ಮಿಚೆಲ್ ಸ್ಟಾರ್ಕ್ ಸಾಧನೆಯ ಸಮಯಕ್ಕೆ ನಿಂತ ಜಡೇಜಾ, ಪಾಕ್ ಮಾಜಿ ಆಟಗಾರನ ದಾಖಲೆ ಉಡೀಸ್
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಮುಂಬೈನಲ್ಲಿ ನಡೆಯುತ್ತಿದೆ. ಶುಕ್ರವಾರದಿಂದ ಆರಂಭವಾದ ಮೂರನೇ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 235 ರನ್‌ಗಳಿಗೆ ಆಲೌಟ್ ಆಗಿದೆ. ಕಿವೀಸ್ ತಂಡಕ್ಕೆ ಕಾಟ ನೀಡಿದ್ದ ಟೀಮ್ ಇಂಡಿಯಾ ಸ್ಪಿನ್ ಬೌಲರ್ಸ್ ಅಬ್ಬರಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಭರವಸೆಯ ಆಲ್ ರೌಂಡರ್ ರವೀಂದ್ರ ಜಡೇಜಾ ಅಮೋಘ ಬೌಲಿಂಗ್ ದಾಳಿ ನಡೆಸಿದರು.
ಮುಂಬೈನ ವಾಂಖೇಡೆ ಪಿಚ್‌ನಲ್ಲಿ ಟೀಮ್ ಇಂಡಿಯಾದ ಅನುಭವಿ ಸ್ಪಿನ್ ಬೌಲರ್ ತಮ್ಮ ಫಿರ್ಕಿ ಪ್ರದರ್ಶನ ನೀಡಿದರು. ಇವರು ಮೊದಲ ಇನಿಂಗ್ಸ್‌ನಲ್ಲಿ 22 ಓವರ್ ಬೌಲ್ ಮಾಡಿ 65 ರನ್ ನೀಡಿ 5 ವಿಕೆಟ್ ಕಬಳಿಸಿ ಪ್ರವಾಸಿ ತಂಡವನ್ನು ಕಾಡಿದರು. ಇವರಿಗೆ ಯುವ ಸ್ಪಿನ್ ಬೌಲರ್ ವಾಷಿಂಗ್ಟನ್ ಸುಂದರ್ 81 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಜಡೇಜಾ ಪಂಚ್
ಜಡೇಜಾ ಅವರು ತಮ್ಮ ಟೆಸ್ಟ್ ವೃತ್ತಿಜೀವನದ 14 ನೇ ಬಾರಿ ಐದು ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನದ ಮಾಜಿ ಆಟಗಾರನ ದಾಖಲೆಯನ್ನು ಮುರಿದರು. ಅಲ್ಲದೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಸಹ ಸರಿಗಟ್ಟಿದ್ದಾರೆ. ಜಡೇಜಾ ಅವರ ಮ್ಯಾಜಿಕ್ ಬೆಂಗಳೂರು ಹಾಗೂ ಪುಣೆಯಲ್ಲಿ ನಡೆದಿರಲಿಲ್ಲ. ಆದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಕ್ಲಾಸಿಕ್ ಬೌಲಿಂಗ್ ಪ್ರದರ್ಶನ ನೀಡಿದರು.
ಮುಂಬೈನಲ್ಲಿ ಜಡೇಜಾ ಐದು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಮಾಜಿ ಆಟಗಾರ ಫಜಲ್ ಮಹಮೂದ್ ಅವರ ಸಾಧನೆಯನ್ನು ಮೀರಿ ನಿಂತರು. ಪಾಕ್ ಆಟಗಾರ ಫಜಲ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 13 ಬಾರಿ ಐದು ವಿಕೆಟ್ ಪಡೆದಿದ್ದರು. ಜಡೇಜಾ ಈ ಸಾಧನೆ ಮೀರಿ ನಿಂತಿದ್ದಾರೆ. ಜಡ್ಡು 14 ಬಾರಿ ಐದು ಅಥವ ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ನಂಬರ್ 1 ಸ್ಥಾನದಲ್ಲಿ ಮುತ್ತಯ್ಯ
ಶ್ರೀಲಂಕಾ ತಂಡದ ದಿಗ್ಗಜ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್ ಪಡೆದು ಬೀಗಿದ್ದಾರೆ. ಇವರು ಟಸ್ಟ್‌ನಲ್ಲಿ 67 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಇದ್ದು, ಇವರು 37 ಬಾರಿ ಈ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್‌ನ ಸರ್ ಆರ್‌ಜೆ ಹೆಡ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಇವರು 36 ಬಾರಿ ಐದು ವಿಕೆಟ್ ಪಡೆದಿದ್ದರೆ, ಅನಿಲ್ ಕುಂಬ್ಳೆ 35 ಬಾರಿ ಐದು ವಿಕೆಟ್‌ಗೂ ಹೆಚ್ಚು ವಿಕೆಟ್ ಪಡೆದಿದ್ದು, ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications