ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ದಾಲ್ಮಿಯಾ ಬಾಸ್
ಚೆನ್ನೈ, ಮಾ.2: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಜಗಮೋಹನ್ ದಾಲ್ಮಿಯಾ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹತ್ತು ವರ್ಷಗಳ ನಂತರ ಮತ್ತೊಮ್ಮೆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಇನ್ನಿತರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚೆನ್ನೈನಲ್ಲಿ ಉನ್ನತ ಮಟ್ಟದ ಸಭೆ ಸೋಮವಾರ ನಡೆಸಲಾಯಿತು. ಜಗಮೋಹನ್ ದಾಲ್ಮಿಯ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಎನ್.ಶ್ರೀನಿವಾಸನ್ ಅವರಿಗೆ ಚುನಾವಣೆ ಸ್ಪರ್ಧಿಸದಂತೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ಮಂಡಳಿ ಮೇಲೆ 74 ವರ್ಷ ವಯಸ್ಸಿನ ದಾಲ್ಮಿಯ ಹಿಡಿತ ಪಡೆದುಕೊಳ್ಳುವುದು ನಿಶ್ಚಯವಾಗಿದೆ. [ಸ್ಪಾಟ್ ಫಿಕ್ಸಿಂಗ್ : ಶ್ರೀನಿಗೆ ಸುಪ್ರೀಂ ಕೋರ್ಟ್ ತಪರಾಕಿ]
2001 ರಿಂದ 2004 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ದಾಲ್ಮಿಯಾ ಸದ್ಯ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. ಅಲ್ಲದೇ 1997ರಿಂದ 3 ವರ್ಷ ಕಾಲ ಐಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. 1979ರಲ್ಲಿ ಬಿಸಿಸಿಐ ಸೇರಿದ ದಾಲ್ಮಿಯಾ 1983ರಲ್ಲಿ ಖಜಾಂಚಿಯಾಗಿದ್ದರು. 1987 ಹಾಗೂ 1996 ವಿಶ್ವಕಪ್ ಗಳಲ್ಲಿ ಏಷ್ಯಾದಲ್ಲಿ ಆಯೋಜಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಆದರೆ, 2006ರಲ್ಲಿ ಬಿಸಿಸಿಐ ಗೆ ಸಂಬಂಧಿಸದ ಹಣಕಾಸು ವ್ಯವಹಾರದಲ್ಲಿ ದಾಲ್ಮಿಯಾ ಆರೋಪ ಎದುರಿಸಿದ್ದರು. ಇದರಿಂದಾಗಿ ದಾಲ್ಮಿಯಾ ಅಧಿಕಾರ ಕಳೆದುಕೊಂಡಿದ್ದರು. ಆದರೆ ನಂತರ 2007ರಲ್ಲಿ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ತೀರ್ಮಾನ ನೀಡಿತ್ತು.2008ರಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಮರಳಿಸಿದರು.
ಒಟ್ಟಾರೆ ಈಗ
* ಜಗಮೋಹನ್ ದಾಲ್ಮಿಯಾ- ಅಧ್ಯಕ್ಷ,
* ಅನುರಾಗ್ ಠಾಕೂರ್ - ಕಾರ್ಯದರ್ಶಿ, (ಸಂಜಯ್ ಪಟೇಲ್ ಗೆ 1 ಮತದಿಂದ ಸೋಲು)
* ಅನಿರುಧ್ ಚೌಧರಿ- ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications