Ravindra Jadeja: ಕಪಿಲ್ ದೇವ್ ಮಾಡಿದ ಸಾಧನೆ ಮಾಡಿದ ಜಡೇಜಾ: ವಿಶ್ವದಲ್ಲಿ 4 ಆಟಗಾರರಿಂದ ಈ ಸಾಧನೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಇಂಗ್ಲೆಂಡ್ 5 ಪಂದ್ಯ ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಅಲ್ಲದೆ ತಮ್ಮಲ್ಲಿರುವ ಬ್ಯಾಟಿಂಗ್ ಕ್ಷಮತೆಯನ್ನು ಎಲ್ಲರ ಮುಂದೆ ತೋರಿಸಿದ್ದಾರೆ.
ಟೀಮ್ ಇಂಡಿಯಾಗೆ ಮೂರನೇ ಟೆಸ್ಟ್ ಗೆಲುವಿಗೆ 193 ರನ್ ಗುರಿಯನ್ನು ನೀಡಲಾಗಿತ್ತು. ಈ ವೇಳೆ ಇಂಗ್ಲೆಂಡ್ ತಂಡದ ಮಾರಕ ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಮಿಂಚಿದರು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ಕರಾರುವಾಕ್ ದಾಳಿ ಹಾಗೂ ಜೋಫ್ರಾ ಆರ್ಚರ್ ಲಯ ಬದ್ಧ ದಾಳಿಗೆ ಟೀಮ್ ಇಂಡಿಯಾ ಕಂಗಾಲಾಯಿತು. ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು.

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಈ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಸತತ ನಾಲ್ಕು ಇನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ. ಜಡೇಜಾ ಅವರ 61 ರನ್‌ಗಳ ಇನಿಂಗ್ಸ್ ನೆರವಿನಿಂದ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ಜಡೇಜಾ ಮೂರನೇ ಟೆಸ್ಟ್‌ನಲ್ಲಿ ಕಲೆ ಹಾಕಿದ ರನ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್‌ಗಳನ್ನು ಕಲೆ ಹಾಕಿದರು.
ಕಪಿಲ್ ದೇವ್ ಕ್ಲಬ್ ಸೇರಿದ ಜಡ್ಡು
ಈ ಮೂಲಕ ರವೀಂದ್ರ ಜಡೇಜಾ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಕಲೆ ಹಾಕಿ, 600ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ನಾಲ್ಕನೇ ಹಾಗೂ ಭಾರತದ ಎರಡನೇ ಆಟಗಾರ ಎಂಬ ಖ್ಯಾತಿಗೆ ಜಡ್ಡು ಪಾತ್ರರಾಗಿದ್ದಾರೆ. ಜಡೇಜಾಗೂ ಮೊದಲು ಈ ಸಾಧನೆಯನ್ನು ಭಾರತದ ಪರ ದಿಗ್ಗಜ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಮಾಡಿದ್ದರು. ಉಳಿದಂತೆ ದಕ್ಷಿಣ ಅಫ್ರಿಕಾದ ಶಾನ್ ಪೊಲಾಕ್, ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ವಿಶ್ವದಲ್ಲಿ ಈ ಸಾಧನೆ ಮಾಡಿದ್ದರು. ಜಡೇಜಾ 361 ಪಂದ್ಯಗಳಲ್ಲಿ 7018 ರನ್ ಮತ್ತು 611 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 83 ಪಂದ್ಯಗಳಲ್ಲಿ 36.97 ಸರಾಸರಿಯಲ್ಲಿ 3697 ರನ್ ಗಳಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000 ರನ್, 600 ವಿಕೆಟ್ ಪಡೆದ ಆಟಗಾರರು
ಶಕೀಬ್ ಅಲ್ ಹಸನ್ - 14730 ರನ್, 712 ವಿಕೆಟ್
ಕಪಿಲ್ ದೇವ್ - 9031 ರನ್, 687 ವಿಕೆಟ್
ಶಾನ್ ಪೊಲಾಕ್ - 7386 ರನ್, 829 ವಿಕೆಟ್
ರವೀಂದ್ರ ಜಡೇಜಾ - 7018 ರನ್, 611 ವಿಕೆಟ್‌ಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications