For Quick Alerts
ALLOW NOTIFICATIONS  
For Daily Alerts
 

ಈ ಲೆಕ್ಕಾಚಾರದಲ್ಲಿ ಜಡೇಜಾ, ಸುಂದರ್‌ಗಿಂತಲೂ ಹಿಂದಿದ್ದಾರೆ ಯಶಸ್ವಿ ಜೈಸ್ವಾಲ್‌

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಪಂದ್ಯ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸುವ ಇರಾದೆಯನ್ನು ಹೊಂದಿದೆ. ಟೀಮ್ ಇಂಡಿಯಾದ ಪರ ಸ್ಟಾರ್ ಆಟಗಾರರು ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಇನ್ನು ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರು ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ನಿಜಕ್ಕೂ ತಂಡಕ್ಕೆ ನುಂಗಲಾರದ ತುತ್ತಾಗಿದೆ. ಯಶಸ್ವಿ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಜವಾಬ್ದಾರಿ ಮರೆತು ಬ್ಯಾಟ್ ಮಾಡಿದರು. ಅಲ್ಲದೆ ಲೂಸ್‌ ಶಾಟ್‌ಗಳನ್ನು ಪ್ರಯೀಗಿಸಿ ಔಟ್ ಆದರು. ಆ ಬಳಿಕ ಇವರ ಬ್ಯಾಟಿಂಗ್ ಮೇಲೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಯಶಸ್ವಿ ಜೈಸ್ವಾಲ್‌ ಮ್ಯಾಚೆಂಸ್ಟರ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಕ್ರಿಸ್‌ ವೋಕ್ಸ್‌ ತೋಡಿದ ಖೆಡ್ಡಾಗೆ ಬಲಿಯಾದರು. 311 ರನ್‌ಗಳ ಹಿನ್ನಡೆ ಅನುಭವಿಸುತ್ತಿದ್ದ ಭಾರತ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿತು.

Jaiswal Trails Jadeja in Balls Faced A Look at India s Batting Order

23 ವರ್ಷದ ಯಶಸ್ವಿ ಜೈಸ್ವಾಲ್‌ ಈ ಸರಣಿಯಲ್ಲಿ ಆಡಿದ ನಾಲ್ಕಯ ಪಂದ್ಯಗಳ 8 ಇನಿಂಗ್ಸ್‌ಗಳಲ್ಲಿ 36.37ರ ಸರಾಸರಿಯಲ್ಲಿ 425 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕಗಳು ಸಹ ಸೇರಿವೆ. ಆರಂಭಿಕರಾಗಿ ನೆಲಕಚ್ಚಿನಿಂತು ಬಿಗ್ ಸ್ಕೋರ್ ಕಟ್ಟುವ ಭರವಸೆಯ ಮೂಡಿಸಬೇಕಿದ್ದ ಯಶಸ್ವಿ, ಈ ಸರಣಿಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದಾರೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಈ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟರ್‌ಗಳನ್ನು ನೋಡಿದಾಗ ಶುಭಮನ್‌ ಗಿಲ್‌ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು 1106 ಎಸೆತಗಳನ್ನು ಎದುರಿಸಿದ್ದರು. ಇನ್ನು ಕೆಎಲ್ ರಾಹುಲ್‌ 998 ಎಸೆತಗಳನ್ನು ಎದುರಿಸಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನ ರವೀಂದ್ರ ಜಡೇಜಾ ಇದ್ದುಇವರು 847 ಎಸೆತಗಳನ್ನು ಎದುರಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟರ್ಸ್‌

ಶುಭಮನ್‌ ಗಿಲ್‌, 1106 ಎಸೆತ
ಕೆಎಲ್ ರಾಹುಲ್‌, 998 ಎಸೆತ
ರವೀಂದ್ರ ಜಡೇಜಾ, 847 ಎಸೆತ
ರಿಷಭ್‌ ಪಂತ್‌, 617 ಎಸೆತ
ವಾಷಿಂಗ್ಟನ್‌ ಸುಂದರ್‌, 486 ಎಸೆತ
ಯಶಸ್ವಿ ಜೈಸ್ವಾಲ್‌, 425 ಎಸೆತ

ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಲೆಕ್ಕಾಚಾರದಲ್ಲಿ ರವೀಂದ್ರ ಜಡೇಜಾ ಸ್ಟಾರ್ ಬ್ಯಾಟರ್‌ಗಳಾದ ರಿಷಭ್‌ ಪಂತ್‌ ಹಾಗೂ ಯಶಸ್ವಿ ಜೈಸ್ವಾಲ್‌ ಅವರಿಗಿಂತಲೂ ಮುಂದಿದ್ದಾರೆ. ಇದೇ ಸ್ಥಿರ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ಟೀಮ್ ಇಂಡಿಯಾ ಸರಣಿಯಲ್ಲಿ ಗೆಲುವು ದಾಖಲಿಸಿ, ಸರಣಿಯಲ್ಲಿ ಸಮಬಲ ಸಾಧಿಸಬಹುದು.

Story first published: Tuesday, July 29, 2025, 13:27 [IST]
Other articles published on Jul 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+