For Quick Alerts
ALLOW NOTIFICATIONS  
For Daily Alerts
 

ಜೈಲುವಾಸಿ ಆಸ್ಟ್ರೇಲಿಯನ್ ಕ್ರಿಕೆಟಿಗನಿಗೆ ಅತ್ಯಾಚಾರ ಕೇಸಲ್ಲಿ ಶಿಕ್ಷೆ ಕಾಯಂ

Jailed Australian Cricketer Conviction For Raping A Woman Upheld In England

ಲಂಡನ್, ಜುಲೈ 1: ಆಸ್ಟ್ರೇಲಿಯಾದಲ್ಲಿ ಜನಿಸಿದ ವೊರ್ಸೆಸ್ಟರ್ ಷೈರ್ ಕೌಂಟಿಯ ಮಾಜಿ ಆಟಗಾರ ಹೆಪ್ ಬರ್ನ್ ಗೆ ಅತ್ಯಾಚಾರ ಪ್ರಕರಣದಲ್ಲಿ ತೀವ್ರ ಹಿನ್ನಡೆಯಾಗಿದೆ. ಗೆಳೆಯನೊಬ್ಬನ 2017ರಲ್ಲಿ ಅಪಾರ್ಟ್ಮೆಂಟ್ ನಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದು, ಸದ್ಯ 5 ವರ್ಷ ಜೈಲುವಾಸದಲ್ಲಿದ್ದಾರೆ. ಈ ತೀರ್ಪಿನ ವಿರುದ್ಧ ಹೆಪ್ ಬರ್ನ್ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡಿದೆ.

ಹೆಪ್ ಬರ್ನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹಿರಿಯ ಜಡ್ಜ್ ಲಾರ್ಡ್ ಛೀಫ್ ಜಸ್ಟೀಸ್ ಲಾರ್ಡ್ ಬರ್ನೆಟ್ ಅವರಿದ್ದ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ಬಳಸಲಾದ ಪದ ಹಾಗೂ ತನಿಖೆ ಹಾದಿಯಲ್ಲಿ ಉಪಯೋಗಿಸಿದ ಸಾಕ್ಷ್ಯ ಸಮಪರ್ಕವಾಗಿಲ್ಲ ಎಂದು ಹೆಪ್ ಬರ್ನ್ ಪರ ವಕೀಲ ಡೇವಿಡ್ ಇಮ್ಯಾನುಯಲ್ ವಾದಿಸಿದ್ದರು.

ನಿಜಕ್ಕೂ ಅಂದು ಆಗಿದ್ದೇನು?: ಯಾರು ಹೆಚ್ಚು ಮಹಿಳೆಯರೊಡನೆ ಮಲಗುತ್ತಾರೆ ಎಂದು ಹೆಪ್ ಬರ್ನ್ ಹಾಗೂ ತಂಡದ ಇತರೆ ಸದಸ್ಯರು ತಮ್ಮ ತಮ್ಮಲ್ಲೇ ಹುಡುಗಾಟದ ಸ್ಪರ್ಧೆ ಹೊಂದಿದ್ದರು. ಏಪ್ರಿಲ್ 1, 2017ರಂದು ವೊರ್ಸೆಸ್ಟರ್ ನ ಪೋರ್ಟ್ ಲ್ಯಾಂಡ್ ಸ್ಟ್ರೀಟ್ ಪ್ರದೇಶದಲ್ಲಿ ಸ್ನೇಹಿತರೊಬ್ಬರ ಅಪಾರ್ಟ್ಮೆಂಟ್ ನಲ್ಲಿ ಮಹಿಳೆ ಮೇಲೆ ಹೆಪ್ ಬರ್ನ್ ಅತ್ಯಾಚಾರ ಎಸಗಿದ್ದು ಸಾಬೀತಾಗಿದೆ.

ಈ ಸ್ಪರ್ಧೆಗೆ ಸಂಬಂಧಿಸಿದಂತೆ ಹೆಪ್ ಬರ್ನ್ ಹಾಗೂ ತಂಡದೊಡನೆ ನಡೆದ ವಾಟ್ಸಾಪ್ ಚಾಟ್ ಸಂಭಾಷಣೆಯ ವಿವರಗಳನ್ನು ಪರಿಶೀಲಿಸಿದ ಕೋರ್ಟ್, ಇದರಲ್ಲಿ ಪರಸ್ಪರ ಒಪ್ಪಿಗೆಯಿಂದ ನಡೆದ ಸೆಕ್ಸ್ ಇದಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Story first published: Wednesday, July 1, 2020, 16:26 [IST]
Other articles published on Jul 1, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+