Ravindra Jadeja: ಲಾಸ್ಟ್ ಚಾನ್ಸ್, ಬೆಸ್ಟ್ ಪರ್ಫಾಮೆನ್ಸ್, ಟೀಕೆಗಳಿಗೆ ಮೈದಾನದಲ್ಲಿ ಉತ್ತರ
ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸುವ ಮುನ್ನ ಒಂದು ಪ್ರಶ್ನೆ ಎಲ್ಲರಲ್ಲೂ ಇತ್ತು. ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಆಡುವ ಅವಕಾಶ ಸಿಗುತ್ತದಾ? ಸಿಕ್ಕರೂ ಎಷ್ಟು ಪಂದ್ಯ, ಏನ್ ರೋಲ್ ಎಂಬೆಲ್ಲಾ ಪ್ರಶ್ನೆಗಳ ಇದ್ದವು. ಅಲ್ಲದೆ ಇದು ರವೀಂದ್ರ ಜಡೇಜಾ ಅವರಿಗೆ ಲಾಸ್ಟ್ ಚಾನ್ಸ್ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಯಾರಿಗೂ ಈ ಸರಣಿಯಲ್ಲಿ ರವೀಂದ್ರ ಜಡೇಜಾ ಎಷ್ಟು ದೊಡ್ಡದು ಎಂಬ ಬಗ್ಗೆ ಯಾರಿಗೂ ಕಲ್ಪನೆ ಇರಲಿಲ್ಲ. ತಂಡದಲ್ಲಿ ಅನುಭವಿಗಳ ಅನುಪಸ್ಥಿತಿ ಕಾಡುತ್ತಿದ್ದಾಗ, ಜಡೇಜಾ ಸೀನಿಯರ್ ಪ್ಲೇಯರ್ ರೀತಿ ಕಾಣಿಸಿಕೊಂಡರು. ಅಲ್ಲದೆ ಮೂರು ಟೆಸ್ಟ್‌ಗಳಲ್ಲಿ ಆಡಲು ಅವಕಾಶ ಪಡೆದರು.
ರವೀಂದ್ರ ಜಡೇಜಾ ಒಬ್ಬ ಬೆಸ್ಟ್ ಆಲ್‌ರೌಂಡರ್ ಎಂಬುದು ಎಲ್ಲರಿಗೂ ತಿಳಿದಿತ್ತು. ಇವರು ದೇಶೀಯ ಟೂರ್ನಿಗಳಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇದನ್ನೆಲ್ಲಾ ಗಮನಿಸಿಯೇ ಟೀಮ್ ಮ್ಯಾನೇಜ್ಮೆಂಟ್ ರವೀಂದ್ರ ಜಡೇಜಾ ಅವರಿಗೆ ಚಾನ್ಸ್ ನೀಡಿತು. ಆದರೆ ಈ ಚಾನ್ಸ್ ಹೇಗೆ ಬಳಸಿಕೊಳ್ಳಬೇಕು ಎಂಬುದು ಜಡೇಜಾ ಅವರಿಗೆ ತಿಳಿದಿತ್ತು. ಇಂಗ್ಲೆಂಡ್‌ನ ಬೌನ್ಸಿ ಪಿಚ್‌ಗಳ ಮರ್ಮ್ ಅರಿತು ಬ್ಯಾಟ್ ಮಾಡಿದ ಜಡ್ಡು ಟೀಮ್ ಇಂಡಿಯಾಕ್ಕೆ ಮಧ್ಯಮ ಕ್ರಮಾಂಕದಲ್ಲಿ ಆಧಾರವಾದರು. ಈ ಮೂಲಕ ತಮ್ಮ ಮೇಲಿನ ಟೀಕೆಗೆ ಮೈದಾನದಲ್ಲಿ ಜಡ್ಡು ಉತ್ತರ ನೀಡಿದ್ದಾರೆ.

ಬರ್ಮಿಂಗ್‌ಹ್ಯಾಮ್ ನಲ್ಲಿ ಆಡಿದ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದ ರವೀಂದ್ರ ಜಡೇಜಾ, ಲಾರ್ಡ್ಸ್ ಮೈದಾನದಲ್ಲೂ ಇದೇ ರೀತಿಯ ಬ್ಯಾಟಿಂಗ್ ನಡೆಸಿದರು. ಮೊದಲ ಇನಿಂಗ್ಸ್‌ನಲ್ಲಿ 72 ರನ್‌ಗಳ ಇನಿಂಗ್ಸ್ ಕಟ್ಟಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ್ದ ಜಡೇಜಾ, ಎರಡನೇ ಇನಿಂಗ್ಸ್‌ನಲ್ಲೂ 61 ರನ್‌ಗಳ ಅಮೋಘ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾದರು. ಈ ಮೂಲಕ ಎಜ್ ಇಸ್ ಜಸ್ಟ್ ನಂಬರ್ ಎಂಬುದನ್ನು ಸಾಬೀತು ಪಡಿಸಿದರು.
ರವೀಂದ್ರ ಜಡೇಜಾ ಅವರು ಈ ಪ್ರದರ್ಶನ ನಿಜಕ್ಕೂ ಟೀಮ್ ಇಂಡಿಯಾಕ್ಕೆ ನವ ಉತ್ಸಾಹ ತುಂಬಿದ್ದಂತೂ ಸುಳ್ಳಲ್ಲ. ಇನ್ನು ಈ ಸರಣಿಯಲ್ಲಿ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ಆಡಡಲಿದೆ. ಈ ವೇಳೆ ಮ್ಯಾನೇಜ್ಮೆಂಟ್ ರವೀಂದ್ರ ಜಡೇಜಾ ಅವರನ್ನು ಕಡೆಗಣೆಸುವ ಪ್ರಶ್ನೆಯೇ ಇಲ್ಲ. ಈ ರೀತಿ ಬ್ಯಾಟ್ ಮಾಡಿದ ಜಡೇಜಾ ತಮ್ಮ ಮೇಲಿನ ಎಲ್ಲ ಟೀಕೆಗಳಿಗೆ ಮೈದಾನದಲ್ಲೇ ಉತ್ತರ ನೀಡಿದರು.
ಸರಣಿಯಲ್ಲಿ ಜಡೇಜಾ ಪ್ರದರ್ಶನ
ವಿಶ್ವದ ನಂಬರ್ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಆಡಿದ ಮೂರು ಪಂದ್ಯಗಳ 6 ಇನಿಂಗ್ಸ್‌ನಲ್ಲಿ 109ರ ಸರಾಸರಿಯಲ್ಲಿ 327 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರು 4 ಅರ್ಧಶತಕ ಬಾರಿಸಿದ್ದಾರೆ. ರವೀಂದ್ರ ಜಡೇಜಾ ಒಟ್ಟಾರೆ 41 ಬೌಂಡರಿ, 5 ಸಿಕ್ಸರ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ತಾಳ್ಮೆಯಿಂದ ಬ್ಯಾಟ್ ಮಾಡಿ ಎಲ್ಲರ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications