ಬಿಸಿಸಿಐಗೆ ಮತ್ತೆ ಜಗಮೋಹನ್ ದಾಲ್ಮಿಯ ಅಧ್ಯಕ್ಷ?
ಚೆನ್ನೈ ಮಾ. 1 : ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಜಗಮೋಹನ್ ದಾಲ್ಮಿಯ ಮತ್ತೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮಾರ್ಚ್ 2 ರಂದು ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು.
ಎನ್.ಶ್ರೀನಿವಾಸನ್ ಅವರಿಗೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕಟ್ ಮಂಡಳಿ ಮೇಲೆ ದಾಲ್ಮಿಯ ಹಿಡಿತ ಪಡೆದುಕೊಳ್ಳುವುದು ನಿಶ್ಚಯವಾಗಿದೆ.[2016ರಲ್ಲಿ ಭಾರತದಲ್ಲೇ ವಿಶ್ವ ಟಿ20 ಟೂರ್ನಿ]

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ದಾಲ್ಮಿಯಾ ಜತೆ ಶಿವ್ ಲಾಲ್ ಯಾದವ್ ಮತ್ತು ಸಂಜಯ್ ಪಾಟೀಲ್ ಸ್ಪರ್ಧಿಸಲಿದ್ದಾರೆ. 31 ಜನ ಸದಸ್ಯರ ಮಂಡಳಿಯಲ್ಲಿ ದಾಲ್ಮಿಯ ಪರವಾಗಿ ಅತಿಹೆಚ್ಚು ಮತಗಳು ಬೀಳಲಿದೆ ಎಂದು ಹೇಳಲಾಗಿದೆ. ಅಲ್ಲದೇ ಮಾಜಿ ಅಧ್ಯಕ್ಷ ಶರದ್ ಪವಾರ್ ಸಹ ದಾಲ್ಮಿಯಾಗೇ ಬೆಂಬಲ ನೀಡಲಿದ್ದಾರೆ ಎಂದು ವರದಿಗಳು ಹೇಳಿವೆ.
2001 ರಿಂದ 2004 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ದಾಲ್ಮಿಯಾ ಸದ್ಯ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. ಅಲ್ಲದೇ 1997ರಿಂದ 3 ವರ್ಷ ಕಾಲ ಐಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ.[ಸ್ಪಾಟ್ ಫಿಕ್ಸಿಂಗ್ : ಶ್ರೀನಿಗೆ ಸುಪ್ರೀಂ ಕೋರ್ಟ್ ತಪರಾಕಿ]
ಬಿಸಿಸಿಐ ಗೆ ಸಂಬಂಧಿಸದ ಹಣಕಾಸು ವ್ಯವಹಾರದಲ್ಲಿ ದಾಲ್ಮಿಯಾ ಅವ್ಯವಹಾರ ನಡೆಸಿದ್ದಾರೆ ಎಂಬ ಆಧಾರದಲ್ಲಿ ದಾಲ್ಮಿಯಾ ಅಧಿಕಾರ ಕಳೆದುಕೊಂಡಿದ್ದರು. ಆದರೆ ನಂತರ ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ತೀರ್ಮಾನ ನೀಡಿತ್ತು.
Story first published: Wednesday, January 3, 2018, 10:02 [IST]
Other articles published on Jan 3, 2018
Read in English: Dalmiya set to become BCCI president
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications