'WTC finalನಲ್ಲಿ 4 ವೇಗಿಗಳು ಆಡಿದರೆ ಜಡೇಜಾ ಬೆಂಚಲ್ಲಿರಬೇಕಾಗುತ್ತದೆ'

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದಲ್ಲಿ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾಗಿ ಆಡುವ ಬಗ್ಗೆ ಮಾತುಕತೆಗಳು ನಡೆಯುತ್ತಲೇ ಇವೆ. ಭಾರತದ ಮಾಜಿ ಆಫ್ ಸ್ಪಿನ್ನರ್ ಸರಣ್‌ದೀಪ್ ಸಿಂಗ್ ಕೂಡ ಕೂಡ ಜಡೇಜಾ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸೌತಾಂಪ್ಟನ್‌ನ ಏಜಸ್ ಬೌಲ್‌ನಲ್ಲಿ ಜೂನ್ 18ರಂದು ಪರಿಸ್ಥಿತಿ ನೋಡಿಕೊಂಡು ನಾಲ್ಕು ಪ್ರಮುಖ ವೇಗಿಗಳನ್ನು ಕಣಕ್ಕಿಳಿಸಬೇಕಾ ಎಂದು ನೋಡಬೇಕಾಗುತ್ತದೆ. ಮೂರು ವೇಗಿಗಳು ಸಾಕಾಗುತ್ತದೆ. ಆದರೆ ಅಗತ್ಯ ಬಿದ್ದರೆ ನಾಲ್ಕು ವೇಗಿಗಳನ್ನು ಆಡಿಸಬೇಕಾಗಬಹುದು ಎಂದು ಸರಣ್‌ದೀಪ್ ಸಿಂಗ್ ಅಭಿಪ್ರಾಯಿಸಿದ್ದಾರೆ.
'ಇಂಗ್ಲೆಂಡ್‌ನ ಪರಿಸ್ಥಿತಿ ಮೋಡ ಕವಿದಿದ್ದರೆ ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಜೊತೆಗೆ ಮತ್ತೊಬ್ಬ ಹೆಚ್ಚುವರಿ ವೇಗಿಯನ್ನು ಆಡಿಸಬೇಕಾಗಬಹುದು. ನಾಲ್ಕು ವೇಗಿಗಳು ಆಡಿದರೆ ಆಲ್ ರೌಂಡರ್ ರವೀಂದ್ರ ಜಡೇಜಾ ಬೆಂಚ್‌ನಲ್ಲಿರಬೇಕಾಗುತ್ತದೆ,' ಎಂದು ಸಿಂಗ್ ಹೇಳಿದ್ದಾರೆ.
ಭಾರತೀಯ ತಂಡದಲ್ಲಿ ಸದ್ಯ ಸ್ಪಿನ್ನರ್‌ಗಳಾಗಿ ಆರ್ ಅಶ್ವಿನ್, ರವೀಂದ್ರ ಜಡೇಜಾ ಇದ್ದಾರೆ. ಮತ್ತೊಬ್ಬ ಹೆಚ್ಚುವರಿ ವೇಗಿ ಅಂದರೆ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಒದ್ದೆ ನೆಲದಲ್ಲಿ ಸ್ಪಿನ್ ಬೌಲರ್ ಅಷ್ಟೇನೂ ಕೆಲಸಕ್ಕೆ ಬರುವುದಿಲ್ಲವಾದ್ದರಿಂದ ಸಿಂಗ್, ಪರಿಸ್ಥಿತಿ ನೋಡಿಕೊಂಡು ಆಡಿಸಬೇಕು ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications