ಯೂತ್ ಟೆಸ್ಟ್: ಜೈಸ್ವಾಲ್-ಕಂದಪಾಲ್ ಶತಕ, ಆಫ್ರಿಕಾ ವಿರುದ್ಧ ಭಾರತ ಮುನ್ನಡೆ

ತಿರುವನಂತಪುರಂ, ಫೆಬ್ರವರಿ 27: ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಕಂದಪಾಲ್ ಆಕರ್ಷಕ ಶತಕದ ನೆರವಿನಿಂದ ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂಡರ್-19 ದ್ವಿತೀಯ ಯೂತ್ ಟೆಸ್ಟ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ಅಂಡರ್ 19 ತಂಡಕ್ಕೆ ಅಂಥ ಬ್ಯಾಟಿಂಗ್ ಬೆಂಬಲ ದೊರೆಯಲಿಲ್ಲ. ಆರಂಭಿಕ ಆಟಗಾರ ರುವಾನ್ ಟರ್ಬ್ಲಾನ್ಚೆ 51, ಬ್ರೈಸ್ ಪಾರ್ಸನ್ಸ್ 64 ರನ್ ಬಿಟ್ಟರೆ ಇನ್ನು ಯಾವುದೇ ಬ್ಯಾಟ್ಸ್ಮನ್ 13 ರನ್‌ಗಿಂತ ಹೆಚ್ಚಿನ ವೈಯಕ್ತಿಕ ರನ್ ಸೇರಿಸಲಿಲ್ಲ. ಆಫ್ರಿಕಾ 54.4 ಓವರ್‌ಗೆ 152 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಮುಗಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಆರಂಭಿಕ ಆಟಗಾರ ಜೈಸ್ವಾಲ್ 173, ಕಂದಪಾಲ್ 120 ರನ್ ಕೊಡುಗೆ ನೀಡಿದ್ದರಿಂದ ತಂಡ 101.2 ಓವರ್‌ನಲ್ಲಿ ಭರ್ಜರಿ 395 ರನ್ ಬಾರಿಸಿ ಮುನ್ನಡೆ ಸಾಧಿಸಿತು. ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿರುವ ದಕ್ಷಿಣ ಆಫ್ರಿಕಾ ಬುಧವಾರ (ಫೆ.27) ದಿನದಾಟದ ಅಂತ್ಯಕ್ಕೆ 21 ಓವರ್‌ಗೆ 2 ವಿಕೆಟ್ ನಷ್ಟದೊಂದಿಗೆ 50 ರನ್ ಬಾರಿಸಿದೆ.
ಆಫ್ರಿಕಾ ಮೊದಲ ಇನ್ನಿಂಗ್ಸ್ ವೇಳೆ ಭಾರತದ ಮನೀಶ್ 5, ಹೃತಿಕ್ ಶಕೀನ್ 2 ವಿಕೆಟ್ ಪಡೆದರೆ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಲಿಫಾ ಎನ್ಟಾಂಜಿ 4, ಅಂಡೈಲ್ ಮೋಕಕಾನೆ 2, ಮ್ಯಾಥ್ಯೂ ಮಾಂಟ್ಗೊಮೆರಿ 3 ವಿಕೆಟ್ ಪಡೆದು ಬೌಲಿಂಗ್‌ಗಾಗಿ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications