ಜೈಪುರದಲ್ಲಿ ನಿರ್ಮಾಣವಾಗಲಿದೆ ವಿಶ್ವದ 3ನೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ!

ಜೈಪುರ, ಜುಲೈ 4: ವಿಶ್ವದ 3ನೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಜೈಪುರ ಕ್ರಿಕೆಟ್ ಸ್ಟೇಡಿಯಂ ಪಾತ್ರವಾಗುವುದರಲ್ಲಿದೆ. ಸುಮಾರು 350 ಕೋ.ರೂ. ವೆಚ್ಚದಲ್ಲಿ ಜೈಪುರದಲ್ಲಿ 75,000 ಆಸನ ವ್ಯವಸ್ಥೆಯಿರುವ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಯೋಜನೆಗಳು ಸಿದ್ಧಗೊಂಡಿದೆ.
ಜೈಪುರದಿಂದ 25 ಕಿ.ಮೀ. ದೂರದಲ್ಲಿ ಜೈಪುರ-ದೆಹಲಿ ಹೈವೇನಲ್ಲಿ ಸಿಗುವ ಚೊನ್ಪು ಗ್ರಾಮದಲ್ಲಿ ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ಸ್ಟೇಡಿಯಂ ನಿರ್ಮಾಣವಾಗಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಸ್ಟೇಡಿಯಂನ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಶನ್‌ನ (ಆರ್‌ಸಿಎ) ಕಾರ್ಯದರ್ಶಿ ಮಹೇಂದ್ರ ಶರ್ಮಾ ಹೇಳಿದ್ದಾರೆ.
ವಿಶ್ವದಲ್ಲಿ ನಂ.1 ದೊಡ್ಡ ಸ್ಟೇಡಿಯಂ ಎಂಬ ದಾಖಲೆಗೆ ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂ ಪಾತ್ರವಾದರೆ, 2ನೇ ಅತೀ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಕಾರಣವಾಗಿದೆ. ಮೂರನೇ ಸ್ಥಾನ ಜೈಪುರ ಸ್ಟೇಡಿಯಂಗೆ ಸಲ್ಲಲಿದೆ ಎಂದು ಮಹೇಂದ್ರ ಮಾಹಿತಿ ನೀಡಿದ್ದಾರೆ.
ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಂನ ಸಾಮರ್ಥ್ಯ 1.10 ಲಕ್ಷ ಇದ್ದರೆ, ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟೇಡಿಯಂನ ಸಾಮರ್ಥ್ಯ 1.02 ಲಕ್ಷ ಇದೆ. ಜೈಪುರ ಸ್ಟೇಡಿಯಂನಲ್ಲಿ ಕ್ರಿಕೆಟ್ ಅಲ್ಲದೆ ಇಂಡೋರ್ ಗೇಮ್ಸ್, ಕ್ರೀಡಾಭ್ಯಾಸ ಅಕಾಡೆಮಿಗಳ ಸೌಲಭ್ಯಳನ್ನು ಒಳಗೊಂಡಿರಲಿದೆ. ಒಂದು ಕ್ಲಬ್ ಹೌಸ್ ಮತ್ತು 4000 ವಾಹನ ನಿಲುಗಡೆಗೆ ವ್ಯವಸ್ಥೆ ಇರಲಿದೆ ಎಂದು ಶರ್ಮಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications