Stunning Catch: ಜೇಕ್ ಫ್ರೇಸರ್ ಬೌಂಡರಿಯಲ್ಲಿ ಅದ್ಭುತ ಕ್ಯಾಚ್: ಇಲ್ಲಿದೆ ವಿಡಿಯೋ
ವಿಶಾಖಪಟ್ಟಣಂನಲ್ಲಿ ದೆಹಲಿ ತನ್ನ ತವರಿನ ಎರಡನೇ ಪಂದ್ಯವನ್ನು ಆಡಿತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್‌ಗಳು ಎಸ್‌ಆರ್‌ಎಚ್ ತಂಡದ ಬಿಗುವಿನ ಬ್ಯಾಟಿಂಗ್ ಲೈನ್ ಅಪ್ ಅನ್ನು ಧ್ವಂಸ ಗೊಳಿಸಿತು. ಎಲ್ಲರ ನಿರೀಕ್ಷೆಗಳು ತಲೆ ಕೆಳಗಾದವು. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಬ್ಬರಿಸಿತು. 18ನೇ ಆವೃತ್ತಿಯ ಐಪಿಎಲ್‌ನ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಡೆಲ್ಲಿ ಅಬ್ಬರಿಸಿತು.
18ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಎಸ್‌ಆರ್‌ಎಚ್ 18.4 ಓವರ್‌ಗಳಲ್ಲಿ 163 ರನ್‌ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ಡೆಲ್ಲಿ 16 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿ ಅಬ್ಬರಿಸಿತು. ಈ ಗೆಲುವಿನ ಮೂಲಕ ಡೆಲ್ಲಿ ಆಡಿದ 2 ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭರವಸೆಯ ಆಟಗಾರ ಅನಿಕೇತ್ ವರ್ಮಾ ಅವರು ಆರ್ಭಟಿಸಿದರು. ಈ ವೇಳೆ 41 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಾಯದಿಂದ 74 ರನ್ ಬಾರಿಸಿ ಮಿಂಚಿದರು. ಈ ವೇಳೆ ಇವರಿಗೆ ಕುಲ್‌ದೀಪ್ ಯಾದವ್ ಖೆಡ್ಡಾ ತೋಡಿದರು. ಈ ವೇಳೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಬೌಂಡರಿ ಲೈನ್ ಅಲ್ಲಿ ಅಮೋಘ ಕ್ಯಾಚ್ ಪಡೆದರು.
ಅಮೋಘ ಕ್ಯಾಚ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಕ್ಯಾಚ್ ಪಡೆದಿದ್ದಾರೆ. 15.5 ಓವರ್‌ಗಳಲ್ಲಿ ಕುಲ್‌ದೀಪ್ ಯಾದವ್ ಶಾರ್ಟ್-ಆಫ್-ಲೆಂಗ್ತ್ ಎಸೆತವನ್ನು ಡಿಪ್ ಮಿಡ್‌ವಿಕೆಟ್‌ನತ್ತ ಬಿಗ್ ಸಿಕ್ಸರ್‌ಗೆ ಮುಂದಾದರು. ಆದರೆ ಈ ವೇಳೆ ಇದೇ ಕ್ಷೇತ್ರದಲ್ಲಿ ಫೀಲ್ಡ್ ಮಾಡ್ತಾ ಇದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಗಾಳಿಯಲ್ಲಿ ನೆಗೆದು ಅಮೋಘ ಕ್ಯಾಚ್ ಪಡೆದರು. ಈ ಮೂಲಕ ಹೈದರಾಬಾದ್ 8 ವಿಕೆಟ್ ಕಳೆದುಕೊಂಡಿತು.
ಅನಿಕೇತ್ ವರ್ಮಾ ಈ ಶಾಟ್‌ನಲ್ಲಿ ಸಾಕಷ್ಟು ಫೋರ್ಸ್ ಇರಲಿಲ್ಲ. ಈ ಕ್ಯಾಚ್‌ನ್ನು ಅಮೋಘ ಪ್ರದರ್ಶನ ನೀಡಿದ ಜ್ಯಾಕ್ ಫ್ರೇಸರ್ ಅಬ್ಬರಿಸಿದರು. ಇದಕ್ಕೂ ಮೊದಲು, ಜ್ಯಾಕ್ ಫ್ರೇಸರ್ ಕೂಡ ಇದೇ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಕ್ಯಾಚ್ ಹಿಡಿದಿದ್ದರು. ಅವರ ಕ್ಯಾಚ್‌ನ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅನಿಕೇತ್ ಅವರು ಬಿಟ್ಟಂತೆ ಹೆನ್ರಿಕ್ ಕ್ಲಾಸೆನ್ 32 ರನ್ ಮತ್ತು ಟ್ರಾವಿಸ್ ಹೆಡ್ 22 ರನ್ ಗಳಿಸಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತೆಂದರೆ, ತಂಡದ ಎಂಟು ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಗಡಿ ದಾಟಲು ಸಾಧ್ಯವಾಗಲಿಲ್ಲ.
ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜ್ಯಾಕ್ ಫ್ರೇಸರ್ ಹಾಗೂ ಫಾಫ್ ಡುಪ್ಲೇಸಿಸ್ ಜೋಡಿ ಮೊದಲ ವಿಕೆಟ್‌ಗೆ 81 ರನ್ ಸಿಡಿಸಿದರು. ಜ್ಯಾಕ್ ಫ್ರೇಸರ್ 38, ಫಾಫ್ ಡುಪ್ಲೇಸಿಸ್ 50, ಅಭಿಷೇಕ್ ಪೋರೆಲ್ ಅಜೇಯ 34, ಟ್ರಿಸ್ಟಾನ್ ಸ್ಟಬ್ಸ್ ಅಜೇಯ 21 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications