IPL 2026 Auction: ಹರಾಜಿನಲ್ಲಿರುವ ಟಾಪ್ 5 ಹಿರಿಯ ಆಟಗಾರರು
ಡಿಸೆಂಬರ್ 16 ರಂದು ಐಪಿಎಲ್ 2026ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯಲಿದೆ. ಈ ಹರಾಜಿಗೆ ಹಲವು ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದರು. ಒಟ್ಟು 1355 ಆಟಗಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಆದರೆ ಬಿಸಿಸಿಐ ಆಟಗಾರರ ಹೆಸರುಗಳನ್ನು ಶಾರ್ಟ್ ಲೀಸ್ಟ್ ಮಾಡಿದ್ದು 350ಕ್ಕೆ ಇಳಿಸಿದೆ. ಯುವ ಆಟಗಾರರೇ ಹೆಚ್ಚಾಗಿ ಕಾಣಿಸಿಕೊಳ್ಳುವ ಚುಟುಕು ಫಾರ್ಮೆಟ್‌ನಲ್ಲಿ ಹಿರಿಯ ಆಟಗಾರರು ಸಹ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಹಿರಿಯ ಆಟಗಾರರ ಪಟ್ಟಿ ಇಲ್ಲಿದೆ.
ಈ ಬಾರಿಯ ಹರಾಜಿನಲ್ಲಿ ಅತಿ ಹೆಚ್ಚು ವಯಸ್ಸಾದ ಆಟಗಾರರ ಪಟ್ಟಿಯಲ್ಲಿ ಮಧ್ಯ ಪ್ರದೇಶದ ಜಲಜ್ ಸಕ್ಸೇನಾ (Jalaj Saxena) ಅವರಿಗೆ ಮೊದಲ ಸ್ಥಾನ. ಇವರಿಗೆ ಸದ್ಯ 38 ವರ್ಷ 364 ದಿನಗಳು. ಹರಾಜು ಆರಂಭವಾಗುವ ವೇಳೆಗೆ ಇವರು 39 ವರ್ಷವನ್ನು ತಲುಪಿರುತ್ತಾರೆ. ಇವರು ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ. ಇವರು ರಣಜಿ ಟ್ರೋಫಿಯಲ್ಲಿ 7202 ರನ್ ಬಾರಿಸಿದ್ದು, 496 ವಿಕೆಟ್ ಕಬಳಿಸಿದ್ದಾರೆ. ಮೂಲ ಬೆಲೆ ₹40 ಲಕ್ಷ.

ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿರುವ ಎರಡನೇ ಆಟಗಾರ ಕರಣ್ ಶರ್ಮಾ (Karn Sharma). ಇವರು ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅಲ್ಲದೆ ಇವರಿಗೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಇದೆ. ಇವರಿಗೆ ಸದ್ಯ 38 ವರ್ಷ 53 ದಿನಗಳಾಗಿವೆ. ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅನುಭವ ಇವರಿಗಿದ್ದು, ಇವರು ಐಪಿಎಲ್‌ನಲ್ಲಿ 83 ವಿಕೆಟ್ ಕಬಳಿಸಿದ್ದಾರೆ. ಇವರ ಮೂಲ ಬೆಲೆ ₹30 ಲಕ್ಷ.
ಭಾರತದ ಅನುಭವಿ ವೇಗದ ಬೌಲರ್ ಉಮೇಶ್ ಯಾದವ್ (Umesh Yadav) ಸಹ ಹರಾಜು ಪಟ್ಟಿಯಲ್ಲಿದ್ದಾರೆ. ಇವರು ಸಹ ಐಪಿಎಲ್‌ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. ಅಲ್ಲದೆ ಭಾರತದ ಪರ ಆಡಿದ ಅಪಾರ ಅನುಭವ ಇವರಿಗೆ ಇದೆ. ಇವರು ಐಪಿಎಲ್‌ನಲ್ಲಿ 144 ವಿಕೆಟ್ ಪಡೆದಿದ್ದು, ಇವರ ಮೂಲ ಬೆಲೆ ₹1 ಕೋಟಿ ಆಗಿದೆ.
ವಿದೇಶಿ ಆಟಗಾರರಿಗೂ ಸ್ಥಾನ
ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ವಯಸ್ಸಾದ ವಿದೇಶಿ ಆಟಗಾರರು ಇದ್ದಾರೆ. ಇದರಲ್ಲಿ ಇಂಗ್ಲೆಂಡ್ ತಂಡದ ರಿಚರ್ಡ್ ಗ್ಲೀಸನ್ (Richard Gleeson) ಮೊದಲ ಸ್ಥಾನ. ಇವರಿಗೆ 38 ವರ್ಷ 10 ದಿನಗಳಾಗಿದ್ದು, ಮಧ್ಯಮ ವೇಗದ ಬೌಲಿಂಗ್‌ನಿಂದ ಹೆಸರುವಾಸಿ. ಇವರ ಮೂಲ ಬೆಲೆ 75 ಲಕ್ಷ ರೂ. ಆಗಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಡ್ವೇನ್ ಪ್ರಿಟೋರಿಯಸ್ (Dwaine Pretorius) ₹1 ಕೋಟಿ ಮೂಲ ಬೆಲೆಯಿಂದ ಹರಾಜು ಅಂಗಳ ಪ್ರವೇಶಿಸಲಿದ್ದಾರೆ. ಇವರು ದಕ್ಷಿಣ ಆಫ್ರಿಕಾದ ಭರವಸೆಯ ಆಲ್‌ರೌಂಡರ್‌ಗಳಲ್ಲಿ ಒಬ್ಬರು. ಇವರಿಗೆ ಈಗ 36 ವರ್ಷ 259 ದಿನ. ಇವರಿಗೂ ಐಪಿಎಲ್‌ನಲ್ಲಿ ಆಡಿದ ಅನುಭವ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications