ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ವಿರಾಟ್ ತಮ್ಮ ಎರಡನೇ ತವರು ಎಂದೇ ಕರೆಯುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ 9 ಎಸೆತ ಎದುರಿಸಿ ಸೊನ್ನೆ ಸುತ್ತಿದರು.
ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನು ಬಿಟ್ಟು ಮೂರನೇ ಸ್ಥಾನದಲ್ಲಿ ಬ್ಯಾಟ್ ಮಾಡಿದರು. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ವಿರಾಟ್ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಒಂಬತ್ತು ಎಸೆತಗಳನ್ನು ಎದುರಿಸಿ ನ್ಯೂಜಿಲೆಂಡ್ ವೇಗಿ ವಿಲಿಯಂ ಒರೊರ್ಕೆಗೆ ಬಲಿಯಾದರು. ಕೊಹ್ಲಿ ಔಟ್ ಮಾಡಲು ವೇಗಿ ಉತ್ತಮ ಬೌನ್ಸ್ ಎಸೆತವನ್ನು ಟ್ರೈ ಮಾಡಿದರು. ವಿರಾಟ್ ಅವರ ಗ್ಲೌಸ್ ತಾಗಿದ ಚೆಂಡು ಗ್ಲೇನ್ ಫಿಲಿಪ್ಸ್ ರತ್ತ ಹೋಯಿತು. ಫಿಲಿಪ್ಸ್ ಅದ್ಭುತವಾಗಿ ಡೈ ಮಾಡಿ ಕ್ಯಾಚ್ ಪಡೆದರು.

ಬಾಂಗ್ಲಾದೇಶದ ವಿರುದ್ಧವೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ವಿರಾಟ್, ನ್ಯೂಜಿಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲೂ ನಿರಾಸೆಯ ಕಡಲಿನಲ್ಲಿ ಪಯಾಣ ಬೆಳೆಸಿದರು. ಬಾಂಗ್ಲಾ ವಿರುದ್ಧ ಚೆನ್ನೈ ಹಾಗೂ ಕಾನ್ಪುರ್ ಟೆಸ್ಟ್‌ಗಳಲ್ಲಿ ವಿರಾಟ್ ಅರ್ಧಶತಕವನ್ನೂ ಸಹ ಸಿಡಿಸಿರಲಿಲ್ಲ. ಇದೇ ಕಳಪೆ ಫಾರ್ಮ್‌ನ್ನು ವಿರಾಟ್ ತಮ್ಮ ಎರಡನೇ ತವರು ನೆಲದಲ್ಲೂ ಮುಂದುವರೆಸಿದರು.
ವಿರಾಟ್ ಕೊಹ್ಲಿ ಕಳೆದ ಏಳು ಇನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿದೆ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಆದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಎಂಬ ಬ್ಯಾಟಿಂಗ್ ಸ್ವರ್ಗದಲ್ಲಿ ವಿರಾಟ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು, ಅಭಿಮಾನಿಗಳಿಗೆ ಬೇಸರ ತರಿಸಿದೆ.
ಕೊಹ್ಲಿ ಅವರ ಈ ಪ್ರದರ್ಶನ ಟೀಮ್ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಆಯ್ದುಕೊಂಡಾಗ ಕಂಡು ಬಂದಿತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್ ಟೀಮ್ ಇಂಡಿಯಾದ ಸ್ಟಾರ್ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಮಧ್ಯಮ ಕ್ರಮಂಕಾದ ಬ್ಯಾಟರ್‌ಗಳು ಒತ್ತಡಕ್ಕೆ ಒಳಗಾದರು.
ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೊನ್ನೆ ಸುತ್ತಿದರು. ಕ್ರಿಕೆಟ್‌ನ ಮೂರು ಫಾರ್ಮೆಟ್‌ಗಳಲ್ಲಿ ವಿರಾಟ್ ಕೊಹ್ಲಿ ಒಟ್ಟು 38 ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಔಟ್ ಆಗಿದ್ದಾರೆ. ಈಗ ಡಕ್‌ಔಟ್ ವಿಚಾರದಲ್ಲೂ ಹರ್ಭಜನ್ ಸಿಂಗ್ ಅವರಿಗಿಂತ ಕೊಹ್ಲಿ ಮುಂದೆ ಹೋಗಿದ್ದಾರೆ. ಭಾರತದ ಪರ ಅತಿ ಹೆಚ್ಚು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೊನ್ನೆ ಸಾಧನೆ ಮಾಡಿದ ಕೀರ್ತಿ ವೇಗಿ ಜಹೀರ್ ಖಾನ್ ಹೆಸರಿನಲ್ಲಿದೆ. ಇವರು ಒಟ್ಟು 43 ಬಾರಿ ಶೂನ್ಯಕ್ಕೆ ಔಟ್ ಆಗಿದ್ದಾರೆ.
ಇತ್ತೀಚೆಗೆ ಲಂಡನ್ ನಿಂದ ಭಾರತಕ್ಕೆ ಬಂದಿಳಿದ ಕೊಹ್ಲಿಯನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕಳೆದ ಕೆಲವು ದಿನಗಳಿಂದ ತಮ್ಮ ಕುಟುಂಬದ ಜೊತೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಕೊಹ್ಲಿ ಔಟ್ ಆಗುತ್ತಿದ್ದಂತೆ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿವೆ.