For Quick Alerts
ALLOW NOTIFICATIONS  
For Daily Alerts
 

Ravindra Jadeja: ಬಿಸಿಸಿಐ ನಿಯಮ ಗಾಳಿಗೆ ತೂರಿದ ಸ್ಟಾರ್ ಆಲ್‌ರೌಂಡರ್

ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್‌ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿದ್ದು, ಮೊದಲ ಇನಿಂಗ್ಸ್‌ನಲ್ಲಿ ಬಿಗಿ ಹಿಡಿತ ಸಾಧಿಸಿದೆ. ಭಾರತ ಈ ಪ್ರದರ್ಶನದ ಹಿಂದೆ ನಾಯಕ ಶುಭಮನ್ ಗಿಲ್‌ ಹಾಗೂ ರವೀಂದ್ರ ಜಡೇಜಾ ಅವರ ಕೊಡುಗೆ ಅಪಾರ. ಆದರೆ ಸ್ಟಾರ್ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ವಿರುದ್ಧ ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಿದೆಯಾ ಎಂಬ ಸಂಶಯ ಕಾಡಲು ಆರಂಭಿಸಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್‌ಗೆ 310 ರನ್‌ಗಳಿಗೆ ಮೊದಲ ದಿನದಾಟ ಮುಗಿಸಿತ್ತು. ಇಲ್ಲಿಂದ ಆಟವನ್ನು ಗುರುವಾರ ಮುಂದುವರೆಸಿದ ಟೀಮ್ ಇಂಡಿಯಾ 587 ರನ್‌ ಕಲೆ ಹಾಕಿ ಅಬ್ಬರಿಸಿತು. ಈ ವೇಳೆ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ (269 ರನ್) ಹಾಗೂ ರವೀಂದ್ರ ಜಡೇಜಾ (89 ರನ್‌) ತಂಡದ ಪರ ದ್ವಿಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಅಲ್ಲದೆ ವಾಷಿಂಗ್ಟನ್ ಸುಂದರ್ (42 ರನ್) ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ವೇಳೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ.

Jadeja Under BCCI Scrutiny After Alleged Rule Breach

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್‌ ಸರಣಿಯ ಬಳಿಕ ಬಿಸಿಸಿಐ ಹಲವು ಮಾರ್ಗ ಸೂಚಿಗಳನ್ನು ಆಟಗಾರರಿಗೆ ಬಿಡುಗಡೆ ಮಾಡಿತು. ಹೊಸ ಮಾರ್ಗಸೂಚಿಗಳನ್ನು ಆಟಗಾರರು ಹಾಗೂ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿತ್ತು. ಗುರುವಾರ ರವೀಂದ್ರ ಜಡೇಜಾ ಬಿಸಿಸಿಐ ಅವರ ದೊಡ್ಡ ನಿಯಮವನ್ನು ಮುರಿದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ನಿಯಮ ಗಾಳಿಗೆ ತೂರಿದ ಜಡೇಜಾ

ಬಿಸಿಸಿಐ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಈ ವೇಳೆ ಆಟಗಾರರು ವಿದೇಶಿ ಪ್ರವಾಸದಲ್ಲಿ ಹಲವು ಕಟ್ಟು ನಿಟ್ಟಿನ ನಿಯಮ ಪಾಲಿಸಬೇಕಾಗುತ್ತದೆ. ಇದರಲ್ಲಿ ಒಂದು ಆಟಗಾರ ಒಂಟಿಯಾಗಿ ಕ್ರೀಡಾಂಗಣಕ್ಕೆ ಹೋಗಬಾರದು ಅಥವಾ ಬರಬಾರದು ಎಂದು ಆಗಿತ್ತು. ಎಲ್ಲ ಆಟಗಾರರು ತಂಡದ ಬಸ್‌ನಲ್ಲಿ ಒಟ್ಟಾಗಿ ಪ್ರವೇಶಿಸುವಂತೆ ಬಿಸಿಸಿಐ ತಿಳಿಸಿತ್ತು. ಆದರೆ ರವೀಂದ್ರ ಜಡೇಜಾ, ಎರಡನೇ ಟೆಸ್ಟ್‌ನ ಎರಡನೇ ದಿನದಂದು ಜಡೇಜಾ ಒಬ್ಬರೇ ಮೈದಾನಕ್ಕೆ ತಲುಪಿದ್ದರು. ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಡ್ಡು ಈ ನಿಯಮವನ್ನು ಗಾಳಿಗೆ ತೂರಿದರು. ಬಿಸಿಸಿಐ ಈ ನಿಯಮವನ್ನು ಮುರೆದಿದಕ್ಕಾಗಿ ಯಾವ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Jadeja Under BCCI Scrutiny After Alleged Rule Breach

ಈ ಬಗ್ಗೆ ರವೀಂದ್ರ ಜಡೇಜಾ ಪಂದ್ಯ ಮುಗಿದ ಬಳಿಕ ಮಾತನಾಡಿದ್ದಾರೆ. ಎರಡನೇ ದಿನದಾಟದಲ್ಲಿ ಚೆಂಡು ಹೊಸದಾಗಿತ್ತು. ನಾನು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಇರಾದೆಯನ್ನು ಹೊಂದಿದ್ದಾರೆ. ಹೊಸ ಚೆಂಡಿನಿಂದ ಆಡಿದರೆ ತಂಡಕ್ಕೆ ಅನುಕೂಲವಾಗುತ್ತದೆ ಎಂದು ಅರಿತೆ. ಅಲ್ಲದೆ ಇದ್ರಲ್ಲಿ ಯಶ ಸಹ ಕಂಡಿದ್ದೇನೆ ಎಂದು ತಿಳಿಸಿದ್ದಾರೆ.

Story first published: Friday, July 4, 2025, 12:53 [IST]
Other articles published on Jul 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+