿಸುತ್ತಿದ್ದು, ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಕಣಕ್ಕೆ ಇಳಿದ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿ ಸಾಧನೆ ಮಾಡಿದ್ದಾರೆ. ಅಲ್ಲದೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಈ ಹಿಂದೆ ಯಾರೂ ಮಾಡದ ದಾಖಲೆಯನ್ನು ಮಾಡಿ ಬೀಗಿದ್ದಾರೆ. ಆ ದಾಖಲೆ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ.

ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಭರವಸೆಯ ಆಲ್‌ರೌಂಡರ್‌. ಇವರು ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಬ್ಯಾಟಿಂಗ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 27, ಎರಡನೇ ಇನಿಂಗ್ಸ್‌ನಲ್ಲಿ 18 ರನ್‌ ಬಾರಿಸಿರುವ ಜಡ್ಡು ತಂಡಕ್ಕೆ ಆಧಾರವಾಗಿದ್ದರು. ಅಲ್ಲದೆ ಬೌಲಿಂಗ್ ಮಾಡುವಾಗ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸಿ ಮಿಂಚಿದ್ದರು.

Jadeja creates history in WTC First player to score 2 000 runs amp amp take 150 wickets

ರವೀಂದ್ರ ಜಡಜೇ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದು ದಕ್ಷಿಣ ಆಫ್ರಿಕಾದ ಬೌಲರ್ಸ್‌ಗಳನ್ನು ಕಾಡಿದರು. ಈ ಮೂಲಕ ಜಡ್ಡು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ದೊಡ್ಡ ದಾಖಲೆ ನಿರ್ಮಿಸಿದರು. ಡಬ್ಲ್ಯೂಟಿಸಿಯಲ್ಲಿ 150ಕ್ಕೂ ಹೆಚ್ಚು ವಿಕೆಟ್‌ ಪಡೆದ ಮೂರನೇ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್‌ ಪಡೆದ ಬೌಲರ್ಸ್‌

ಆರ್‌.ಅಶ್ವಿನ್‌, 51 ಪಂದ್ಯ, 215 ವಿಕೆಟ್‌
ಜಸ್ಪ್ರೀತ್ ಬುಮ್ರಾ, 41 ಪಂದ್ಯ, 183 ವಿಕೆಟ್‌
ರವೀಂದ್ರ ಜಡೇಜಾ, 47 ಪಂದ್ಯ, 150 ವಿಕೆಟ್‌
ಮೊಹಮ್ಮದ್ ಸಿರಾಜ್, 44 ಪಂದ್ಯ, 137 ವಿಕೆಟ್‌
ಮೊಹಮ್ಮದ್‌ ಶಮಿ, 24 ಪಂದ್ಯ, 85 ವಿಕೆಟ್‌

ಜಡೇಜಾ ಸಾಧನೆ

ರವೀಂದ್ರ ಜಡೇಜಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 2,000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಮತ್ತು 150 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಶ್ರೇಯವನ್ನು ತಮ್ಮದಾಗಿಸಿಕೊಂಡರು. ಡಬ್ಲ್ಯೂಟಿಸಿಯಲ್ಲಿ ನಾಲ್ಕು ಆಟಗಾರರು 1000 ರನ್‌ ಬಾರಿಸಿ 100ಕ್ಕೂ ಹೆಚ್ಚು ವಿಕೆಟ್‌ ಪಡೆದಿದ್ದಾರೆ. ಆದರೆ ಜಡೇಜಾ ಈ ಸಾಧನೆಯನ್ನು ಮೀರಿ ನಿಂತರು. ಜಡೇಜಾ ಡಬ್ಲ್ಯೂಟಿಸಿಯಲ್ಲಿ ಆಡಿದ 47 ಪಂದ್ಯಗಳಲ್ಲಿ 43.65 ಸರಾಸರಿಯಲ್ಲಿ 2,532 ರನ್‌ ಸಿಡಿಸಿದ್ದಾರೆ. ಈ ವೇಳೆ ಇವರು 26.77ರ ಸರಾಸರಿಯಲ್ಲಿ 150 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಯಾರೊಬ್ಬ ಆಟಗಾರ ಮಾಡದ ಸಾಧನೆ ಮಾಡಿದರು.

Jadeja creates history in WTC First player to score 2 000 runs amp amp take 150 wickets

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್‌ ಪಂದ್ಯ ಗುವಾಹಟಿಯಲ್ಲಿ ನವೆಂಬರ್ 22 ರಂದು ಆರಂಭವಾಗಲಿದೆ. ಈ ಪಂದ್ಯ ಗೆದ್ದು ಸರಣಿಯಲ್ಲಿ ಡ್ರಾ ಸಾಧಿಸಲು ಭಾರತ ಪ್ಲ್ಯಾನ್ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Story first published: Monday, November 17, 2025, 9:29 [IST]
Other articles published on Nov 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+