ನಿರ್ಣಾಯಕ ಒಡಿಐಗೆ ಆಂಗ್ಲರ ಪಡೆಗೆ ಹೊಸ ಆಟಗಾರ

ಲಂಡನ್, ಜುಲೈ 15 : ಪ್ರವಾಸಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡದಲ್ಲಿ ಬದಲಾವಣೆ ಮಾಡಲಾಗಿದ್. ಡೇವಿಡ್ ಮಲಾನ್ ಹಾಗೂ ಸ್ಯಾಮ್ ಕುರನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಜೇಮ್ಸ್ ವಿನ್ಸ್ ಅವರನ್ನು ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಜೇಮ್ಸ್ ವಿನ್ಸ್ ಆಯ್ಕೆ ಪ್ರಶ್ನಾರ್ಹವಾಗಿದೆ. ಹ್ಯಾಂಪ್ ಶೈರ್ ನಾಯಕ ವಿನ್ಸ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ತಂಡದಿಂದಲೂ ಕೈಬಿಡಲಾಗಿತ್ತು.
ಮಂಗಳವಾರ(ಜುಲೈ 17)ದಂದು ಹೆಡಿಂಗ್ಲೆಯಲ್ಲಿ ನಡೆಯಲಿರುವ ಭಾರತ ವಿರುದ್ಧದದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವಿನ್ಸ್ ಆಡುವುದು ಖಚಿತವಾಗಿದೆ.
ಬ್ಯಾಟ್ಸ್ ಮನ್ ಮಲಾನ್ ಹಾಗೂ ಆಲ್ ರೌಂಡರ್ ಸ್ಯಾಮ್ ಕುರನ್ ಅವರು ತಂಡದಲ್ಲಿದ್ದರೂ ಮೊದಲೆರಡು ಪಂದ್ಯಗಳಲ್ಲಿ ಆಡುವ XI ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಸೋಮವಾರದಿಂದ ಆರಂಭವಾಗಲಿರುವ ಭಾರತ ಎ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. ಅಲೆಸ್ಟರ್ ಕುಕ್, ಕ್ರಿಸ್ ವೋಕ್ಸ್ ಅವರು ಕೂಡಾ ತಂಡದಲ್ಲಿದ್ದಾರೆ.
ಟೆಸ್ಟ್ ತಂಡದ ನಾಯಕ ಜೋ ರೂಟ್ ಅವರು ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ, ಇಂಗ್ಲೆಂಡಿಗೆ 86ರನ್ ಗಳ ಜಯ ಸಿಗುವಂತೆ ಮಾಡಿದರು. ಟ್ರೆಂಟ್ ಬ್ರಿಜ್ ನಲ್ಲಿ ಭಾರತ ಗೆದ್ದರೆ, ಲಾರ್ಡ್ಸ್ ನಲ್ಲಿ ಆಂಗ್ಲರು ಜಯಭೇರಿ ಬಾರಿಸಿದರು. ಹೆಡಿಂಗ್ಲಿನಲ್ಲಿ ಅಂತಿಮ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications