Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ravindra Jadeja: ಜಹೀರ್ ಖಾನ್‌ ದಾಖಲೆ ಅಳಿಸಿದ ಜಡೇಜಾ

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಲ್‌ರೌಂಢರ್ ರವೀಂದ್ರ ಜಡೇಜಾ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ. ಇವರು ತಮ್ಮ ಓವರ್‌ಗಳನ್ನು ಚುರುಕಾಗಿ ಎಸೆದು ಮುಗಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಹೀಗಾಗಿ ಬ್ಯಾಟರ್‌ಗಳಿಗೆ ಇವರು ಯಾವ ಚೆಂಡನ್ನು ಯಾವಾಗ ಎಸೆಯ ಬಲ್ಲರು ಎಂಬುದನ್ನು ಅರಿಯುವುದೇ ದೊಡ್ಡ ಪ್ರಶ್ನೆ. ಈಗ ರವೀಂದ್ರ ಜಡೇಜಾ ಹೆಸರಿಗೆ ಮತ್ತೊದು ದಾಖಲೆ ದಾಖಲಾಗಿದೆ.

ಲಾರ್ಡ್ಸ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ವೇಳೆ ಇಂಗ್ಲೆಂಡ್‌ ಮೊದಲ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ಆತಿಥೇಯ ತಂಡಕ್ಕೆ ಜೋ ರೂಟ್‌ ಶತಕ ಬಾರಿಸಿ ಆಧಾರವಾಗಿದ್ದಾರೆ. ಟೀಮ್ ಇಂಡಿಯಾದ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್‌ ಪಡೆದು ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ ರವೀಂದ್ರ ಜಡೇಜಾ ಸಹ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

Jadeja Surpasses Zaheer s Record India s Fifth-Highest International Wicket-Taker

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವಾಗ ಓಲಿ ಪೋಪ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಇದ್ದರು. ಈ ವೇಳೆ ಇವರ ಆಟಕ್ಕೆ ಬ್ರೇಕ್ ಹಾಕಲು ಜಡೇಜಾ ಬರಬೇಕಾಯಿತು. ರವೀಂದ್ರ ಜಡೇಜಾ ಇನಿಂಗ್ಸ್‌ 50ನೇ ಓವರ್‌ ಎಸೆಯಲು ಮುಂದಾದರು. ಈ ವೇಳೆ ಜಡೇಜಾ ಎಸೆತವನ್ನು ತಪ್ಪಾಗಿ ಗ್ರಹಿಸಿದ ಪೋಪ್‌ ವಿಕೆಟ್‌ ಕೀಪರ್‌ಗೆ ಕ್ಯಾಚ್ ನೀಡಿದರು. ರಿಷಭ್‌ ಪಂತ್‌ ಬದಲಿಗೆ ವಿಕೇಟ್ ಕೀಪಿಂಗ್ ಮಾಡಿದ ಧ್ರುವ್ ಜುರೇಲ್‌ ಕ್ಲಾಸಿಕ್ ಕ್ಯಾಚ್ ಪಡೆದರು. ಈ ಪಂದ್ಯದಲ್ಲಿ ಜಡೇಜಾ 12 ಓವರ್‌ ಬೌಲ್‌ ಮಾಡಿ 29 ರನ್‌ ನೀಡಿ 1 ವಿಕೆಟ್‌ ಕಬಳಿಸಿದರು.

ಜಡ್ಡು ದಾಖಲೆ

ಈ ವಿಕೆಟ್‌ ಪಡೆಯುತ್ತಿದ್ದಂತೆ ರವೀಂದ್ರ ಜಡೇಜಾ ಜಹೀರ್ ಖಾನ್ ದಾಖಲೆ ಅಳಿಸಿ ಹಾಕಿದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಡೇಜಾ ಈಗ ಐದನೇ ಸ್ಥಾನಕ್ಕೆ ಬಂದಿದ್ದಾರೆ. ಇವರು 361 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 611 ವಿಕೆಟ್‌ ಕಬಳಿಸಿದ್ದಾರೆ. ಜಹೀರ್ ಖಾನ್‌ ಒಟ್ಟಾರೆ ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ 610 ವಿಕೆಟ್‌ ಪಡೆದ ದಾಖಲೆ ಹೊಂದಿದ್ದಾರೆ. ಭಾರತದ ಪರ ಒಟ್ಟಾರೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಕೀರ್ತಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರಿಗೆ ಸಲ್ಲುತ್ತದೆ. ಇವರು 401 ಪಂದ್ಯಗಳಲ್ಲಿ 953 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

Jadeja Surpasses Zaheer s Record India s Fifth-Highest International Wicket-Taker

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಸಾಧಕರು

ಅನಿಲ್ ಕುಂಬ್ಳೆ, 401 ಪಂದ್ಯ, 953 ವಿಕೆಟ್‌
ಆರ್ ಅಶ್ವಿನ್, 379 ಪಂದ್ಯ, 765 ವಿಕೆಟ್‌
ಹರ್ಭಜನ್ ಸಿಂಗ್, 365 ಪಂದ್ಯ, 707 ವಿಕೆಟ್‌
ಕಪಿಲ್ ದೇವ್, 356 ಪಂದ್ಯ, 687 ವಿಕೆಟ್‌
ರವೀಂದ್ರ ಜಡೇಜಾ, 361 ಪಂದ್ಯ, 611 ವಿಕೆಟ್

Story first published: Saturday, July 12, 2025, 14:45 [IST]
Other articles published on Jul 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+