ಕುಡಿದು ವಾಹನ ಚಲಾವಣೆ, ಆಸೀಸ್ ಕ್ರಿಕೆಟರ್ ಜೇಮ್ಸ್ ಗೆ ಶಿಕ್ಷೆ
ಲಂಡನ್, ಆಗಸ್ಟ್ 06: ಆಸ್ಟ್ರೇಲಿಯಾದ ಆಲ್ ರೌಂಡರ್ ಜೇಮ್ಸ್ ಫೌಲ್ಕನರ್ ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದ ಮೇಲೆ ನಿಷೇಧಕ್ಕೆ ಒಳಗಾಗಿರುವ ಸುದ್ದಿ ನೆನಪಿರಬಹುದು. ಈ ಪ್ರಕರಣ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಎರಡು ವರ್ಷಗಳ ಕಾಲ ವಾಹನ ಚಲಾಯಿಸದಂತೆ ನಿಷೇಧಿಸಿದೆ ಹಾಗೂ 10,000 ಪೌಂಡ್ ದಂಡ ವಿಧಿಸಿದೆ.
ಟಾಸ್ಮೇನಿಯಾ ಆಟಗಾರ ಟಿಮ್ ಪೈನ್ ಜತೆ ಮ್ಯಾಂಚೆಸ್ಟರ್ ನಗರದಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸಿದ್ದರು. ಇದಲ್ಲದೆ ಫೌಲ್ಕನರ್ ಅವರು ಕುಡಿದ ಮತ್ತಿನಲ್ಲಿ ಮುಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು. [ಆಸ್ಟೇಲಿಯಾದ ಕುಡುಕ ಕ್ರಿಕೆಟರ್ ಗೆ ನಿಷೇಧ]
ಈ ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಮಾರ್ಕ್ ಹಾಡ್ ಫೀಲ್ಡ್ ಅವರು ಮೇಲ್ಕಂಡ ಆದೇಶ ಹೊರಡಿಸಿದೆ. ನ್ಯಾಯಾಲಯದ ಮುಂದೆ ತಲೆ ತಗ್ಗಿಸಿ ನಿಂತ ವಿಶ್ವಕಪ್ ವಿಜೇತ ತಂಡದ ಸದಸ್ಯ ಜೇಮ್ಸ್, ನನಗೆ ಈ ಘಟನೆಯಿಂದ ತೀವ್ರ ಮುಜುಗರವಾಗಿದೆ ಕ್ಷಮಿಸಿ ಎಂದು ಕೋರಿದರು.

ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿದ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ, ಶಿಸ್ತು ಪಾಲನೆ ಮಾಡದೇ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ 4 ಪಂದ್ಯಗಳಿಂದ ಅಮಾನತುಗೊಳಿಸಿತ್ತು. ಲಾಂಕ್ಶೈರ್ ತಂಡದ ಪರ ಆಡುತ್ತಿರುವ ಫೌಲ್ಕ್ನರ್ ಅವರು ಕೌಂಟಿ ಕ್ಲಬ್ ಕ್ರಿಕೆಟ್ ಪಂದ್ಯಗಳಲ್ಲಿ ಆಡುವಂತಿಲ್ಲ.
ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿ ಹಾಗೂ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಫೌಲ್ಕನರ್ ಕಳೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯಕಾರಿ ಪ್ರಧಾನ ಮ್ಯಾನೇಜರ್ ಪ್ಯಾಟ್ ಹೋವರ್ಡ್ ಅವರು ಹೇಳಿದ್ದಾರೆ.(ಎಎಫ್ ಪಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications